BJP ಮಾರ್ಚ್ 5ಕ್ಕೆ ಪುತ್ತೂರಿನಲ್ಲಿ ಬಿಜೆಪಿ ಎಸ್ಟಿ ಮೋರ್ಚಾದ ದ.ಕ ಜಿಲ್ಲಾ ಮಟ್ಟದ ಸಮಾವೇಶ  : ಎನ್.ಎಸ್ ಮಂಜುನಾಥ ನಾಯ್ಕ

WhatsApp Image 2023-03-03 at 19.02.26
Ad Widget

Ad Widget

Ad Widget

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಎಸ್ಟಿ ಮೋರ್ಚಾದ  ಸಮಾವೇಶ  ಪುತ್ತೂರಿನ  ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ  ಮಾ.5ರಂದು  ನಡೆಯಲಿದೆ. ಸಮಾವೇಶವು ಎಸ್ಟಿ ಸಮುದಾಯ ಬಿಜೆಪಿ ಕಡೆಗಿದೆ ಎಂಬ ಸಂದೇಶ ರವಾನಿಸಲಿದೆ. ಇದರಲ್ಲಿ 5000ಕ್ಕೂ ಮಿಕ್ಕಿ  ಎಸ್ಟಿ ಮೋರ್ಚಾದ  ಸದಸ್ಯರು  ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ ನಾಯ್ಕರವರು ತಿಳಿಸಿದರು

Ad Widget

ಪುತ್ತೂರಿನಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಭಾರತದ ಅತ್ಯುನ್ನುತ ರಾಷ್ಟ್ರಪತಿ ಸ್ಥಾನವನ್ನು ದ್ರೌಪದಿ ಮುರ್ಮು ರವರಿಗೆ ಹಾಗೂ ಅಮೈ ಮಹಾಲಿಂಗ ನಾಯ್ಕರಿಗೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಬಿಜೆಪಿಯು   ಎಸ್ಟಿ ಸಮುದಾಯವನ್ನು ಗೌರವಿಸಿದೆ. ಅಲ್ಲದೇಸಮುದಾಯದ ಅಭಿವೃದ್ದಿಗೆ ನಿರಂತರವಾಗಿ ಕಾರ್ಯಪ್ರವೃತ್ತವಾಗಿದೆ ಎಂದರು.

Ad Widget

Ad Widget

ರಾಜ್ಯ ಸರಕಾರ ಎಸ್.ಟಿ. ಸಮುದಾಯದ ಮಿಸಲಾತಿಯನ್ನು ಶೆ. 3 ರಿಂದ 7ಕ್ಕೆ ಹೆಚ್ಚಿಸಿದೆ ಮಾತ್ರವಲ್ಲದೆ ಬಿಪಿಎಲ್ ಕುಟುಂಬಸ್ಥರಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಿದೆ.  ಪರಿಶಿಷ್ಟ ಪಂಗಡದ ಸಚಿವಾಲಯ ಸ್ಥಾಪನೆ, ವಾಲ್ಮೀಕಿ ನಿಗಮ ಸ್ಥಾಪನೆ, ಮುಂತಾದ ಹಲವಾರು ಯೋಜನೆಯನ್ನು ಬಿಜೆಪಿ  ಸರಕಾರ ಒದಗಿಸಿದೆ. ಈ ಕುರಿತು ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಬೃಹತ್ ಸಮಾವೇಶ ನಡೆಯಲಿದೆ.

Ad Widget

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ರವರ ಅಧ್ಯಕ್ಷತೆಯಲ್ಲಿ  ಬೆಳಿಗ್ಗೆ ಗಂಟೆ 10ಕ್ಕೆ ಆರಂಭಗೊಳ್ಲಲಿರುವ ಸಮಾವೇಶದಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು ಪಾಲ್ಗೊಳ್ಳಲಿದ್ದಾರೆ.  ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್, ಎಸ್.ಅಂಗಾರರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು  

Ad Widget

Ad Widget

ಉಚಿತ ವಿದ್ಯುತ್‌ ಕಾಂಗ್ರೆಸಿನದು ಭರವಸೆ ಮಾತ್ರ

ಬಿಜೆಪಿ  ಎಸ್ಟಿ ಸಮುದಾಯದ ಬಿಪಿಎಲ್‌ ಕುಟುಂಬಗಳಿಗೆ ಮಾತ್ರ,  ಅದು ಕೂಡ ಕೇವಲ 75 ಯುನಿಟ್‌ ಉಚಿತ  ವಿದ್ಯುತ್‌ ಕೊಡುವುದಾಗಿ ತಿಳಿಸಿದೆ ಆದರೆ, ಕಾಂಗ್ರೆಸ್‌ ಪ್ರತಿ ಕುಟಂಬಕ್ಕೂ  200 ಯುನಿಟ್‌ ಉಚಿತ ವಿದ್ಯುತ್‌  ಹಾಗೂ ಮಾಸಿಕ 2 ಸಾವಿರ ರೂಪಾಯಿ ನೀಡುವ ಘೋಷಣೆಯ ಕುರಿತಾಗಿ  ಬಂದ ಪ್ರಶ್ನೆಗೆ ಉತ್ತರಿಸಿದ ಅವರು “ ಕಾಂಗ್ರೆಸ್‌ ನವರದು ಕೇವಲ ಭರವಸೆ ಮಾತ್ರ.  ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಅವರು ಘೋಷಿಸಿದನ್ನು ಈವರೆಗೆ ಕೊಟ್ಟಿಲ್ಲ . ಆದರೇ ಬಿಜೆಪಿ.ಈಗಾಗಲೇ ಬಜೆಟ್‌ ನಲ್ಲಿ ಘೋಷಣೆ ಮಾಡಿದೆ ಎಂದು ಮಂಜುನಾಥ್‌ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ, ಎಸ್.ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲು ” 2000 ರೂ ಎಲ್ಲರಿಗೂ ಕೊಡುವುದು ಸರಿಯಲ್ಲ . ಹೀಗೆ ಉಚಿತ ಕೊಟ್ಟು ಸಮಾಜವನ್ನು ಹಾಳು ಮಾಡುವುದು ಎಷ್ಟು ಸರಿ . ಬಿಜೆಪಿ ಎಸ್ಟಿ ಸಮುದಾಯದ ಬಿಪಿಎಲ್‌ ಕುಟುಂಬಗಳಿಗೆ ಮಾತ್ರ ನೀಡುತ್ತಿದೆ ಎಂದರು

 ಪತ್ರಿಕಾಗೋಷ್ಠಿಯಲ್ಲಿ ಎಸ್.ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲು, ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಎರ್ಮೆನಾಡು, ಹರೀಶ್ ಬಿಜತ್ರೆ, ಗ್ರಾಮಾಂತರ ಮಂಡಲದ ಅಧ್ಯಕ್ಷ ಶಿವಪ್ಪ ನಾಯ್ಕ, ಕಾರ್ಯದರ್ಶಿಗಳಾದ ನಾರಾಯಣ ನಾಯ್ಕ ಚಾಕೋಟೆ, ಹರೀಶ್ ನಾಯ್ಕ್ ನೆಕ್ಕಿಲಾಡಿ, ನಗರ ಮಂಡಲದ ಅಧ್ಯಕ್ಷ ಅಶೋಕ್ ಕುಮಾರ್ ಬಲ್ನಾಡು ಉಪಸ್ಥಿತರಿದ್ದರು.

One Response

Leave a Reply

Recent Posts

error: Content is protected !!
%d bloggers like this: