ಪುತ್ತೂರು : ಮಾ 2 : ನೂರುಲ್ ಹುದಾ ಇಸ್ಲಾಮಿಕ್ ಆಕಾಡೆಮಿ ಮಾಡನ್ನೂರು ಇದರ ವಾರ್ಷಿಕ ಮಹಾ ಸಮ್ಮೇಳನ ಹಾಗೂ ಮಜ್ಲಿಸುನ್ನೂರು ಕಾರ್ಯಕ್ರಮವು ಮಾ. 4 ರಂದು ಈಶ್ವರಮಂಗಲ ಸಮೀಪದ ಮಾಡನ್ನೂರಿನ ಶಹೀದೀಯ್ಯ ನಗರದ ಆಕಾಡೆಮಿ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಅಂತರಾಷ್ಟ್ರೀಯ ಯುವ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಪ್ರಭಾಷಣ ನೀಡಲಿದ್ದಾರೆಂದು ಆಕಾಡೆಮಿಯ ವ್ಯವಸ್ಥಾಪಕ ಕೆ. ಯು ಖಲೀಲುರ್ರಹ್ಮಾನ್ ಅರ್ಶದಿ ಕೊಲ್ಪೆ ಹೇಳಿದರು.
ಗುರುವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತಾನಡಿದ ಅವರು, ಶನಿವಾರ ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಆರಂಭದಲ್ಲಿ ಶುಹುದಾ ಮುಖಾಂ ಝೀಯಾರತ್ ನಡೆಯಲಿದೆ. ಸಯ್ಯಿದ್ ಬುರ್ಹಾನ್ ಆಲಿ ತಂಗಲ್ ಆಲ್ ಬುಖಾರಿ ಪ್ರಾರ್ಥಿಸಲಿದ್ದಾರೆ. ಬಳಿಕ ಮಜ್ಲಿಸುನ್ನೂರು ನಡೆಯಲಿದೆ. ಸೈಯ್ಯಿದ್ ಆಹಮದ್ ಪೊಕೋಯ ತಂಗಳ್ ಪುತ್ತೂರು, ಸಮಸ್ತ ಉಲಮಾ ಒಕ್ಕೂಟದ ಸದಸ್ಯರಾದ ಉಸ್ತಾದ್ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ, ಉಸ್ತಾದ್ ಉಸ್ಮಾನುಲ್ ಫೈಝಿ, ಸೈಯ್ಯಿದ್ ಅಮೀರ್ ತಂಗಳ್ ಕಿನ್ಯ, ಸೈಯ್ಯಿದ್ ಬಾತಿಷಾ ತಂಗಳ್, ಮಿತ್ತಬೈಲು ಉಸ್ತಾದ್ ಸುಪುತ್ರ ಇರ್ಷಾದ್ ದಾರಿಮಿ, ಸೈಯ್ಯಿದ್ ಬಾ ಅಲವಿ ತಂಗಳ್ ಕುಕ್ಕಾಜೆ, ಸೈಯ್ಯಿದ್ ಅನಸ್ ತಂಗಳ್ ಗುಂಡಿ ಬಾಗಿಲು, ಸೈಯ್ಯಿದ್ ಹುಸೈನ್ ತಂಗಳ್ ಜಿಫ್ರಿ ತಂಗಳ್, ಸೈಯ್ಯಿದ್ ತಾಹಾ ತಂಗಳ್ ಬೆಳ್ತಂಗಡಿ, ಸೈಯ್ಯಿದ್ ಸಾಲ್ಮರ ತಂಗಳ್, ಸೈಯ್ಯಿದ್ ಅಕ್ರಂ ಆಲಿ ತಂಗಳ್, ಸೈಯ್ಯಿದ್ ಹಬೀರ್ರಹ್ಮಾನ್ ತಂಗಳ್, ಮಾಡನ್ನೂರು ಸಿರಾಜುದ್ದೀನ್ ಫೈಝಿ ಇದರ ನೇತ್ರತ್ವ ವಹಿಸಲಿದ್ದಾರೆ.
ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ವಹಿಸಲಿದ್ದು, ಸೈಯ್ಯಿದ್‌ಕೆ ಎಸ್ ಆಲಿ ತಂಗಳ್ ಕುಂಬೋಲ್ ಉದ್ಘಾಟಿಸಲಿದ್ದಾರೆ ಕಾರ್ಯಕ್ರಮದಲ್ಲಿ ಹಲವಾರು ಪ್ರಮುಖ ಸಾದಾತ್ ಉಲೇಮಾ ಉಮರಾ ನಾಯಕರು, ಚಿಂತಕರು, ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ದ.ಕ ದ ಪ್ರಸಿದ್ದ ಝೀಯಾರತ್ ಕೇಂದ್ರವಾದ ಮಾಡನ್ನೂರಿನಲ್ಲಿರುವ ನೂರುಲ್ ಹುದಾ ಇಸ್ಲಾಮಿಕ್ ಆಕಾಡೆಮಿಯು ಕಳೆದ 8 ವರ್ಷಗಳಿಂದ ಸಮನ್ವಯ ಶಿಕ್ಷಣ ನೀಡುತ್ತಿದ್ದು, ಇದು ಕೇರಳದ ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾಗಿದೆ. ಇಲ್ಲಿ ತರಗತಿಯ ಪಾಠದ ಜತೆಗೆ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದು, ಈ ಮೂಲಕ ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕು ಸದಾಶಯವನ್ನು ಹೊಂದಿದೆ ಎಂದರು.

ಇಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು, ಆಕಾಡೆಮಿಯೂ ಹಲವಾರು ಪ್ರಶಸ್ತಿಗಳಿಗೆ ಪಾತ್ರವಾಗಿದೆ. 2022ರಲ್ಲಿ ಸಬಾಖ್ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿದೆ. ಚಿಗುರು ಎಂಬ ಕನ್ನಡ ದ್ವಿಮಾಸಿಕವನ್ನು ಇಲ್ಲಿಯ ವಿದ್ಯಾರ್ಥಿಗಳು ಹೊರ ತರುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಪಾಠ ಪ್ರವಚನದ ಜತೆಗೆ ಕಲಾ ರಂಗದಲ್ಲೂ ವಿಶೇಷ ಸಾಧನೆಯನ್ನು ಮೆರದಿದ್ದಾರೆ. ಈ ರೆಸಿಡೆನ್ಷಿಯಲ್ ವಿದ್ಯಾಸಂಸ್ಥೆಯಲ್ಲಿ 6ನೇ ತರಗತಿಯಿಂದ ಪ್ರಥಮ ವರ್ಷದ ಪದವಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಪ್ರಸ್ತುತ 332 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಶಿಕ್ಷಣ , ಊಟ ವಸತಿ ಎಲ್ಲವನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಖರ್ಚನ್ನು ದಾನಿಗಳಿಂದ ಸಂಗ್ರಹಿಸಲಾಗುತ್ತಿದ್ದೂ,ಇದಕ್ಕಾಗಿ ಸಂಸ್ಥೆಯೂ ಮಾಸಿಕ 13 ಲಕ್ಷ ವ್ಯಯ ಮಾಡುತ್ತಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಾಂಶುಪಾಲ ಹನೀಫ್ ಹುದವಿ ದೇಲಂಪಾಡಿ, ಬುಶ್ರಾ ಅಬ್ದುಲ್ ಅಝೀಝ್, ಮಂಗಳ ಅಬೂಬಕ್ಕರ್ ಹಾಜಿ, ಸಿಎಚ್ ಅಬ್ದುಲ್ ಅಬ್ದುಲ್ ಅಝೀಝ್ ಹಾಜಿ, ಎನ್ ಎಸ್ ಅಬ್ದುಲಾ ಹಾಜಿ, ಹಿರಾ ಅಬ್ದುಲ್ ಖಾದರ್ ಹಾಜಿ, ಇಬ್ರಾಹಿಂ ಹಾಜಿ ಮಂಡೆಕೋಲು ಅಬ್ದುಲ್ ಖಾದರ್ ಮುಸ್ಲಿಯಾರ್ ಎನ್ , ಹಸೈನರ್ ಎಂಡಿ , ಖಾಲಿದ್ ಬಿ ಎಂ, ನಾಸೀರ್ ಬೆಳ್ಳಾರೆ, ಅಬ್ದುಲ್ ರಹೀಮನ್ ಕಾವು, ಮಹಮ್ಮದ್ ರಫಿಕ್ ಮತ್ತು ಮಹಮ್ಮದ್ ಕುಂಬ್ರ ಉಪಸ್ಥಿತರಿದ್ದರು