ಪುತ್ತೂರು: ಕಾರಿನಿಂದ ಕಸ ಹೊರಗೆ ಬಿಸಾಡಿದ್ದನ್ನು ಹೆಕ್ಕಲು ಹೇಳಿದ ತಾಲೂಕು ವೈದ್ಯಾಧಿಕಾರಿಯಲ್ಲಿ ವಾಗ್ವಾದ ಮಾಡಿದ ಯುವಕನೋರ್ವ ಠಾಣೆಯಲ್ಲಿ ದಂಡ ಕಟ್ಟಿದ ಘಟನೆ ಪುತ್ತೂರಿನಲ್ಲಿ (Puttur) ಫೆ.28ರಂದು ನಡೆದಿದೆ.
ಪುತ್ತೂರಿನ ದರ್ಭೆಯಲ್ಲಿ ಫೆ.28ರ ಸಂಜೆ 6 ಗಂಟೆಗೆ ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ಸಾಗುತಿದ್ದ ಡಸ್ಟರ್ ಕಾರಿನಿಂದ ಕಸ ಹೊರಗೆ ಬಿಸಾಡಿದ್ದಾರೆ.
ಸ್ವಲ್ಪ ಮುಂದೆ ಕಾರನ್ನು ನಿಲ್ಲಿಸಿದಾಗ ದೀಪಕ್ ರೈ ಕಾರಿನಲ್ಲಿದವರಲ್ಲಿ ಬಿಸಾಡಿದ ಕಸ ಹೆಕ್ಕುವಂತೇ ಹೇಳಿದಾಗ ಕಾರಿನಲ್ಲಿದ್ದ ಪರ್ಪುಂಜದ ನಝೀರ್ ಎನ್ನುವ ಯುವಕ ವೈದ್ಯಾಧಿಕಾರಿ ಜೊತೆ ವಾಗ್ವಾದಕ್ಕಿಳಿದ.
ಅಲ್ಲಿದ್ದ ಬೇರೆ ಕಸ ನೀವು ಹೆಕ್ಕಿದರೆ ನಾನು ಈ ಕಸ ಹೆಕ್ಕುತ್ತೇನೆಂದು ಉದ್ದಟತನದ ವರ್ತನೆ ಮೆರೆದಿದ್ದಾನೆ. ಒಟ್ಟಿಗೆ ಇದ್ದ ಹಿರಿಯರೊಬ್ಬರು ಸಮಾಧಾನದಿಂದ ವರ್ತಿಸಿದರು ಈ ಯುವಕ ದೀಪಕ್ ರೈ ಜೊತೆ ಉದ್ದಟತನದಿಂದಲೇ ಮಾತನಾಡಿದ.
ಕೂಡಲೇ ದೀಪಕ್ ರೈ ಗಳು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಕಾರಿನಲ್ಲಿ ಸ್ಥಳದಿಂದ ತೆರಳಿದ. ಕೂಡಲೇ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರಿಗೆ ಘಟನೆಯ ವಿವರ ತಿಳಿದಾಗ ಆ ವಾಹನವನ್ನು ಸಂಪ್ಯದಲ್ಲಿ ತಡೆದರು.
ನಂತರ ನಝೀರ್ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡಿದ ಪ್ರಕರಣದ ಮೇಲೆ ದಂಡ ವಿಧಿಸಲಾಯಿತು.