Bantwala | ಬಂಟ್ವಾಳ: ಕಾಂಗ್ರೇಸ್ ಕಾರ್ಯಕರ್ತರೇ ನಿರ್ಮಿಸಿದ ಸಾರ್ವಜನಿಕ ಬಸ್ಸು ನಿಲ್ದಾಣ ಲೋಕಾರ್ಪಣೆ – ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿಯ ಸಕ್ರಿಯ ಕಾರ್ಯಕರ್ತರು : ಬಿಜೆಪಿಯ ನಾಯಕರು ಸಹ ನಾನು ಅಭಿವೃದ್ಧಿ ಮಾಡಿಲ್ಲ ಎಂದು ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲ, ಸರ್ವ ಧರ್ಮದ ಜನರನ್ನು ಪ್ರೀತಿಸುತ್ತಿದ್ದ ನನ್ನನ್ನು ಧರ್ಮಾಧಾರಿತ ರಾಜಕೀಯ ಮಾಡಿ ಚುನಾವಣೆಯಲ್ಲಿ ಅಪಪ್ರಚಾರದಿಂದ ಸೋಲಿಸಿದರು -ರಮಾನಾಥ ರೈ

InShot_20230301_174222217
Ad Widget

Ad Widget

Ad Widget

ಬಂಟ್ವಾಳ – ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಮಯದಲ್ಲಿ ಶ್ರೀರಾಮನಗರದ ಆಸ್ಪತ್ರೆಯ ಮುಂಭಾಗದಲ್ಲಿ ಇದ್ದಂತಹ ಸಾರ್ವಜನಿಕ ಬಸ್ಸು ತಗುದಾಣವನ್ನು ತೆರವುಗೊಳಿಸಿದ್ದರು (Bantwala). ಸುಮಾರು ವರ್ಷಗಳು ಸಾರ್ವಜನಿಕರಿಗೆ, ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಆದ ಸಮಸ್ಯೆ ಯನ್ನು ಮನಗಂಡ ವಲಯ ಕಾಂಗ್ರೆಸ್ ಎಲ್ಲಾ ಕಾಂಗ್ರೆಸ್ ಸದಸ್ಯರ ಸಹಾಯದಿಂದ ಸಾರ್ವಜನಿಕರಿಗೆ ಉಪಯೋಗಕ್ಕಾಗಿ ಬಸ್ಸು ನಿಲ್ದಾಣವನ್ನು ನಿರ್ಮಿಸಿದರು.

Ad Widget

ಬಸ್ ನಿಲ್ದಾಣವನ್ನು ಇಂದು ಮಾಜಿ ಸಚಿವ ಬಿ ರಮನಾಥ ರೈ ಅವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ 5000 ಕೋಟಿಗಿಂತಲೂ ಅಧಿಕ ಅನುದಾನ ಬಂಟ್ವಾಳ ಕ್ಷೇತ್ರಕ್ಕೆ ತಂದಿರುವುದಾಗಿ ಹಾಗೂ ಬಂಟ್ವಾಳದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂದರು.

Ad Widget

Ad Widget

ಬಿಜೆಪಿಯ ನಾಯಕರು ಸಹ ರಮನಾಥ ರೈ ಅಭಿವೃದ್ಧಿ ಮಾಡಿಲ್ಲ ಎಂದು ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲ ಹಾಗೂ ಕೊಡಲ್ಲ ಯಾಕೆಂದರೆ ಅವರಿಗೂ ಸಹ ನನ್ನ ಅಭಿವೃದ್ಧಿ ಬಗ್ಗೆ ಗೊತ್ತು, ಅಭಿವೃದ್ಧಿ ವಿಷಯದಲ್ಲಿ ಜನರ‌ ಮನಸ್ಸನ್ನು ಬದಲಾಯಿಸಲು ಸಾಧ್ಯವಾಗದೇ ಸರ್ವ ಧರ್ಮದ ಜನರನ್ನು ಪ್ರೀತಿಸುತ್ತಿದ್ದ ನನ್ನನ್ನು ಧರ್ಮಾಧಾರಿತ ರಾಜಕೀಯ ಮಾಡಿ ಕಳೆದ ಬಾರಿ ಚುನಾವಣೆಯಲ್ಲಿ ಅಪಪ್ರಚಾರದಿಂದ ಸೋಲಿಸಿದರು.

Ad Widget

ಆದರೆ ಈಗ ಇವರ ಅಧಿಕಾರವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆಗದ್ದನ್ನು ಮನಗಂಡು ಕ್ಷೇತ್ರದ ಜನರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಯೋಜಿಸಿದ್ದು ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೆ ಗೆದ್ದು ಬಂದು ಎಂದಿಗೂ ಕೇಳರಿಯದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತೇನೆ ಎಂದರು.

Ad Widget

Ad Widget

ಕಾಂಗ್ರೆಸ್ ಕಾರ್ಯಕರ್ತರು ಸೇರಿ ಸಾರ್ವಜನಿಕರಿಗೆ ಬಸ್ಸು ನಿಲ್ದಾಣವನ್ನು ನಿರ್ಮಿಸಿದಂತ ಸಾಧನೆ ಎಲ್ಲರೂ ಮೆಚ್ಚುವಂಥದ್ದು ಎಂದರು.

ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿಯ ಸಕ್ರಿಯ ಕಾರ್ಯಕರ್ತರು:

ಸಾರ್ವಜನಿಕ ಬಸ್ಸು ತಂಗುದಾಣ ಉದ್ಘಾಟನೆ ಸಮಾರಂಭ ಇವತ್ತು ನೆರವೇರಿತು, ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾದ ಲಕ್ಷ್ಮಣ ಪೂಜಾರಿ ನಾಕುನಾಡು, ಸುಧಾಕರ ಪೂಜಾರಿ ನಾಕುನಾಡು, ಕಳೆದ ಪಂಚಾಯತ್ ಚುನಾವಣೆಗೆ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ ತುಳಸಿ ದುಗಮರಗುಡ್ಡೆ ಕಾಂಗ್ರೆಸ್ ಸೇರ್ಪಡೆಗೊಂಡರು.

ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಆಗದ ಕಾರಣ ಹಾಗೂ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಶಾಸಕ ರಾಜೇಶ್ ನಾಯಕ್ ನಡೆಗೆ ಬೇಸತ್ತು ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರ ಉತ್ತಮ ಕೆಲಸ ಕಾರ್ಯಗಳಿಂದ ಪ್ರೇರಿತಗೊಂಡು ನಾವು ಬಿಜೆಪಿ ಸೇರಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಶೆಣ್ ಖಂಡಿಗ, ಮಾಜಿ ಜಿಲ್ಲಾ ಪಂಚಾಯತ್ ಪದ್ಮಶೇಖರ್ ಜೈನ್, ಪಿಲಾತಬೆಟ್ಟು ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರಾದ ಪುಷ್ಪಲತಾ ಮೋಹನ್ ಸಾಲಿಯನ್, ವನಿತಾ ಆನಂದ, ಲೀಲಾವತಿ ಶೆಟ್ಟಿ ನೆಲ್ವಿಸ್ಟರ್ ಪಿಂಟೊ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಾಲಾಜಿ ರಾವ್, ಮಹಿಳಾ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬೆನ್ನಡಿಟ್ಟ ಡಿಸೋಜಾ, ಪಿಲಾತಬೆಟ್ಟು ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅರುಣ್ ಫರ್ನಾಂಡಿಸ್, ಬೂತು ಕಾಂಗ್ರೆಸ್ ಅಧ್ಯಕ್ಷರಾದ ಪುರುಷೋತ್ತಮ ನಾಕುನಾಡು, ವಿಠಲಶೆಟ್ಟಿ, ವಸಂತ ಹೆಗಡೆ ಹಾಗೂ ಪ್ರಮುಖರಾದ ಮೋಹನ್ ಸಾಲಿಯನ್, ವಿಕ್ಟರ್ ಡಿಸೋಜಾ, ಅಂಬ್ರೋಸ್ ಮೋರಸ್, ಲಾರೆನ್ಸ್ ಡಿಸೋಜ, ಪ್ರಮೋದ್, ಕರುಣಾಕರ ನಾಕುನಾಡು, ನಾರಾಯಣ ಪೂಜಾರಿ ನಾಕುನಾಡು ಉಪಸ್ಥಿತರಿದ್ದರು.

ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಗಳಾದ ಅವಿಲ್ ಮೊರಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Recent Posts

error: Content is protected !!
%d bloggers like this: