Wife killed Husband : ವಿಟ್ಲದ ಕೃಷಿಕ ಅರವಿಂದ ಭಾಸ್ಕರ ಎಂಬವರ ಕೊಲೆ ಪ್ರಕರಣದಲ್ಲಿ ಹತ್ಯೆಯಾದವರ ಪತ್ನಿ ಹಾಗೂ ಪತ್ನಿಯ ಜತೆ ಅನ್ಯೂನ್ಯ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಪ್ರಕರಣ ಘಟಿಸಿದ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ .
ಬಂಟ್ವಾಳ ತಾಲೂಕು, ಇಡ್ಕಿದು ಗ್ರಾಮದ ಚೈತನ್ಯ ಕುಮೇರು ಮನೆ ನಿವಾಸಿ ಅರವಿಂದ ಭಾಸ್ಕರ ಪತ್ನಿ ಆಶಾ ಕೆ (32) ಹಾಗೂ ಆಕೆಯ ಗೆಳೆಯ ವಿಟ್ಲ ಪಡ್ನೂರು ಗ್ರಾಮದ ಪುರ್ಲಪ್ಪಾಡಿ ಮನೆ ನಿವಾಸಿ ಯೋಗೀಶ್ ಗೌಡ (32 ವರ್ಷ) ಬಂಧಿತ ಆರೋಪಿಗಳು.
ಫೆ 26 ರಂದು ತಡ ರಾತ್ರಿ ಅರವಿಂದ ಭಾಸ್ಕರ (39) ಅವರನ್ನು ಅವರು ಮನೆಯೊಳಗಡೆ ಮಲಗಿದ್ದ ವೇಳೆ ಕತ್ತು ಹಿಸುಕಿ ಕೊಲೆಗೆಯ್ಯಲಾಗಿತ್ತು. ಬಳಿಕ ಮರುದಿನ ಬೆಳಿಗ್ಗೆ ಪತ್ನಿ ಪತಿಯ ಶವವನ್ನು ವಿಟ್ಲ ಸಮುದಾಯ ಭವನಕ್ಕೆ ಕರೆದುಕೊಂಡು ಹೋಗಿದ್ದು , ಅಲ್ಲಿರಾತ್ರಿ ಮಲಗಿದ್ದ ಪತಿ ಬೆಳಿಗ್ಗೆಯಾದರೂ ಎದ್ದಿಲ್ಲ ಎಂದು ಕಥೆ ಕಟ್ಟಿ ಹೇಳಿದ್ದರು. ಆದರೇ ಪರೀಕ್ಷಿಸಿದ ವೈದರು, ಸ್ನೇಹಿತರು ಹಾಗೂ ಬಂದುಗಳು ಸಾವಿನ ಸಂಶಯ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆ ಕೃತ್ಯ ಬಯಲಿಗೆಳೆದಿದ್ದರು.
ವಿಟ್ಲ ಠಾಣೆಯಲ್ಲಿ ಈ ಕುರಿತು ಐಪಿಸಿ ಕಲಂ 302 ಜೊತೆಗೆ 34 ಐಪಿಸಿ ಮತ್ತು ಕಲಂ 3(2)(V),3(2)(Va) SC/ST (POA) Ammendmanent Act-2015 ಕಲಂ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸದ್ಯ ಆರೋಪಿಗಳಿಬ್ಬರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.