ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಸಿದ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯ ಹಾಡೊಂದು ನಾ ಹಾಡುವೆನು -2023 ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಪದ್ಮರಾಜ್ ಬಿ ಸಿ ಚಾರ್ವಾಕ ಅವರಿಗೆ 2023 ನೇ ಸಾಲಿನ “ಸಂಗೀತ ಕಲಾನಿಧಿ ರಾಜ್ಯಪ್ರಶಸ್ತಿ ” ನೀಡಿ ಗೌರವಿಸಲಾಯಿತು.
ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ , ಸಂಘಟಕ , ಸಾಹಿತಿ ಮತ್ತು ಚಿತ್ರನಿರ್ದೇಶಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಗಾಯಕರಾದ ನವೀನ ಪುತ್ತೂರು , ಚಂದ್ರಶೇಖರ್ ಹೆಗ್ಡೆ ಪುತ್ತೂರು , ವಸಂತ್ ಬಾರಡ್ಕ ಹಾಗೂ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಇನ್ನಿತರರು ಉಪಸ್ಥಿತರಿದ್ದರು.
ಸಂಗೀತ ನಿರ್ದೇಶಕರು, ಫಿಲಂ ಡೈರೆಕ್ಟರ್, ಕಾರ್ಯಕ್ರಮ ನಿರೂಪಕರು, ಸಾಹಿತಿಯಾಗಿರುವ ಪದ್ಮರಾಜ್ ಬಿಸಿ ಗಾಯಕರಾಗಿ ಖ್ಯಾತರಾಗಿದ್ದಾರೆ.
ಹೊಸ ಕಿರುಚಿತ್ರ “ಕಲಹ ” ಇದಕ್ಕೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹನೆ ಮಾಡಿದ್ದಾರೆ.
ಶ್ರೀ ರಾಗ್ ಮ್ಯೂಸಿಕ್ಸ್ ಪುತ್ತೂರು ಮಂಗಳೂರು ತಂಡದ ನಿರ್ದೇಶಕರಾಗಿ ಪದ್ಮರಾಜ್ ಬಿಸಿ ಕಾರ್ಯನಿರ್ವಹಿಸಿದ್ದಾರೆ.