Long Pending Case : 40 ವರ್ಷ ಹಿಂದಿನ ಪ್ರಕರಣದ ಆರೋಪಿಯನ್ನು ಬಂಧಿಸಿದ ಕಡಬ ಪೊಲೀಸರು – ಪತ್ತೆ ಹಚ್ಚಿದ ತಂಡಕ್ಕೆ ಬಹುಮಾನ ಘೋಷಣೆ  

WhatsApp Image 2023-02-27 at 19.50.43
Ad Widget

Ad Widget

Ad Widget

Long Pending Case ಕಡಬ :ಸುಮಾರು 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ  ಶ್ರೀಗಂಧ ಹಾಗೂ ವಾಹನ ಕಳವು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದಾರೆ . ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು  ಕಾಡೂರು ಕೊಡಿಗೆ ಗ್ರಾಮದ ಅಬ್ಬುಬಕ್ಕರ್ (63) ಬಂಧಿತ ಆರೋಪಿ.

Ad Widget

1984 ರಲ್ಲಿ ಕಡಬ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ   ಶ್ರೀಗಂಧ ಹಾಗೂ ವಾಹನ ಕಳವು ಮಾಡಿದ ಬಗ್ಗೆ ಆರೋಪಿಯ ವಿರುದ್ದ ಅರಣ್ಯ ಕಾಯ್ದೆ ಹಾಗೂ ಕಳ್ಳತನ ಪ್ರಕರಣ ದಾಖಲಾಗಿತ್ತು. ಸುಮಾರು 38 ವರ್ಷಗಳಷು  ಹಳೇಯ ಈ ಕೇಸಿನಲ್ಲಿ ಆರೋಪಿ ಪತ್ತೆಯಾಗದ ಹಿನ್ನಲೆಯಲ್ಲಿ ನ್ಯಾಯಾಲಯವು ದೀರ್ಘ ಕಾಲದಿಂದ ಬಾಕಿ ಇರುವ ಪ್ರಕರಣ ಎಂದು ಪರಿಗಣಿಸಿ ಕಡತವನ್ನು ಮುಕ್ತಾಯಗೊಳಿಸಿತ್ತು.

Ad Widget

Ad Widget

ಆದರೇ ಕಡಬ ಠಾಣೆಯ ಸಬ್‌ ಇನ್ಸ್ಪೆಕ್ಟರ್‌  ಹಾಗೂ ಶೋಧ ಕಾರ್ಯಾಚರಣೆ ನಡೆಸಿದ ತಂಡದ ವಿಶೇಷ ಪ್ರಯತ್ನದಿಂದ ಆರೋಪಿಯನ್ನು ಬಂಧಿಸಲಾಗಿದೆ. ನ್ಯಾಯಾಲಯವು ಈ ಪ್ರಕರಣದ ಮರು ವಿಚಾರಣೆ ನಡೆಸಲಿದ್ದು ಇದಕ್ಕೆ ಕಾರಣೀಭೂತರಾದ ಪೊಲೀಸ್‌ ಇಲಾಖೆಯ ಸಿಬಂದಿಗಳಿಗೆ ಸೂಕ್ತ ಬಹುಮಾನ ನೀಡಲಾಗುವುದೆಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Ad Widget

ಆರೋಪಿಯನ್ನು  ಮೂಡಿಗೆರೆ ತಾಲೂಕು ಬಾಳೂರು  ಎಂಬಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಲಾಗಿದೆ. ಈ  ಕಾರ್ಯಾಚರಣೆಯಲ್ಲಿ ಕಡಬ ಠಾಣೆಯ ಹೆಡ್‌ ಕಾನ್ಸ್ಟೇಬಲ್‌ ಗಳಾದ ರಾಜು ನಾಯಕ್, ಭವಿತ್ ರಾಜ್ ಸಿಬ್ಬಂದಿ ಸಿರಾಜುದ್ದೀನ್   ಭಾಗಿಯಾಗಿದ್ದರು. ಆರೋಪಿಯ ವಿರುದ್ದ ರಾಣೇಬೆನ್ನೂರು ಹಾಗೂ ಮೈಸೂರು ವಿವಿ ಪುರಂ ಠಾಣೆಗಳಲ್ಲಿ  ಇನ್ನೆರಡು ಪ್ರಕರಣಗಳಿದ್ದೂ ವಾರೆಂಟ್‌ ಜಾರಿಯಾಗಿದೆ.

Ad Widget

Ad Widget

Leave a Reply

Recent Posts

error: Content is protected !!
%d bloggers like this: