Rohith Chakrathirtha | ಉಪನ್ಯಾಸ ನೀಡಲು ವೇಣೂರು ದೇವಸ್ಥಾನಕ್ಕೆ ಆಗಮಿಸಿದ ರೋಹಿತ್ ಚಕ್ರತೀರ್ಥ – ಮೇಲುಗೈ ಸಾಧಿಸಿದ ಶಾಸಕ ಪೂಂಜ

Screenshot_20230227-170547_Chrome-transformed
Ad Widget

Ad Widget

Ad Widget

ವೇಣೂರು: ಅಜಿಲ ಸೀಮೆಯ ಪಟ್ಟದ ದೇವರಾದ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥರು (Rohith Chakrathirtha) ಉಪನ್ಯಾಸ ನೀಡಲು ಆಗಮಿಸಿದ್ದಾರೆ. ಕೆಲವು ಬಿಲ್ಲವ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಇದೀಗ ರೋಹಿತ್ ಚಕ್ರತೀರ್ಥ ಆಗಮಿಸಿದ್ದು , ಈ ಮೂಲಕ ದೇವಸ್ಥಾನಕ್ಕೆ ಕರೆಸಿಯೇ ತೀರುತ್ತೇನೆಂದು ಹಠ ಹಿಡಿದಿದ್ದ ಶಾಸಕ ಹರೀಶ್ ಪೂಂಜ ಅವರು ಮೇಲುಗೈ ಸಾಧಿಸಿದಂತಾಗಿದೆ.

Ad Widget


ಇದೇ ವೇಳೆ ದೇವಸ್ಥಾನದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ರೋಹಿತ್ ಚಕ್ರತೀರ್ಥ, ಈ ದೇವಸ್ಥಾನಕ್ಕೆ ಬರಲು ಮಹಾಲಿಂಗೇಶ್ವರ ದೇವರು ಒಂದು ಕಾರಣವಾದರೆ, ಮತ್ತೊಂದು ಕಾರಣ ಹರೀಶ್ ಪೂಂಜ . ಅವರು ಪಠ್ಯಪುಸ್ತಕ ಪರಿಷ್ಕರಣೆಯ ಸಂದರ್ಭ ನಡೆದ ಅನೇಕ ಘಟನಾವಳಿಗಳಿಗಳಲ್ಲಿ ನನ್ನ ಜೊತೆ ಬಲವಾಗಿ ನಿಂತಿದ್ದರು ಎಂದರು .

Ad Widget

Ad Widget


ಪುಸ್ತಕ ಪರಿಷ್ಕರಣ ಸಮಿತಿಯ ಮುಖ್ಯಸ್ಥರಾದ ರೋಹಿತ್ ಚಕ್ರತೀರ್ಥರು ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಹತ್ತನೇ ತರಗತಿ ಪಠ್ಯದಿಂದ ತೆಗೆದು ಹಾಕಿದ್ದೂ, ಅವರನ್ನು ‘ಶಿಕ್ಷಣ ಮತ್ತು ಧರ್ಮ’ ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಲು ವೇಣೂರು ದೇವಸ್ಥಾನದ ಸಮಿತಿಯವರು ಕರೆಯಬಾರದು. ಅವರ ಉಪನ್ಯಾಸಕ್ಕೆ ಅವಕಾಶ ಕೊಡಬಾರದೆಂದು ಕೆಲ ಬಿಲ್ಲವ ಸಂಘಟನೆಗಳು ಅಗ್ರಹಿಸಿದ್ದವು.

Ad Widget

ಆ ಬಳಿಕ ರೋಹೀತ್ ಉಪನ್ಯಾಸದ ಕುರಿತಂತೆ ಎದ್ದ ವಿವಾದದ ಕುರಿತಂತೆ ಚರ್ಚಿಸಲು ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ| ಪದ್ಮ ಪ್ರಸಾದ್ ಅಜಿಲರವರು ಬಿಲ್ಲವ ಸಂಘಟನೆಗಳ ಪ್ರಮುಖರನ್ನು ಅಹ್ವಾನಿಸಿದ್ದರು. ಕರೆಗೆ ಓಗೊಟ್ಟು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಚಿದಾನಂದ ಪೂಜಾರಿ ಎಲ್ಲಡ್ಕ ರವರ ನೇತೃತ್ವದಲ್ಲಿ ಬಿಲ್ಲವ ಸಮಾಜದ ಪ್ರಮುಖರ ನಿಯೋಗ ತೆರಳಿ ಮಾತುಕತೆ ನಡೆಸಿತು. ವೇಣೂರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಗಿರುವ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪಪ್ರಸಾದ್ ಅಜಿಲರವರನ್ನು ಭೇಟಿ ಮಾಡಿದ ಮಾತುಕತೆ ಸಂದರ್ಭ ನಿಯೋಗದ ಸದಸ್ಯರು ರೋಹಿತ್ ಚಕ್ರತೀರ್ಥ ಉಪನ್ಯಾಸಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

Ad Widget

Ad Widget


ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಭಗವಾನ್ ಮಹಾವೀರ, ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್, ಕುವೆಂಪು, ರಾಣಿ ಅಬ್ಬಕ್ಕ ಮತ್ತು ಕಯ್ಯಾರ ಕಿಂಇಣ್ಣ ರೈ ಮುಂತಾದ ದಾರ್ಶನಿಕರ ವ್ಯಕ್ತಿತ್ವಕ್ಕೆ ಕುಂದು ಬರುವ ರೀತಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ನಡೆಸಿ ಕೊನೆಗೆ ಸರಕಾರದ ಆದೇಶದಂತೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ಪದಚ್ಯುತಗೊಂಡ ವಿಕೃತ ವಿಚಾರಧಾರೆಗಳನ್ನು ಹೊಂದಿರುವ ರೋಹಿತ್ ಚಕ್ರತೀರ್ಥರನ್ನು ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಸಂಘಟನೆಗಳ ಮುಖಂಡರು ಮನವಿ ಮಾಡಿದ್ದರು.


ಈ ಸಂದರ್ಭದಲ್ಲಿ ಡಾ| ಪದ್ಮಪ್ರಸಾದ್ ಅಜಿಲರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳ ವಿರೋಧವನ್ನು ದಿಕ್ಕರಿಸಿ ವಿವಾದಿತ ವ್ಯಕ್ತಿಗಳನ್ನು ಆಹ್ವಾನಿಸುವ ಯಾವುದೇ ಉದ್ದೇಶ ನಮಗಿಲ್ಲ. ನಿಮ್ಮ ಭಾವನೆಯನ್ನು ಗೌರವಿಸಿ ವಿವಿಧ ಸಮಿತಿಯವರೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಭರವಸೆಯಿತ್ತರು.


ಅರಸರಾದ ಅಜಿಲರು ಸಮಿತಿಯಲ್ಲಿ ಮಾತನಾಡಿ ರೋಹಿತ್ ಚಕ್ರತೀರ್ಥ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ ಎನ್ನಲಾಗಿತ್ತು. ಅದರೇ ಇಧಿಗ ರೊಹೀತ್‌ ಆಗಮಿಸಿದ್ದು, ಕರೆಸಿಯೇ ತೀರುತ್ತೇನೆಂದು ಹಠ ಹಿಡಿದಿದ್ದ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ , ಶಾಸಕ ಹರೀಶ್ ಪೂಂಜಾರು ಚಕ್ರತೀರ್ಥನ ಕರೆಸಿ ಮೇಲುಗೈ ಸಾಧಿಸಿದ್ದಾರೆ.


ಹರೀಶ್ ಪೂಂಜರ ಅಭಿಮಾನಿಗಳು ರೋಹಿತ್ ಚಕ್ರತೀರ್ಥ ಆಗಮಿಸಿದ್ದನು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಹಾಕಿ ವಿರೋಧಿಸಿದವರ ಕಾಲೇಲೆಯುತ್ತಿದ್ದಾರೆ.

ನಿಗಮ ಘೋಷಣೆಗೆ ಬಂಟರ ಸಂಘ ಒತ್ತಾಯ

Leave a Reply

Recent Posts

error: Content is protected !!
%d bloggers like this: