Weekly horoscope : ದ್ವಾದಶ ರಾಶಿಗಳ ವಾರ ಭವಿಷ್ಯ : 26.2.2023 ರಿಂದ 04.03.2023ರ ವರೆಗೆ

WhatsApp Image 2023-02-26 at 12.39.11
Ad Widget

Ad Widget

Ad Widget

ಜ್ಯೋತಿಷಿ : ಶಿವಪ್ರಸಾದ್ ಭಾರದ್ವಾಜ್ ಪುತ್ತೂರು

               PH : 9448410257

Weekly horoscope: 26.2.2023 ರಿಂದ 04.03.2023ರ ವರೆಗಿನ ದ್ವಾಧಶ ರಾಶಿಗಳ ವಾರ ಭವಿಷ್ಯವನ್ನು ಈ ಕೆಳಗೆ ನೀಡಲಾಗಿದೆ . ಪ್ರತಿ ಭಾನುವಾರ  ಮುಂಬರುವ ವಾರದ ರಾಶಿ ಭವಿಷ್ಯವನ್ನು ನಿಮ್ಮ ನಿಖರ ನ್ಯೂಸಿನಲ್ಲಿ ನಿಯಮಿತವಾಗಿ ಪ್ರಕಟಿಸಲಾಗುವುದು.

Ad Widget

ಮೇಷ : ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಮರೆಯದಿರಿ. ದುಂದು ವೆಚ್ಚಗಳನ್ನು ತಪ್ಪಿಸಿ. ಸ್ನೇಹಿತರೊಂದಿಗೆ ಪ್ರವಾಸ ತೆರಳುವಿರಿ. ಹೊಸ ಮೂಲಗಳ ಆದಾಯವನ್ನು ನಿರೀಕ್ಷಿಸುವಿರಿ.

Ad Widget

Ad Widget

Ad Widget

ವೃಷಭ : ಮನಸ್ಸಿಗೆ ಹಿತವೆನಿಸದ ವ್ಯಕ್ತಿಗಳ ಜೊತೆ ಬೆರೆಯದಿರಿ. ಭೂ ಸಂಬಂಧೀ ವ್ಯವಹಾರ, ಹಕ್ಕು ಪಡೆಯುವಲ್ಲಿ ಶ್ರಮವಹಿಸುವಿರಿ. ಅನಗತ್ಯ ಪ್ರಯಾಣದಿಂದ ದೂರವಿರಿ ಅತೀ ಅವಶ್ಯವಿದ್ದಲ್ಲಿ ಪ್ರಯಾಣಿಸಿ.

Ad Widget

ಮಿಥುನ : ನಿಮ್ಮ ಮಾತಿಗೆ ಉತ್ತಮ ಬೆಲೆ ಬರುವುದು. ಹಿರಿಯರ ಆಶೀರ್ವಾದ ಪಡೆಯುವಿರಿ. ಪ್ರಗತಿಯಲ್ಲಿರುವ ಕೆಲಸ ಕಾರ್ಯಗಳು ಮೊಟಕುಗೊಂಡಂತೆ ಕಂಡರೂ ಎದೆಗುಂದಬೇಡಿ.

Ad Widget

Ad Widget

ಕರ್ಕಾಟಕ : ಹಣಗಳಿಕೆಗೆ ಉತ್ತಮ ಮಾರ್ಗಗಳನ್ನು ಕಂಡುಕೊಳ್ಳುತ್ತೀರಿ. ಕುಟುಂಬದಲ್ಲಿ ಮನಸ್ತಾಪಗಳು ಹೆಚ್ಚಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದೀತು. ವಿದ್ಯಾರ್ಥಿಗಳಿಗೆ ಯಶಸ್ವೀವಾರ. 

ಸಿಂಹ : ವಾರದ ಆರಂಭವು ಸ್ನೇಹಮಯವಾಗಿ ಇರಲಿದೆ. ನಿಮ್ಮ ಕೆಲಸ ಕಾರ್ಯಗಳ ಮೇಲೆ ಗಮನ ಕಳೆದುಕೊಳ್ಳುವ ಸಂದರ್ಭಗಳು ಒದಗಿ ಬರಲಿವೆ. ಶುಭ ಕಾರ್ಯಗಳಿಗೆ ಜಯವಿದೆ. ವಾರಾಂತ್ಯ ಶುಭವಿದೆ.

ಕನ್ಯಾ : ಈ ವಾರ ನಿಮ್ಮ ಸೃಜನಶೀಲತೆಗೆ ಬೆಲೆ ಹೆಚ್ಚಲಿದೆ. ಷೇರು ಮಾರುಕಟ್ಟೆ, ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿಸಲು ಸೂಕ್ತ ವಾರವಲ್ಲ. ಸಮಸ್ಯೆಯನ್ನು ಮಾತನಾಡಿ ಬಗೆಹರಿಸಿ.

ತುಲಾ : ನಿಮ್ಮಲ್ಲಿ ಧನ ಸಹಾಯ ಯಾಚಿಸುವ ಸಾಧ್ಯತೆ ಇದೆ. ನೀವು ಬಯಸಿದ ಕಾರ್ಯಗಳನ್ನು ಪೂರ್ಣಗೊಳಿಸಲು ಕುಟುಂಬವರ್ಗ, ಬಂಧು-ಬಾಂದವರು ಸಹಕಾರ ನೀಡುವರು.

ವೃಶ್ಚಿಕ : ಗೆಳೆಯ/ಗೆಳತಿ, ಸಂಬಂಧಿಕರೊಡನೆ ಸಮಸ್ಯೆಯನ್ನು ಹಂಚಿಕೊಳ್ಳಿ, ಮನಸ್ಸಿಗೆ ಸಮಾಧಾನ ತಂದುಕೊಳ್ಳಿ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ವಾದ-ಪ್ರತಿವಾದಗಳಲ್ಲಿ ತೊಡಗಬೇಡಿ.

ಧನು : ದೊಡ್ಡ ಪ್ರಮಾಣದಲ್ಲಿ ದುಡ್ಡ ಖರ್ಚುಮಾಡುವ ಸಾಧ್ಯತೆ ಇದೆ. ಕುಟುಂಬದ ಸಹಕಾರ ಹಾಗೂ ಬೆಂಬಲ ಯಥೇಚ್ಛವಾಗಿ ಸಿಗಲಿದೆ. ವಾರಾಂತ್ಯ ಸಣ್ಣ-ಪುಟ್ಟ ನಿಂದನೆ, ಅಪವಾದಗಳು ಕೇಳಿಬರುವವು.

ಮಕರ : ನಿಮ್ಮ ಶಿಸ್ತು ಇತರರಿಗೆ ಮಾದರಿಯಾಗಲಿದೆ. ಸ್ವದೇಶಿ ಮತ್ತು ವಿದೇಶಿ ವ್ಯಾಪಾರ ಎರಡರಲ್ಲೂ ಲಾಭಗಳಿಸಬಹುದಾಗಿದೆ. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಪ್ರಗತಿ ಸಾಧಿಸುತ್ತೀರಿ ಮತ್ತು ಪ್ರಶಂಸೆಗೆ ಒಳಗಾಗುವಿರಿ.

ಕುಂಭ : ಶುಭ ಕಾರ್ಯದ ನಿಮಿತ್ತ ಖರ್ಚು-ವೆಚ್ಚಗಳು ಅಧಿಕವಿರುತ್ತವೆ. ಕುಟುಂಬದಲ್ಲಿನ ಸಂಬಂಧವು ಸ್ನೇಹಮಯವಾಗಿ ಇರಲಿದೆ. ಸಣ್ಣ ಪುಟ್ಟ ವಿಷಯಗಳಿಗೆ ಕೋಪಗೊಳ್ಳದಿರಿ.

ಮೀನಾ : ದೇಹ ಮತ್ತು ಮನಸ್ಸು ಇವೆರಡರ ಆರೋಗ್ಯ ಕಾಪಾಡಿಕೊಳ್ಳಿ. ವಾರದ ಮಧ್ಯೆ  ಪ್ರಯಾಣಕ್ಕೆ ಶುಭ ಸಮಯವಲ್ಲ. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆಡರಲ್ಲಿಯೂ ಆಸಕ್ತಿಯಿಂದ ಭಾಗವಹಿಸಿ.

 ಜ್ಯೋತಿಷಿ : ಶಿವಪ್ರಸಾದ್ ಭಾರದ್ವಾಜ್ ಪುತ್ತೂರು
               PH : 9448410257

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: