Electronic Cigarettes : ಉಪ್ಪಿನಂಗಡಿ : ಇ ಸಿಗರೇಟ್‌ ಮಾರಾಟ ಮಾಡುತ್ತಿದ್ದ ಮೊಬೈಲ್‌ ಅಂಗಡಿಗೆ ದಾಳಿ – ಓರ್ವನ ಬಂಧನ | ರಾಜ್ಯದಲ್ಲೆ ಅತ್ಯಾಪರೂಪದ ಪ್ರಕರಣ

WhatsApp Image 2023-02-26 at 12.19.28
Ad Widget

Ad Widget

Ad Widget

Electronic Cigarettes ಉಪ್ಪಿನಂಗಡಿ : ಫೆ 26 : ಇ ಸಿಗರೇಟ್‌ ಮಾರಾಟ ಮಾಡುತ್ತಿದ್ದ ಮೊಬೈಲ್‌ ಅಂಗಡಿಯೊಂದಕ್ಕೆ ಶನಿವಾರ ರಾತ್ರಿ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು  ನಿಷೇಧಿತ ಒಟ್ಟು 52 ಇ-ಸಿಗರೇಟ್ ನ್ನು ಹಾಗೂ ಅಂಗಡಿಯ ಮಾಲಕನನ್ನು ವಶಕ್ಕೆ ಪಡೆದಿದ್ದಾರೆ. ನೂತನವಾಗಿ ಜಾರಿಯಾದ ಎಲೆಕ್ಟ್ರಾನಿಕ್ ಸಿಗರೇಟುಗಳ ನಿಷೇಧ (ಉತ್ಪಾದನೆ, ತಯಾರಿಕೆ, ಆಮದು, ರಫ್ತು, ಸಾರಿಗೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತು) ಕಾಯ್ದೆ 2019ರ ಕಲಂ 7,8 ರಡಿ ಪ್ರಕರಣ ದಾಖಲಾಗಿದೆ. ಇದು ಅಪರೂಪದ ಪ್ರಕರಣವಾಗಿದ್ದು , ರಾಜ್ಯದಲ್ಲಿ ಈ ಕಾಯ್ದೆಯಡಿ ದಾಖಲಾದ ಎರಡನೇ ಪ್ರಕರಣ ಎಂದು ಹೇಳಲಾಗುತ್ತಿದೆ.

Ad Widget

ನರಿಮೊಗರು ಗ್ರಾಮದ ಮುಕ್ವೆ ಸಮೀಪದ ಶೇಖ್‌ ಮಂಜಿಲ್‌ ಮಣ್ಯ ಶೇಖ್‌ ಶಾಹಿದ್‌ (27 ವರ್ಷ) ಬಂಧಿತ ಆರೋಪಿ.  ಆರೋಪಿಯಿಂದ ವಶಕ್ಕೆ ಪಡೆದ ಒಟ್ಟು ಇ ಸಿಗರೇಟುಗಳ ಮೌಲ್ಯ ರೂ. 26 ಸಾವಿರ ಎಂದು ಅಂದಾಜಿಸಲಾಗಿದೆ.

Ad Widget

Ad Widget

Ad Widget

ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್‌ ನ  ಹಿಂಬಂದಿಯ ಒಳಸಂದಿನಲ್ಲಿರುವ  ಮೊಬೈಲ್‌ ಅಂಗಡಿಯೊಂದರಲ್ಲಿ ಇ ಸಿಗರೇಟ್‌ ಮಾರಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಹಾಗೂ ಉಪ್ಪಿನಂಗಡಿ ಪೊಲೀಸ್‌ ಠಾಣಾ ಉಪ ನಿರೀಕ್ಷಕ ರಾಜೇಶ್‌ ಕೆವಿ ಅವರ ತಂಡ ದಾಳಿ ನಡೆಸಿದೆ.

Ad Widget

ಮೊಬೈಲ್‌ ಅಂಗಡಿಯಿಂದ ಇ- ಸಿಗರೇಟ್‌ ಗೆ ಬಳಸಲಾಗುವ ಅಮಲು ಪದಾರ್ಥ ಸ್ಮೋಕ್‌ ಮಾಡಲು ಬಳಸುವ ಟ್ಯೂಬ್‌ ಗಳನ್ನು ವಶಕ್ಕೆ ಪಡೆಯಲಾಗಿದೆ. ಯುವಜನತೆಯನ್ನು ಆಕರ್ಷಿಸುವ ಇ ಸಿಗರೇಟ್‌ ಮಾರಾಟ ಕಾನೂನು ಬಾಹಿರ ಕೃತ್ಯವಾಗಿದೆ .  

Ad Widget

Ad Widget

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: