Kashmir Pandit | ಮತ್ತೊಬ್ಬ ಕಾಶ್ಮೀರ ಪಂಡಿತ್ ಉಗ್ರರ ಗುಂಡಿಗೆ ಬಲಿ – ಮುಗಿಲುಮುಟ್ಟಿದ ಪಂಡಿತರ ಆಕ್ರೋಶ

20230226_134807
Ad Widget

Ad Widget

Ad Widget

ಶ್ರೀನಗರ: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮತ್ತೊಬ್ಬ ಕಾಶ್ಮೀರಿ ಪಂಡಿತನ (Kashmir Pandit) ಹತ್ಯೆಯಾಗಿದೆ. ಭಾನುವಾರ ( ಫೆ.26 ರಂದು) ಉಗ್ರರ ದಾಳಿಗೆ ಸಂಜಯ್‌ ಶರ್ಮಾ (40) ಎಂಬಾತ ಬಲಿಯಾಗಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕಾಶ್ಮೀರ ಪಂಡಿತರ ಆಕ್ರೋಶ ಮುಗಿಲುಮುಟ್ಟಿದೆ .

Ad Widget

ಪುಲ್ವಾಮಾದ ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದ ವೇಳೆ ಸಂಜಯ್‌ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ತೀವ್ರ ಗಾಯಗೊಂಡ ಸಂಜಯ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಗಂಭೀರ ಗಾಯಗೊಂಡ ಕಾರಣ ಅವರು ಮೃತಪಟ್ಟಿದ್ದಾರೆ. ಜಮ್ಮು ‍‍& ಕಾಶ್ಮೀರದ ಬ್ಯಾಂಕ್‌ ವೊಂದರಲ್ಲಿ ಸೆಕ್ಯೂರಿಟ್‌ ಗಾರ್ಡ್‌ ಆಗಿ ಸಂಜಯ್‌ ಶರ್ಮಾ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Ad Widget

Ad Widget

ಉಗ್ರರು ಸಂಜಯ್‌ ಸರ್ಮಾ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪುಲ್ವಾಮದ ಮಾರುಕಟ್ಟೆಯಲ್ಲಿ ತೆರಳುತ್ತಿದ್ದ ವೇಳೆ ನಡೆಸಿದ ದಾಳಿಯ ಪರಿಣಾಮ ಅವರು ಮೃತಪಟ್ಟಿದ್ದಾರೆ. ಪೊಲೀಸರು ದಾಳಿಯಾದ ಪ್ರದೇಶದಲ್ಲಿ ಸುತ್ತುವರೆದು ಉಗ್ರರ ಸೆರೆಗೆ ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ಕಾಶ್ಮೀರದ ಪೊಲೀಸರು ಹೇಳಿದ್ದಾರೆ.

Ad Widget

ರಾಹುಲ್‌ ಭಟ್‌ ಹತ್ಯೆ ಖಂಡಿಸಿ ಕಳೆದ ಕೆಲ ಸಮಯದಿಂದ ಕಾಶ್ಮೀರಿ ಪಂಡಿತರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ವೇಳೆಯಲ್ಲೇ ಮತ್ತೊಂದು ಕಾಶ್ಮೀರಿ ಪಂಡಿತನ ಹತ್ಯೆಯಾಗಿದೆ.

Ad Widget

Ad Widget

ಯುಪಿಎ ಸರ್ಕಾರದ ಅವಧಿಯಲ್ಲಿ ಪಿಎಂ ಪ್ಯಾಕೇಜ್ ಯೋಜನೆಯಲ್ಲಿ ಉದ್ಯೋಗ ಪಡೆದ ಪಂಡಿತರು ಕಳೆದ 8 ತಿಂಗಳಿನಿಂದ ತಮ್ಮನ್ನು ಜಮ್ಮುಗೆ ಸ್ಥಳಾಂತರಿಸುವಂತೆ ಪ್ರತಿಭಟನೆ ನಿರತರಾಗಿದ್ದಾರೆ. ಇವರಿಗೆ ಕಳೆದ 8 ತಿಂಗಳಿನಿಂದ ಸಂಬಳ ನೀಡಿಲ್ಲ ಎಂಬ ಆರೋಪ ವ್ಯಕ್ತವಾಗುತ್ತಿದೆ. ಹಲವು ಉದ್ಯೋಗಿಗಳನ್ನೇ ಉಗ್ರರು ಗುಂಡಿಟ್ಟು ಹತ್ಯೆ ಮಾಡುತ್ತಿದ್ದಾರೆ.

Leave a Reply

Recent Posts

error: Content is protected !!
%d bloggers like this: