Joyalukkas Raid : ಜಾಯ್ ಆಲುಕಾಸ್‌ನ ₹ 305.84 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

WhatsApp Image 2023-02-25 at 19.08.24
Ad Widget

Ad Widget

Ad Widget

ಕೇರಳ ಮೂಲದ ಜನಪ್ರಿಯ ಆಭರಣ ಕಂಪೆನಿ ಜಾಯ್ ಆಲುಕಾಸ್‌ನ(Joyalukkas Raid) ₹ 305.84 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು (ED) ಜಪ್ತಿ ಮಾಡಿದೆ. ಎರಡು ದಿನಗಳ ಹಿಂದೆಯಷ್ಟೆ ಈ ಅಭರಣ ಸಂಸ್ಥೆಗೆ ಸೇರಿದ ಐದು ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿತ್ತು. ಈ ಆಭರಣ ಕಂಪೆನಿಯು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಆಸ್ತಿ ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ (Enforcement Directorate) ತಿಳಿಸಿದೆ.

Ad Widget

ಇಡಿ ಅಧಿಕಾರಿಗಳು ಪೆಭ್ರವರಿ 22 ರಂದು ತ್ರಿಶೂರ್‌ ಜಿಲ್ಲೆಯಲ್ಲಿರುವ ಜಾಯ್ ಆಲುಕಾಸ್ ಪ್ರಧಾನ ಕಛೇರಿಯ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದರು. ಅದಾಗಿ ಎರಡು ದಿನವಾಗುತ್ತಲೇ, ಇಡಿ ಜಪ್ತಿ ಮಾಡಿರುವ ಪ್ರಕಟನೆ ಹೊರಡಿಸಿದೆ. ತ್ರಿಶೂರ್‌ನ ಶೋಭಾ ನಗರದಲ್ಲಿ ನಿವೇಶನ ಮತ್ತು ವಸತಿ ಕಟ್ಟಡ ಒಳಗೊಂಡ ₹ 81.54 ಕೋಟಿ  ಮೌಲ್ಯದ 33 ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ₹ 91.22 ಲಕ್ಷ ಮೌಲ್ಯದ ಮೂರು ಬ್ಯಾಂಕ್ ಖಾತೆಗಳು, ₹ 5.58 ಕೋಟಿ ಮೊತ್ತದ ಮೂರು ಸ್ಥಿರ ಠೇವಣಿಗಳು ಮತ್ತು 217.81 ಕೋಟಿ ಮೌಲ್ಯದ ಜೋಯ್‌ ಅಲುಕ್ಕಾಸ್ ಷೇರುಗಳನ್ನು ಸಹ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.

Ad Widget

Ad Widget

ಜಾಯ್ ಆಲುಕಾಸ್‌  ಸಂಸ್ಥೆಯು ಅದರ ಮುಖ್ಯಸ್ಥ ಜಾಯ್ ಆಲುಕಾಸ್ ವರ್ಗೀಸ್ನ 100 ಪ್ರತಿಶತ ಒಡೆತನದಲ್ಲಿದೆ. ಅವರು ಹವಾಲಾ ಮಾರ್ಗದ ಮೂಲಕ ಭಾರತದಿಂದ ದುಬೈಗೆ ಭಾರಿ ಮೊತ್ತದ ಹಣವನ್ನು ವರ್ಗಾಯಿಸಿದ್ದಾರೆ. ಅಲ್ಲದೆ ದುಬೈನ ಜಾಯ್ ಆಲುಕಾಸ್ ಜ್ಯುವೆಲ್ಲರಿ ಎಲ್ಎಲ್ಸಿಯಲ್ಲಿ ಹೂಡಿಕೆ ಮಾಡಿದೆ ಎಂದು ಇಡಿ ತಿಳಿಸಿದೆ. ಕಂಪನಿಯು ಸರಿಸುಮಾರು 68 ನಗರಗಳಲ್ಲಿ ಶೋರೂಂಗಳನ್ನು ಹೊಂದಿದೆ.

Ad Widget

Leave a Reply

Recent Posts

error: Content is protected !!
%d bloggers like this: