ಮಂಗಳೂರು, ಫೆಬ್ರವರಿ, 24: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ (Mangalore Police Commisioner) ವ್ಯಾಪ್ತಿಯ ನೂತನ ಕಮಿಷನರ್ ಆಗಿ ಕುಲದೀಪ್ ಕುಮಾರ್ ಆರ್. ಜೈನ್ ( Kuldeep Kumar R jain) ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ಶಶಿಕುಮಾರ್ ಎನ್ ರವರು. ( Shashi Kumar N) ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ಅವರು ಮಾಧ್ಯಮಗಳ ಜತೆ ಮಾತನಾಡಿದ್ದು, ದಶಕಗಳ ಹಿಂದೆ ಮಂಗಳೂರಿನಲ್ಲಿ ನನ್ನ ಪ್ರೊಬೆಷನರಿ ಅವಧಿಯಲ್ಲಿ ಬಂದಿದೆ. ಆಗಿನ ಮಂಗಳೂರು ಈಗ ಬಹಳಷ್ಟು ಬದಲಾವಣೆ ಆಗಿದೆ. ಎಂದರು. ಪೊಲೀಸ್ ಇಲಾಖೆ ಜನಸಾಮಾನ್ಯರಿಗೆ ಅನುಕೂಲ ಮಾಡುವ ಕೆಲಸ ಮಾಡಬೇಕು. ಎಷ್ಟು ಸಾಧ್ಯವಾಗುತ್ತದೋ ಅಷ್ಟು ಮಾಡಬೇಕು. ಈ ಬಗ್ಗೆ ಅಧಿಕಾರಿ, ಸಿಬ್ಬಂದಿಯ ಕಾರ್ಯಚಟುವಟಿಕೆಗಳನ್ನು ನಾನೇ ಕುದ್ದು ವೀಕ್ಷಿಸಲಿದ್ದೇನೆ ಎಂದರು.
ಅಕ್ರಮ ಚಟುವಟಿಕೆಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ . ಈ ಕುರಿತು ಶೂನ್ಯ ಸಹಿಷ್ಟುತೆ ( Zero tollerence) ನೀತಿ ಅನುಸರಿಸಲಾಗುವುದು. ಇಂತಹ ಚಟುವಟಿಕೆಗಳು ಎಲ್ಲೆ ಕಂಡು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಾದೆ. ಯಾರು ಆ ಕೃತ್ಯದಲ್ಲಿ ಭಾಗಿ ಆಗುತ್ತರೋ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮಂಗಳೂರು ಸೂಕ್ಷ್ಮ ಪ್ರದೇಶವಾಗಿದ್ದರೆ, ನಾನೂ ಅಷ್ಟೇ ಸೂಕ್ಷ್ಮವಾಗಿ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನ ಪಡುತ್ತೇನೆ. ಹಾಗೆಯೇ ಯಾವ ರೀತಿಯಲ್ಲಿ ಕ್ರಮಗಳು ಆಗಬೇಕೋ ಅದು ಆಗುತ್ತದೆ. ನನ್ನ ಅವಧಿಯಲ್ಲಿ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶ ಇರುವುದಿಲ್ಲ. ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನೂ ಕೇಳಿಕೊಳ್ಳುತ್ತಿದ್ದೇನೆ ಎಂದು ನೂತನ ಕಮೀಷನರ್ ಮನವಿ ಮಾಡಿದರು.
ಟ್ರಾಫಿಕ್ ನಿಯಗಳನ್ನು ಉಲ್ಲಂಘಿಸುತ್ತಿರುವವರ ಮೇಲೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಹಾಗಾಗಿಯೂ ವಾಹನ ಸವಾರರು ಹಾಗೂ ವಾಹನ ಚಾಲಕರು ಟ್ರಾಫಿಕ್ ನಿಯಮಗಳನ್ನು ಪಾಲಿಸಿ ಎಂದು ಅವರು ಮನವಿ ಮಾಡಿದರು
ಕುಲದೀಪ್ ಕುಮಾರ್ ಆರ್. ಜೈನ್ ಹುಟ್ಟಿದ್ದು ರಾಜಸ್ತಾನದಲ್ಲಿ. ಆದರೆ ಚೆನ್ನೈನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದರು. ಇವರು 2011ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಕುಲದೀಪ್ ಕುಮಾರ್ ಅವರ ಪ್ರೊಬೆಷನರಿ ಅವಧಿ ಮಂಗಳೂರು ಆಗಿತ್ತು. ಬಳಿಕ ಚೆನ್ನಪಟ್ಟಣದಲ್ಲಿ ಎಎಸ್ಪಿ, ಚಾಮರಾಜನಗರ, ಬಿಜಾಪುರದಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ಸಿಟಿಯಲ್ಲಿ ಡಿಸಿಪಿ ಕ್ರೈಂ ಹಾಗೂ ಡಿಸಿಪಿ ಟ್ರಾಫಿಕ್ ಆಗಿದ್ದು, ಕೆಎಸ್ಆರ್ಪಿ ಹಾಗೂ ಎಸಿಬಿಯಲ್ಲೂ ಕೂಡ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ.