Kadaba Operation Elephant |ಕಡಬ: ಸೆರೆಸಿಕ್ಕ ಕಾಡನೆಯೊಂದಿಗೆ ಅಭಿಮನ್ಯು ನಾಗರಹೊಳೆಗೆ ಶಿಫ್ಟ್ – ಕಾರ್ಯಾಚರಣೆಗೆ ಒಂದು ದಿನ ವಿಶ್ರಾಂತಿ : ಮುಂದುವರೆಸುವಂತೆ ಗ್ರಾಮಸ್ಥರ ಒತ್ತಾಯಿಸಿ ವಾಗ್ವಾದ : ಇಲಾಖಾ ವಾಹನಕ್ಕೆ ಕಲ್ಲು ತೂರಾಟ, ಡಿವೈಎಸ್ಪಿಗೆ ಹಲ್ಲೆ , ಲಾಠಿಚಾರ್ಜ್ – ಮಧ್ಯರಾತ್ರಿಯೇ ನಾಲ್ವರು ವಶಕ್ಕೆ ..?

InShot_20230224_090758346
Ad Widget

Ad Widget

Ad Widget

ಕಡಬ: ಇಚಿಲಂಪಾಡಿ ಪರಿಸರದಲ್ಲಿ ಇಬ್ಬರನ್ನು ಬಲಿ ಪಡೆದ ಒಂಟಿ ಆನೆಯನ್ನು ಸೆರೆ (Kadaba Operation Elephant ) ಹಿಡಿಯಲಾಗಿದ್ದು, ಮಿಕ್ಕ ಆನೆಗಳ ಸೆರೆ ಕಾರ್ಯಾಚರಣೆ ಫೆ.24ರಂದು ಮುಂದುವರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು ಈ ವೇಳೆ ಗ್ರಾಮಸ್ಥರು ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ವಾಗ್ವಾದ ನಡೆದು ಇಲಾಖಾ ವಾಹನಗಳಿಗೆ ಕಲ್ಲು ತೂರಾಟ ನಡೆದ ಘಟನೆ ಕೊಂಬಾರಿನ ಮಂಡಕರದಲ್ಲಿ ಫೆ.23ರಂದು ರಾತ್ರಿ ನಡೆದಿದೆ. ಘಟನೆ ಸಂಬಂಧ ನಾಲ್ವರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Ad Widget

ಮೂರು ದಿನಗಳ ಕಾರ್ಯಾಚರಣೆ ಬಳಿಕ ಮಂಡಕರ ಸಮೀಪ ಮುಜೂರು ರಕ್ಷಿತಾರಣ್ಯದಲ್ಲಿ ಒಂಟಿ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.

Ad Widget

Ad Widget
ಸೆರೆ ಹಿಡಿಯುವ ಕಾರ್ಯಚರಣೆ

ಸೆರೆ ಹಿಡಿದ ಕಾಡಾನೆಯನ್ನು ಲಾರಿಯಲ್ಲಿ ತುಂಬಿಸಿ ಸ್ಥಳಾಂತರ ಮಾಡುತ್ತಿದ್ದಂತೆ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಆನೆ ಸೆರೆ ಕಾರ್ಯಾಚರಣೆ ವೇಳೆ ಕಾಡಿನಲ್ಲಿರುವ ಇತರೇ ಆನೆಗಳನ್ನೂ ಸೆರ ಹಿಡಿಯಬೇಕೆಂದು ಒತ್ತಾಯಿಸಿ ಅರಣ್ಯ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳ ಜೊತೆ ಗ್ರಾಮಸ್ಥರು ತೀವ್ರ ವಾಗ್ವಾದ ನಡೆಸಿರುವುದಾಗಿ ವರದಿಯಾಗಿದೆ.

Ad Widget

ಘಟನೆ ಸಂದರ್ಭದಲ್ಲಿ ಸಾವಿರಾರು ಜನ ನೆರೆದಿದ್ದರು. ಒಂದು ಹಂತದಲ್ಲಿ ಕೆಲವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಡಿವೈಎಸ್ಪಿ ಗೆ ಹಲ್ಲೆ ನಡೆದಿದೆ ಎಂದು ವಿಡಿಯೋ ದಲ್ಲಿ ಮಾತನಾಡೋದು ಕೇಳಿಬರುತ್ತದೆ . ಇಲಾಖೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾರೆ.

Ad Widget

Ad Widget
ವಾಹನಗಳು ಜಖಂ ಆಗಿರುವ ದೃಶ್ಯ

ಸೆರೆ ಹಿಡಿಯಲಾದ ಕಾಡಾನೆಯನ್ನು ನಾಗರಹೊಳೆ ಮತ್ತಿಗೋಡು ಆನೆ ಶಿಬಿರಕ್ಕೆ ಕೊಂಡೊಯ್ಯುವ ವೇಳೆ ಅಭಿಮನ್ಯು ಹಾಗೂ ಇನ್ನೊಂದು ಸಾಕಾನೆಯನ್ನೂ ಅಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂಬ ಮಾಹಿತಿ ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.

ಕಾರ್ಯಾಚರಣೆ ನಿಲ್ಲಿಸಿಲ್ಲ, ಆನೆಗಳಿಗೆ ಒಂದು ದಿನ ವಿಶ್ರಾಂತಿ ನೀಡಿ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮನವರಿಕೆ ಮಾಡಿದರೂ ಸಮಾಧಾನಗೊಳ್ಳದ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿ, ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಹಾನಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಎರಡು ಪೊಲೀಸ್‌ ಜೀಪ್, ಅರಣ್ಯ ಇಲಾಖೆಯ ಎರಡು ವಾಹನಗಳು ಜಖಂಗೊಂಡಿವೆ ಎಂದು ವರದಿಯಾಗಿದೆ. ಈ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿ ಜನರನ್ನು ಚದುರಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮಧ್ಯರಾತ್ರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.

Leave a Reply

Recent Posts

error: Content is protected !!
%d bloggers like this: