ಪುತ್ತೂರು: ಒಡ್ಯ ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ. 25ರಂದು 6ನೇ ಕರ್ನಾಟಕ ಗಡಿನಾಡ ಸಮ್ಮೇಳನ 2023 ನಡೆಯಲಿದ್ದು, ಸಮ್ಮೇಳನದ ಅಧ್ಯಕ್ಷತೆಯಾನ್ನು ಹಿರಿಯ ಪತ್ರಕರ್ತ ಕಾಸರಗೋಡಿನ ಮಲಾರು ಜಯರಾಮ ರೈ ವಹಿಸಲಿದ್ದಾರೆ ಎಂದು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ. ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ಹೇಳಿದರು.
ಗಡಿನಾಡ ಪ್ರದೇಶದಲ್ಲಿ ಸದಾ ಚಾಲ್ತಿಯಲ್ಲಿರುವ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ಒಡ್ಯ ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಸಹಕಾರದೊಂದಿಗೆ ಕರ್ನಾಟಕ ಘನ ಸರಕಾರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಗಾಳಿಮುಖ ಖಲೀಲ್ ಸ್ವಲಾಹ್ ವಿದ್ಯಾಸಂಸ್ಥೆಯ ಸಂಚಾಲಕ ಅಸ್ಸಯ್ಯದ್ ಹಸನ್ ಅಬ್ದುಲ್ಲ ಇಂಬಿಚಿ ಕೋಯ ತಂಙಳ್ ಆದೂರು, ನಿಡ್ಪಳ್ಳಿ ಹೋಲಿ ರೋಝರಿ ಇಗರ್ಜಿಯ ಧರ್ಮಗುರುಗಳಾದ ಜೈಸನ್ ಲೋಬೋ, ಕಾಟುಕುಕ್ಕೆ ಶ್ರೀ ಮಧ್ವಾಧೀಶ ವಿಠಲದಾಸ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಛೇರ್ಮಾ್ಯನ್ ನಾರಾಯಣನ್ ಅವರ ದಿವ್ಯ ಸಾನಿಧ್ಯದಲ್ಲಿ ಹಿರಿಯ ಸಾಹಿತಿಗಳಾದ ಎಸ್. ಜಿ. ಕೃಷ್ಣ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುಸ್ತಕ ಬಿಡುಗಡೆಯನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಪುಸ್ತಕ ಮಳಿಗೆ ಉದ್ಘಾಟನೆಯನ್ನು ಮಂಗಳೂರು ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಕಲಾ ಪ್ರದರ್ಶನ ಉದ್ಗಾಟನೆಯನ್ನು ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಚಿಗುರು ಹಸ್ತ ಪ್ರತಿ ಬಿಡುಗಡೆಯನ್ನು ಮಂಗಳೂರು ಡಿ.ಡಿ.ಪಿ.ಐ. ಸುಧಾಕರ ಕೆ., ಟ್ರಸ್ಟ್ ನ ಲಾಂಛನವನ್ನು ರೈ ಎಸ್ಟೇಟ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಅಶೋಕ ರೈ ಕೋಡಿಂಬಾಡಿ ಬಿಡುಗಡೆ ಮಾಡಲಿದ್ದಾರೆ. ಗಡಿನಾಡ ಧ್ವನಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿ ಸೋಜಾ, ಮತ್ತು ಮಂಜೇಶ್ವರ ಶಾಸಕರಾದ ಎಕೆಎಂ ಅಶ್ರಫ್ ಪ್ರಶಸ್ತಿ ಪ್ರಧಾನ ಮಾಡಲಿರುವರು. ಮಧು ಪ್ರಪಂಚದ ಸಂಪಾದಕರಾದ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿರುವರು ಎಂದರು.
ಬೆಳಿಗ್ಗೆ 7ರಿಂದ ಪ್ರಾರಂಭವಾಗಲಿರುವ ಭಜನಾ ಕಾರ್ಯಕ್ರಮ ಹಾಗೂ ಸಾಂಸ್ಕಂತಿಕ ವೈಭವ, 9 ಕ್ಕೆ ಸುಂದರಗಿರಿಯಿಂದ ಸಮ್ಮೇಳನ ಸಭಾಂಗಣಕ್ಕೆ ನಡೆಯಲಿರುವ ವೈಭವದ ಮೆರವಣಿಗೆ, ಮಧ್ಯಾಹ್ನ 12 ಗಂಟೆಗೆ ಗಡಿನಾಡು ಹೊರನಾಡು ಕನ್ನಡಿಗರ ಸವಾಲು, ಕನ್ನಡ ಭಾಷಾ ಅಲ್ಪಸಂಖ್ಯಾತರ ಮತ್ತು ಗಡಿನಾಡ ಜನತೆಯ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ನಡೆಯಲಿರುವ ರಾಷ್ಟ್ರೀಯ ವಿಚಾರ ಸಂಕಿರಣ, 2ರಿಂದ ಬಹುಭಾಷಾ ಕವಿಗೋಷ್ಠಿ, 3.15 ಕ್ಕೆ ಬಹಿರಂಗ ಅಧಿವೇಶನ ಮತ್ತು ಠರಾವು ಮಂಡನೆ ನಡೆಯಲಿದೆ. 3.30 ರಿಂದ ನಡೆಯಲಿರುವ ಗಡಿನಾಡ ಧ್ವನಿ ಪ್ರಶಸ್ತಿ ಪ್ರಧಾನ ಮತ್ತು ಸಮಾರೋಪ ಸಮಾರಂಭವು ಪ್ರಥಮ ಗಡಿನಾಡ ಸಮ್ಮೇಳನಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಕಡಂದೇಲು, ಸ್ವಾಗತ ಸಮಿತಿ ಗೌರವಾಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸಂಚಾಲಕ ಕೃಷ್ಣ ಭಟ್ ಬಟ್ಯಮೂಲೆ ಉಪಸ್ಥಿತರಿದ್ದರು