ಬೆಳ್ತಂಗಡಿ:ಅಂಪೈರ್ ತೀರ್ಪಿನ ವಿರುದ್ಧ ರೊಚ್ಚಿಗೆದ್ದ ಆಟಗಾರರು
ಮೈದಾನದಲ್ಲಿ ಹೊಡೆದಾಡಿಕೊಂಡ ಘಟನೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ (Belthangady) ಫೆ.19ರಂದು ನಡೆದಿದೆ.
ಶಾಸಕ ಹರೀಶ್ ಪೂಂಜ ಅಭಿಮಾನಿ ಬಳಗ ಮುಂಡಾಜೆ ವತಿಯಿಂದ ನಡೆದಿದ್ದ ಕಬ್ಬಡಿ ಪಂದ್ಯಾಟದಲ್ಲಿ
ಆಂಪ್ಯಾರ್ ಕೊಟ್ಟ ತಿರ್ಪಿನ ವಿರುದ್ಧ ಆಟಗಾರರು ರೊಚ್ಚಿಗೆದ್ದು ಮಾರಮಾರಿ ಹೊಡೆದಾಟ ನಡೆಸಿಕೊಂಡಿದ್ದಾರೆ. ಫೆ.19ರಂದು ಘಟನೆ ನಡೆದು ವಿಡಿಯೋ ವೈರಲ್ ಆದರೂ ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂದಡ್ಕದ ಆಡೂರು ಮೈದಾನದಲ್ಲಿ ಫೆ.19 ರಂದು ನಡೆದ ಘಟನೆ ನಡೆದಿದೆ ಎನ್ನಲಾಗಿದೆ.
ಶಾಸಕ ಹರೀಶ್ ಪುಂಜ ಅಭಿಮಾನಿಗಳು ಹಾಗೂ ಆಟಗಾರರ ಮಧ್ಯೆ ನಡೆದ ಹೊಡೆದಾಟದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ
ವೈರಲ್ ಅಗ್ತಿದೆ.
ಶಾಸಕ ಹರೀಶ್ ಪೂಂಜ ಅಭಿಮಾನಿ ಬಳಗ ಮುಂಡಾಜೆ ಹಾಗೂ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಬೆಳ್ತಂಗಡಿ ಇವರ ಆಶ್ರಯದಲ್ಲಿ ನಡೆದ ತಾಲೂಕು ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಶಾಸಕ ಹರೀಶ್ ಪೂಂಜ ಉದ್ಘಾಟನೆ ನಡೆಸಿದ್ದರು.
