Vidyamatha Puttur | ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ : ಪುತ್ತೂರು ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದು ‘ಚಾಂಪಿಯನ್ಸ್’

InShot_20230220_181322475
Ad Widget

Ad Widget

Ad Widget

ಪುತ್ತೂರು: 5 ವರ್ಷದಿಂದ 15 ವರ್ಷದ ವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಸ್ತರಗಳಲ್ಲಿ ನಡೆಸಲ್ಪಡುವ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ (National Abacus Exam) ಪುತ್ತೂರು ವಿದ್ಯಾಮಾತಾ ಅಕಾಡೆಮಿಯ ( Vidyamatha Puttur) 10 ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆಯನ್ನು ಮಾಡುವ ಮುಖಾಂತರ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು “ಚಾಂಪಿಯನ್ಸ್” ಎನಿಸಿಕೊಂಡಿದ್ದಾರೆ.

Ad Widget


ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು 5 ವರ್ಷದಿಂದ 15 ವರ್ಷದ ವರೆಗಿನ ವಿದ್ಯಾರ್ಥಿಗಳಿಗೆ ಏಕಾಗ್ರತೆ, ವೇಗ ಮತ್ತು ನಿಖರತೆಯಿಂದ ಜ್ಞಾಪಕ ಶಕ್ತಿಯ ಮೂಲಕ ಲೆಕ್ಕ ಮಾಡುವ, ಒಂದೇ ಸಾಲಿನಲ್ಲಿ ಉತ್ತರಿಸುವ ಕಲೆಯನ್ನು ಕರಗತಗೊಳಿಸುವ “ಅಬಾಕಸ್” ತರಗತಿಗಳನ್ನು ಶನಿವಾರ ಮತ್ತು ಭಾನುವಾರ ರಾತ್ರಿ 7.30 ಯಿಂದ 8:30 ವರೆಗೆ ಆನ್ಲೈನ್ ಮುಖಾಂತರ ನೀಡಲಾಗುತ್ತಿದೆ.

Ad Widget

Ad Widget

Ad Widget

ಅದರ ಜೊತೆಗೆ ವೇದಿಕ ಗಣಿತ, ಮಾನಸಿಕ ಸಾಮರ್ಥ್ಯ ತರಗತಿಗಳನ್ನು ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಅಲ್ಲದೇ ಮುಂಬೈ ಸೇರಿದಂತೆ ಬೇರೆ ಊರುಗಳಲ್ಲಿ ನೆಲೆಸಿರುವವರು ದುಬೈ, ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವರು ಪಡೆದುಕೊಳ್ಳುತ್ತಿದ್ದಾರೆ. ಈ ತರಗತಿಯು ಆನ್ಲೈನಲ್ಲೇ ನಡೆಯುತ್ತಿದ್ದರು ನೇರವಾಗಿ ವಿದ್ಯಾರ್ಥಿಗಳ ಜೊತೆ ತರಬೇತುದಾರರು ಸಂವಹನ ನಡೆಸಿಕೊಂಡು ತರಗತಿಯನ್ನು ನಡೆಸುವುದರಿಂದ ನೇರ ತರಗತಿಗಳಷ್ಟೇ ಅಚ್ಚುಕಟ್ಟಾಗಿ ನಡೆಯುತ್ತಿದೆ.

Ad Widget


ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು – ಶ್ರೀ ಜನಾರ್ಧನ ಗೌಡ ಹಾಗೂ ಶ್ರೀಮತಿ ಮಲ್ಲಿಕಾ ಜೆ ಗೌಡ. ಆಳಂತಡ್ಕ ಪೆರ್ಗೇರಿ ದಂಪತಿಗಳ ಪುತ್ರನಾದ ಪ್ರಖ್ಯಾತ್ ಎ ಜೆ 5ನೇ ತರಗತಿ ಪ್ರಿಯದರ್ಶಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಟ್ಟಂಪಾಡಿ , ಶ್ರೀ ಪ್ರಶಾಂತ್ ರೈ ಬೋಳಂತೂರು ಗುತ್ತು ಹಾಗೂ ಶ್ರೀಮತಿ ವಾಣಿಶ್ರೀ ರೈ ದೇರ್ಲ ದಂಪತಿಗಳ ಪುತ್ರನಾದ ಅನಿಕೇತ್ ರೈ 4ನೇ ತರಗತಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ, ಶ್ರೀ ಸಂದೀಪ್ ಶೆಟ್ಟಿ ಹಾಗೂ ಶ್ರೀಮತಿ ಶ್ವೇತಾ ಎಸ್ ಶೆಟ್ಟಿ ಲಂಡನ್ (ಯು.ಕೆ ) ದಂಪತಿಗಳ ಪುತ್ರನಾದ ಅಥರ್ವ್ ಶೆಟ್ಟಿ 3ನೇ ತರಗತಿ ಮಾರ್ಗರೇಟ್ ಪ್ರೈಮರಿ ಸ್ಕೂಲ್ ರಿಚ್ ಮಂಡ್ ಇಂಗ್ಲೆಂಡ್, ಶ್ರೀ ವಾದಿರಾಜ ಕೆ.ಎಸ್ ಹಾಗೂ ಶ್ರೀಮತಿ ಶ್ರೀವಿದ್ಯಾ ಕೊಂಚಾಡಿ ದೇರೆಬೈಲ್ ದಂಪತಿಗಳ ಪುತ್ರಿಯಾದ ಸಂಸ್ಕೃತಿ ವಿ 5ನೇ ತರಗತಿ ಲೂರ್ಧ್ ಸೆಂಟ್ರಲ್ ಸ್ಕೂಲ್ ಮಂಗಳೂರು, ಶ್ರೀ ರಾಜೇಶ್ ಬಂಗ ಹಾಗೂ ಶ್ರೀಮತಿ ಸೌಮ್ಯ ಆರ್ ಬಂಗ ಬೀರೂರು ಬಂಟ್ವಾಳ ದಂಪತಿಗಳ ಪುತ್ರನಾದ ಮೋಕ್ಷಿತ್ 3ನೇ ತರಗತಿ ವಿಶ್ವಮಂಗಲ ಹೈಸ್ಕೂಲ್ ಕೊಣಾಜೆ, ಶ್ರೀ ಉದಯ್ ರೈ ಬೊಟ್ಯಾಡಿ ಗುತ್ತು ಹಾಗೂ ಶ್ರೀಮತಿ ಸುಚೇತಾ ಯು ರೈ ಸರ್ವೇ ಪುತ್ತೂರು ದಂಪತಿಗಳ ಪುತ್ರಿಯಾದ ಧೃತಿ ಯು ರೈ 8 ನೇ ತರಗತಿ ಸಾಂದೀಪನಿ ಸ್ಕೂಲ್ ನರಿಮೊಗರು, ಶ್ರೀ ನವೀನ್ ಕುಮಾರ್ ಶೆಟ್ಟಿ ಹಾಗೂ ಶ್ರೀಮತಿ ಜಲಜಾಕ್ಷಿ ಶೆಟ್ಟಿ ಇಚ್ಲಂಗೋಡು ಕಾಸರಗೋಡು ದಂಪತಿಗಳ ಪುತ್ರಿಯಾದ ಕೃತಿ ಶೆಟ್ಟಿ 3ನೇ ತರಗತಿ ಶ್ರೀರಾಮ ಸ್ಕೂಲ್ ಕುಬಣೂರು , ಶ್ರೀ ರಾಮಚಂದ್ರ ಶೆಟ್ಟಿ ಹಾಗೂ ಶ್ರೀಮತಿ ರಾಧಿಕಾ ಆರ್ ಶೆಟ್ಟಿ ನಾರ್ಲಾ ತಲಪಾಡಿ ದಂಪತಿಗಳ ಪುತ್ರನಾದ ನಿಶಾನ್ ಶೆಟ್ಟಿ 3ನೇ ತರಗತಿ ಕಾರ್ಮೆಲ್ ಪ್ರೈಮರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕೋಟೆಕಾರ್, ಶ್ರೀ ಗುರುಸ್ಮರಣ್ ಕೆದಿಲಾಯ ಎಂ ಹಾಗೂ ಶ್ರೀಮತಿ ದೀಪಾಶ್ರೀ ಹೊಸಪಾಳ್ಯ ಕುಂಬಳಗೋಡು ಬೆಂಗಳೂರು ದಂಪತಿಗಳ ಪುತ್ರಿಯಾದ ಸನ್ನಿಧಿ ಜಿ 4ನೇ ತರಗತಿ ತಟ್ಟವಾ ಸ್ಕೂಲ್ ಬೆಂಗಳೂರು, ಶ್ರೀ ಸುದರ್ಶನ್ ಹಾಗೂ ಶ್ರೀಮತಿ ಸುಚಿತ್ರಾ ಪುತ್ತೂರು ದಂಪತಿಗಳ ಪುತ್ರಿಯಾದ ಅವಂತಿ ಶರ್ಮಾ 8ನೇ ತರಗತಿ ಸರಕಾರಿ ಪ್ರೌಢ ಶಾಲೆ ಕೊಂಬೆಟ್ಟು.
ವಿದ್ಯಾಮಾತಾ ಅಕಾಡೆಮಿಯ ಸಹ ನಿರ್ದೇಶಕಿ ಶ್ರೀಮತಿ ರಮ್ಯಾ ಭಾಗ್ಯೇಶ್ ರೈ ರವರು ಅಬಾಕಸ್, ವೇದಿಕ ಗಣಿತ, ಮಾನಸಿಕ ಸಾಮರ್ಥ್ಯ ತರಗತಿಗಳನ್ನು ಆನ್ಲೈನ್ ಮುಖಾಂತರ ನಡೆಸುತ್ತಿದ್ದು, ವಿದ್ಯಾಮಾತಾ ಅಕಾಡೆಮಿಯು I. A. S ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಕೂಡಾ ವಿದ್ಯಾರ್ಥಿಗಳಿಗೆ ನೀಡುತ್ತಿದೆ.

Ad Widget

Ad Widget

ಭಾರತೀಯ ಸೇನೆ, ಪೊಲೀಸ್, ಅರಣ್ಯ ಇಲಾಖೆ ವಿವಿಧ ನೇಮಕಾತಿಗಳಲ್ಲಿ, ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿ ಅಧಿಕಾರಿಗಳಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಮುಂದಿನ ಬ್ಯಾಚ್ ಬರುವ ತಿಂಗಳಿನಿಂದ ಪ್ರಾರಂಭವಾಗಲಿದ್ದು, ಪ್ರವೇಶಾತಿಯನ್ನು ಪ್ರಾರಂಭಿಸಲಾಗಿದೆ.

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ ಯಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿದ್ದಕ್ಕೆ ವಿದ್ಯಾರ್ಥಿಗಳನ್ನು ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಅಭಿನಂದಿಸಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿದ್ಯಾಮಾತಾ ಅಕಾಡೆಮಿ ಪುತ್ತೂರು
ಫೋನ್ ನಂ: 9620468869 / 9148935808 / 8590773486

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: