Connect with us

Uncategorized

ಪೆರ್ನೆ : ಫೆ 21ರಿಂದ ಸಪರಿವಾರ ವ್ಯಾಘ್ರ ಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನೇಮೋತ್ಸವ

Ad Widget

Ad Widget

Ad Widget

Ad Widget Ad Widget

ಪೆರ್ನೆ, ಫೆ 20 : ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಮಾಡತ್ತಾರುವಿನ ಕೊರತಿಕಟ್ಟೆ ಎಂಬಲ್ಲಿ ಸ ಪರಿವಾರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಇದೀಗ ಪ್ರತಿಷ್ಠಾ ಬ್ರಹಕಲಶೋತ್ಸವಕ್ಕೆ ಸಿದ್ಧಗೊಂಡಿದೆ. ಇದರ ಕಾರ್ಯಕ್ರಮವು ಫೆ 21 ರಿಂದ ಫೆ 23 ರವರೆಗೆ ನಡೆಯಲಿದೆ.

Ad Widget

Ad Widget

Ad Widget

Ad Widget

Ad Widget

ದಿನಾಂಕ ಫೆ 21 ರಂದು ಬೆ 7:30 ರಿಂದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸಪರಿವಾರ ವ್ಯಾಘ್ರ ಚಾಮುಂಡಿ, ಉಳ್ಳಾಕ್ಲು, ಕೊರತಿ ದೈವ ಮತ್ತು ಗುಳಿಗ ದೈವಗಳ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ.

Ad Widget

Ad Widget

ಸಂಜೆ 4 ರಿಂದ ಮನೋರಂಜನಾ ಕಾರ್ಯಕ್ರಮವು ನಡೆಯಲಿದೆ. 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ದಲ್ಲಿ ಮಾಣಿಲ ಮೋಹನದಾಸ‌ ಶ್ರೀಗಳ ಸಾನಿಧ್ಯದೊಂದಿಗೆ ಮಾಜಿ ಮಂತ್ರಿಗಳಾದ ರಮಾನಾಥ ರೈ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀಕಾಂತ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಚೆನ್ನಪ್ಪ ಗೌಡ (ಯೋಜನಾಧಿಕಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ) ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Ad Widget

Ad Widget

ದಿನಾಂಕ 22 ರಂದು ಬೆಳಗ್ಗೆ 6 ರಿಂದ ಭಂಡಾರದ ಮನೆಯಲ್ಲಿ ಮಹಾಗಣಪತಿ ಹವನ, ಬ್ರಹ್ಮ ಕಲಶ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮವು ಪ್ರಾರಂಭವಾಗಲಿದೆ.

Ad Widget

Ad Widget

ಸಂಜೆ 6:30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ವು ನಡೆಯಲಿದೆ. ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಸಾನಿಧ್ಯದೊಂದಿಗೆ, ಅಧ್ಯಕ್ಷತೆಯನ್ನು ಪುತ್ತೂರಿನ ಶಾಸಕ ಸಂಜೀವ ಮಠಂದೂರು, ಮುಖ್ಯ ಅತಿಥಿಯಾಗಿ ಇಂಧನ ಸಚಿವರಾದ ಸುನಿಲ್ ಕುಮಾರ್ ರವರು ಭಾಗವಹಿಸಲಿದ್ದಾರೆ.

ದಿನಾಂಕ 23 ರ ಬೆಳಗ್ಗೆ 6 ರಿಂದ ಧಾರ್ಮಿಕ ಕಾರ್ಯಕ್ರಮ ಗಳು ಪ್ರಾರಂಭವಾಗಿ, ಬೆ 8.24 ರ ಮೀನಲಗ್ನದ ಶುಭಮುಹೂರ್ತದಲ್ಲಿ ವ್ಯಾಘ್ರ ಚಾಮುಂಡಿ ಉಳ್ಳಾಕ್ಲು, ಗುಳಿಗ ಮಂಚ ದೈವಗಳ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕವು ನಡೆಯಲಿದೆ.

ಬೆಳಗ್ಗೆ 11:30 ಕ್ಕೆ ಧರ್ಮಸಭೆಯು ರಾಮಚಂದ್ರಪುರಮಠದ ರಾಘವೇಶ್ವರ ಶ್ರೀ ಗಳ ಸಾನಿಧ್ಯದೊಂದಿಗೆ, ಸಂಸದ ನಳಿನ್ ಕುಮಾರ್ ಕಟೀಲ್ ರ ಅಧ್ಯಕ್ಷ ತೆಯಲ್ಲಿ, ಮುಖ್ಯ ಅತಿಥಿಯಾಗಿ ಬಂದರು ಸಚಿವ ಎಸ್ ಅಂಗಾರ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಭಾಗವಹಿಸಲಿದ್ದಾರೆ.

ಸಂಜೆ 5:30 ರಿಂದ ರಾಮಕೃಷ್ಣ ಕಾಟುಕುಕ್ಕೆ ಬಳಗದಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸುಮಾರು 500 ವರ್ಷಗಳ ಹಿಂದಿನಿಂದಲೂ ಈ ಪ್ರದೇಶದಲ್ಲಿ ದೈವಸನ್ನಿಧಿಯಿತ್ತು. ಭಾರೀ ವಿಜೃಂಭಣೆಯಿಂದ ದೈವಾರಾಧನೆ ನಡೆಯುತ್ತಿತ್ತು. ಕಾರಣಾಂತರಗಳಿಂದ 175- 180 ವರ್ಷಗಳಿಂದ ಅಲ್ಲಿ ಆ ಆಚರಣೆ, ವಿಜೃಂಭಣೆ ಎಲ್ಲವೂ ನಿಂತಿತ್ತು. ಇದೀಗ ಹಲವಾರು ವರ್ಷಗಳ ಕಾಲ ದೈವಕ್ಕೆ ನಡೆಯುತ್ತಿದ್ದ ಆಚರಣೆಗಳ ನಿಂತ ಕಾರಣ ಈ ಪ್ರದೇಶದ ಸುತ್ತಮುತ್ತ ಅವಘಗಡಗಳು ಸಂಭವಿಸುತ್ತಿತ್ತು. ದೈವಕ್ಕೆ ಸಂಬಂಧಪಟ್ಟ ಕುಟುಂಬಸ್ಥರು ಊರು ಬಿಟ್ಟು ತೆರಳಿಹೋಗಿದ್ದು, ಅನೇಕ ಕಷ್ಟ ನಷ್ಟಗಳಿಂದ ಸರ್ವನಾಶವಾಗಿತ್ತು. ಅದಕ್ಕೆ ಅರ್ಥಿಕ ಅಥವಾ ಭೌತಿಕ ಅಥವಾ ಮಾನಸಿಕ, ಆರೋಗ್ಯ ಹೀಗೆ ಹತ್ತು ಹಲವು ಕಾರಣಗಳು.

ಈ ಗ್ರಾಮದಲ್ಲಿ ಅನೇಕ ಕಷ್ಟ ನಷ್ಟಗಳು, ಅವಘಡಗಳು ನಡೆಯುತ್ತಿತ್ತು. ಅಲ್ಲಲ್ಲಿ ಅಸಹಜ ಸಾವುಗಳು, 13 ನಾಗರಹಾವುಗಳ ಸಾವು ಸಂಭವಿಸುತ್ತಿತ್ತು. ಸುಮಾರು 17 ಆತ್ಮಹತ್ಯೆ ಪ್ರಕರಣಗಳು ನಡೆದಿದೆ. 13 ನಾಗರ ಹಾವುಗಳ ಸರಣಿ ಸಾವುಗಳಾಗಿತ್ತು. ಅದಲ್ಲದೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಈ ಭಾಗದಲ್ಲಿ ಹಾದು ಹೋಗಿರುವುದು, ಆ ಹೆದ್ದಾರಿಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿತ್ತು.
ಅದೊಮ್ಮೆ ಗ್ಯಾಸ್ ಟ್ಯಾಂಕರ್ ಅಪಘಾತದಿಂದ ಸುಮಾರು 11 ಜನ ಮೃತಪಟ್ಟಿದ್ದರು.

ಇಂತಹಾ ಹಲವು ಅವಘಡಗಳು ಸಂಭವಿಸಿದಾಗ ಊರಿನ ಪ್ರಮುಖರೆಲ್ಲಾ ಸೇರಿ ಈ ಗ್ರಾಮದಲ್ಲಿ ಏನೋ ಇದೆ. ಅದಕ್ಕೆ ಪರಿಹಾರ ಮಾಡಬೇಕಾಗಿದೆ. ಹಾಗಾಗಿ ಒಂದು ತಂಡ ರಚಿಸಿಕೊಂಡು ಪರಿಹಾರ ಕ್ರಮಗಳಿಗಾಗಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಆ ಹಿನ್ನೆಲೆಯಲ್ಲಿ ಖ್ಯಾತ ಜ್ಯೋತಿಷಿ ಕೆ ವಿ ಗಣೇಶ್ ಭಟ್ ಮುಳಿಯ ರ ಮುಖೇನ ಅಷ್ಟಮಂಗಳ ಪ್ರಶ್ನೆ ಚಿಂತನೆಯನ್ನು ನಡೆಸಲಾಯಿತು.
ಅಲ್ಲಿ ಅಜೀರ್ಣ ಹೊಂದಿದ್ದ ದೈವಸ್ಥಾನ ಹಾಗೂ ನಿಲುಗಡೆಯಾಗ ಉತ್ಸವಾದಿಗಳ ಬಗ್ಗೆ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿತ್ತು. ಕಾರಣಾಂತರಗಳಿಂದ ಆ ಮುಂದುವರಿದ ಕಾರ್ಯವು ಅರ್ಧದಲ್ಲಿಯೇ ನಿಂತಿತ್ತು.

ಅವಘಡಗಳು ಮತ್ತಷ್ಟು ಹೆಚ್ಚಿದವು. ಈ ಬಾರಿ‌ ಸಾಧ್ಯವೇ ಇಲ್ಲ ಎಂದು ಮತ್ತೊಮ್ಮೆ ಊರ ಪ್ರಮುಖರು ಸೇರಿ ಪ್ರಶ್ನೆ ಚಿಂತನೆಯಲ್ಲಿ ಕಂಡಂತೆ ಪರಿಹಾರ ಮಾರ್ಗವನ್ನು ರೂಪಿಸಲು ಹೊರಟೆ ಬಿಟ್ಟರು. ಆ ಪ್ರಶ್ನೆಯಲ್ಲಿ ಕಂಡುಬಂದಂತೆ ಉತ್ಖನನ ನಡೆಸಿದಾಗ ದೈವಕ್ಕೆ ಹಾಗೂ ನಾಗಬನಕ್ಕೆ ಸಂಬಂಧಿಸಿದ ಹಲವು ಕರುಹುಗಳು ಪತ್ತೆಯಾಗಿತ್ತು. ಇದೀಗ ಕಳೆದ ಮೂರ್ನಾಲ್ಕು ವರ್ಷಗಳಿಂದ ಆ ಸ್ಥಳದಲ್ಲಿ ನೂತನವಾಗಿ ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ ಹಾಗೂ ನಾಗಬನವನ್ನು ನಿರ್ಮಿಸಲಾಗಿದೆ. ಆ ನಿರ್ಮಾಣ‌ ಕಾರ್ಯವು ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳರವರ ನೇತೃತ್ವದಲ್ಲಿ ಊರವರ ತನು ಮನ ಧನ ಸಹಾಯದಿಂದ ಸುಮಾರು ರೂ. 1.25 ಕೋಟಿ ವೆಚ್ಚದಲ್ಲಿ ಪುನರ್ನಿರ್ಮಾಣಗೊಂಡಿದೆ. ಇದರ ಹೊಣೆಯನ್ನು ಈಶ್ವರ ಪ್ರಸನ್ನ ಪೆರ್ನೆಕೋಡಿರವರನ್ನು ಒಳಗೊಂಡ ತಂಡವು ವಹಿಸಿಕೊಂಡಿದ್ದು, ಎಲ್ಲಾ ಕಾರ್ಯಗಳು ಸಾಂಗವಾಗಿ ನಡೆದು ಇದೀಗ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿದೆ.

Click to comment

Leave a Reply

Uncategorized

ಮಠಂತಬೆಟ್ಟು ಗುಲಾಬಿ ಅನಂತ ರೈ  ನಿಧನ

Ad Widget

Ad Widget

Ad Widget

Ad Widget Ad Widget

 ಕೋಡಿಂಬಾಡಿ ಮಠಂತಬೆಟ್ಟು  ಗುಲಾಬಿ ಅನಂತ ರೈ(88) ಯವರು ವಯೋಸಹಜ,ಅಲ್ಪಕಾಲದ ಅಸೌಖ್ಯದಿಂದಾಗಿ ಇಂದು (ಏ 23 ರಂದು ) ನಿಧನರಾದರು.    ಇವರು ಮಠಂತಬೆಟ್ಟು  ದೀ. ಪಟೇಲ್ ಅನಂತ ರೈಯವರ ಧರ್ಮಪತ್ನಿ.

Ad Widget

Ad Widget

Ad Widget

Ad Widget

Ad Widget

 ಮೃತರು ಹಲವು ದಶಕಗಳ ಹಿಂದೆ  ಕೋಡಿಂಬಾಡಿ ಪಂಚಾಯತ್ ಪ್ರತಿನಿಧಿಯಾಗಿದ್ದರು,ಕೋಡಿಂಬಾಡಿ ವನಿತಾ ಸಮಾಜದ ಸ್ಥಾಪಕ ಸದಸ್ಯರಾಗಿದ್ದು,ಧಾರ್ಮಿಕ, ಶೈಕ್ಷಣಿಕ, ಸಾರ್ವಜನಿಕ ಕ್ಷೇತ್ರದಲ್ಲಿ ಜನಾನುರಾಗಿಯಾಗಿದ್ದರು.  

Ad Widget

Ad Widget

ದಕ್ಷಿಣ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾದ ಮುರಳೀಧರ ರೈ ಮಠಂತಬೆಟ್ಟು, ಪುತ್ತೂರು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ನಿರಂಜನ ರೈ ಮಠಂತಬೆಟ್ಟು,ಮತ್ತು ಕೃಷಿಕರಾದ ರಾಜಮಣಿ ರೈ ಯೆಂಬ ಮೂರು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು ಹಾಗೂ ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವರು.
ನಾಳೆ (ಏ 24 ರಂದು) ಸ್ವಗೃಹ ಮಠಂತಬೆಟ್ಟು ಮನೆಯಲ್ಲಿ ಅಂತ್ಯ ಸಂಸ್ಕಾರ ವಿಧಿವಿಧಾನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

Ad Widget

Ad Widget
Continue Reading

Uncategorized

ಸಂತೋ಼ಷ  ವೈವಿಧ್ಯಮಯ ಮಿನುಗುವ ಚಿನ್ನದ ಹಬ್ಬ- ಮುಳಿಯ ಚಿನ್ನೋತ್ಸವಕ್ಕೆ ಚಾಲನೆ – ಹೊಸ ವಿನ್ಯಾಸಗಳನ್ನು ಅನಾವರಣ

Ad Widget

Ad Widget

Ad Widget

Ad Widget Ad Widget

ಪುತ್ತೂರು: 24 ವರ್ಷಗಳ ಹಿಂದೆ ವಜ್ರರತ್ನಗಳ ಪ್ರದರ್ಶನ ಹಬ್ಬದ ಮೂಲಕ ಗ್ರಾಹಕರಿಗೆ ಹತ್ತಿರವಾದ ಪ್ರಸಿದ್ದ ಚಿನ್ನಾಭರಣ ಮಳಿಗೆ ಪುತ್ತೂರಿನ ಮುಳಿಯ ಜ್ಯುವೆಲ್ಸ್ ನಲ್ಲಿ ಪ್ರತಿ ವರ್ಷ ಮುಳಿಯ ಚಿನ್ನೋತ್ಸವ  ಆಯೋಜಿಸಲಾಗಿದ್ದು, ಈ ಬಾರಿಯ ಚಿನ್ನದ ಹಬ್ಬ ” ಮುಳಿಯ ಚಿನ್ನೋತ್ಸವ” ಕ್ಕೆ ಎ.22 ರಂದು ಚಾಲನೆ ನೀಡಲಾಯಿತು.

Ad Widget

Ad Widget

Ad Widget

Ad Widget

Ad Widget

ಮೇ 20ರ ತನಕ ನಡೆಯುವ ಈ ಚಿನ್ನೋತ್ಸವವನ್ನು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಆಫ್ ಸಯನ್ಸ್‌ ನ  ಪ್ರೊ. ಡಾ. ಸೌಮ್ಯ ಅವರು ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಚಿನ್ನಾಭರಣದ ಹೊಸ ವಿನ್ಯಾಸಗಳನ್ನು ಅನಾವರಣಗೊಳಿಸಿದರು.

Ad Widget

Ad Widget

ಆಭರಣದಲ್ಲಿ ಹೊಸ ವಿನ್ಯಾಸದ ಆಕಾಂಕ್ಷೆಯನ್ನು ಮುಳಿಯ ಪೂರೈಸುತ್ತಿದೆ:

Ad Widget

Ad Widget

ಮುಳಿಯ ಚಿನ್ನೋತ್ಸವವನ್ನು ಉದ್ಘಾಟಿಸಿದ ವಿವೇಕಾನಂದ ಇಂಜಿನಿಯರಿಂಗ್ ಆಫ್ ಸಯನ್ಸ್ ಇದರ ಪ್ರೊ. ಡಾ. ಸೌಮ್ಯ ಅವರು ಮಾತನಾಡಿ ನನ್ನ ಸುಮಾರು 30 ವರ್ಷದ ಅನುಭವದಲ್ಲಿ ಮುಳಿಯ ಜ್ಯುವೆಲ್ಸ್ನೊಂದಿಗೆ ಉತ್ತಮ ಸಂಬಂಧವಿದೆ. ಯಾಕೆಂದರೆ ನಮ್ಮ ಕುಟುಂಬ ಸಮೇತ ಇಲ್ಲಿನ ಗ್ರಾಹಕರಾಗಿದ್ದೇವೆ. ಇದಕ್ಕೆ ಕಾರಣ ಮುಳಿಯ ನಂಬಿಕೆಯನ್ನು ಉಳಿಸಿಕೊಂಡಿದೆ. ಇದರೊಂದಿಗೆ ಪ್ರತಿಯೊಬ್ಬರಿಗೂ ನನ್ನ ಆಭರಣ ಇತರರಿಗಿಂತ ಭಿನ್ನ ಹೊಸತನ ಹೊಸ ಶೈಲಿಯಲ್ಲಿರಬೇಕೆಂಬ ಆಸೆ ಇರುತ್ತದೆ. ಅದಕ್ಕೆ ತಕ್ಕಂತೆ ಮುಳಿಯ ಜ್ಯುವೆಲ್ಸ್ ಆ ಹೊಸತನದ ಆಕಾಂಕ್ಷೆಯನ್ನು ಪೂರೈಸುತ್ತಿದೆ ಎಂದ ಅವರು ಇದರ ಜೊತೆಗೆ ಸಿಬ್ಬಂದಿಗಳ ನಗುಮೊಗದ ಸೇವೆ ನಾವು ಚಿನ್ನಾಭರಣ ನೋಡಲು ಬಂದವರು ಖರೀದಿಸುವಷ್ಟರ ಮಟ್ಟಿಗೆ ಹೋಗುತ್ತೇವೆ ಎಂದರು.

Ad Widget

Ad Widget

ಚಿನ್ನೋತ್ಸವದಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಲಭ್ಯ:

ಮುಳಿಯ ಜ್ಯುವೆಲ್ಸ್‌ʼನ  ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ ಉತ್ಸವಗಳನ್ನು ಪುತ್ತೂರಿಗೆ ಪರಿಚಯಿಸಿದ್ದು ಮುಳಿಯದ ವಿಶೇಷತೆ. ಹಿಂದೆ ಗ್ರಾಹಕರು ಹೊಸ  ಶೈಲಿಯ ಚಿನ್ನಾಭರಣ ನೋಡುವ ಆಸೆ ಇದ್ದರೂ ಅದನ್ನು ನೋಡಲು ಬರುತ್ತಿರಲಿಲ್ಲ. ಯಾಕೆಂದರೆ ಅಲ್ಲಿಗೆ ಹೋದರೆ ಏನಾದರೂ ಒಂದು ತೆಗೆದು ಕೊಳ್ಳಬೇಕಾದಿತು ಎಂಬ ಮನೋಭಾವನೆ ಇತ್ತು. ಈ ಕುರಿತು ಅರಿತ ಮುಳಿಯ ಸಂಸ್ಥೆ 2000 ಇಸವಿಯಲ್ಲಿ ಪ್ರಥಮವಾಗಿ ವಜ್ರೋತ್ಸವ ಎಂಬ ಪ್ರದರ್ಶನವನ್ನು ಮುಳಿಯದಲ್ಲಿ  ಆರಂಭಿಸಲಾಯಿತು. ಈ ಪ್ರದರ್ಶನ ಚಿನ್ನದಾಭರಣ ನೋಡುವ ಗ್ರಾಹಕರಿಗೆ ಅನುಕೂಲವಾಯಿತು” ಎಂದರು.  

ಇದೀಗ ಅದನ್ನು ಪ್ರತಿ ವರ್ಷ ಎರಡು ಬಾರಿ ಆಚರಿಸುತ್ತಾ ಬಂದಿದ್ದೇವೆ. ಈ ಚಿನ್ನೋತ್ಸವದಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಸಿಗುತ್ತಿದೆ. ಸೇವೆಗಳು ಉತ್ತಮವಾಗಿರುತ್ತದೆ. ಪ್ರತಿಭಾರಿ ಹೊಸತನವನ್ನು ಪರಿಚಯಿಸುವುದು ನಮ್ಮ ವಿಶೇಷ. ಅದನ್ನು ಈ ಭಾರಿಯೂ ಮಾಡಿದ್ದೇವೆ.  ಈ ಭಾರಿಯೂ 4 ವಿಶೇಷ ಹೊಸ ಶೈಲಿ ಆಭರಣವನ್ನು ಗ್ರಾಹಕರಿಗೆ ಪರಿಚಯ ಮಾಡಲಿದ್ದೇವೆ. ಹಾಗಾಗಿ ಗ್ರಾಹಕರು ಈ ಚಿನ್ನೋತ್ಸವದ ಪ್ರಯೋಜವನ್ನು ಪಡೆಯುವಂತೆ ವಿನಂತಿಸಿದರು.

ಮುಳಿಯ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೌಮ್ಯ ಅತಿಥಿಯನ್ನು ಗೌರವಿಸಿದರು. ಕು.ಪೂಜಿತಾ ಪ್ರಾರ್ಥಿಸಿದರು. ಸಹಪ್ರಭಂದಕ ಯತೀಶ್ ಸ್ವಾಗತಿಸಿದರು. ಪ್ಲೋರ್ ಮೆನೆಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಆನಂದ ಕುಲಾಲ್ ವಂದಿಸಿದರು. ಪ್ರಬಂಧಕ ರಾಘವೇಂದ್ರ ಪಾಟೀಲ್, ಪ್ರೊಡಕ್ಟ್ ಮೆನೇಜರ್ ಪ್ರಶಾಂತ್, ಮಾರುಕಟ್ಟೆ ಪ್ರಬಂಧಕ ಸಂಜೀವ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿ ಮಹೇಂದ್ರ ಸಹಕರಿಸಿದರು.

Continue Reading

Uncategorized

‘ಬಿಂದು’ ಸೇರಿದಂತೆ ಹಲವು ಪ್ಯಾಕ್ಟರಿಗಳಲ್ಲಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್

Ad Widget

Ad Widget

Ad Widget

Ad Widget Ad Widget

ಪುತ್ತೂರು: ಪುತ್ತೂರಿನ ಪುರುಷರಕಟ್ಟೆ ಬಿಂದು ಫ್ಯಾಕ್ಟರಿಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ, ಸಿಬ್ಬಂಧಿಗಳ ಜೊತೆ ಮಾತುಕತೆ ನಡೆಸಿದರು. ಸಂಸ್ಥೆಯ ಎಂಡಿ ಸತ್ಯಶಂಕರ್ ಕೆ ಸ್ವಾಗತಿಸಿದರು.

Ad Widget

Ad Widget

Ad Widget

Ad Widget

Ad Widget

ಚಂದಳಿಕೆ ವೆಂಕಟೇಶ್ವರ ಕ್ಯಾಶ್ಯೂ ಪ್ರಾಸೆಸಿಂಗ್, ಉಕ್ಕುಡ ಶ್ರೀ ಶಾರದಾ ಪ್ರಾಸೆಸರ್ಸ್ ಗೇರುಬೀಜ ಸಂಸ್ಕರಣಾ ಘಟಕ ಹಾಗೂ ನೆಹರುನಗರ ಮಾಸ್ಟರ್ ಪ್ಲಾನರಿಗೆ ಲೋಕಸಭಾ‌ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರು ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದರು.

Ad Widget

Ad Widget

ಮಾಸ್ಟರ್ ಪ್ಲಾನರಿಯ ಆನಂದ್ ಎಸ್.ಕೆ., ಅಕ್ಷಯ್ ಎಸ್.ಕೆ., ಅರ್ಜುನ್ ಎಸ್.ಕೆ., ಆಕಾಶ್ ಎಸ್.ಕೆ., ಪ್ರಭಾಕರ್ ಎಂಎನ್., ಚಂದ್ರಶೇಖರ್ ಭಟ್, ಕ್ಯಾಶ್ಯೂ ಫ್ಯಾಕ್ಟರಿ ಮ್ಯಾನೇಜರ್ ಅಮರನಾಥ್ ಪೈ, ದೀಕ್ಷಿತ್ ರಾಜ್, ಮಾಜಿ ಶಾಸಕಿ ಶಕುಂತಲ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೇಸ್‍ನ ಅಧ್ಯಕ್ಷರಾದ ಎಂಬಿ ವಿಶ್ವನಾಥ ರೈ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್, ಕೆಪಿಸಿಸಿ ಪ್ರ. ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಸೇವಾದಳ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಮುರಳೀಧರ ರೈ ಮಠಂತಬೆಟ್ಟು, ಕೌಶಲ್ ಪ್ರಸಾದ್, ರಮಾನಾಥ ವಿಟ್ಲ, ವಿ.ಕೆ.ಎಂ. ಅಶ್ರಫ್, ಅಬ್ದುಲ್ ರಹಿಮಾನ್, ರಾಮಣ್ಣ ಪಿಲಿಂಜ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಅಧ್ಯಕ್ಷ, ವಿಟ್ಲ ನಗರ ಉಸ್ತುವಾರಿ ಉಲ್ಲಾಸ್ ಕೋಟ್ಯಾನ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ವಿ.ಎ. ರಶೀದ್ ವಿಟ್ಲ, ಮೊದಲಾದವರು ಉಪಸ್ಥಿತರಿದ್ದರು.

Ad Widget

Ad Widget

ಬಿಂದು ಪ್ಯಾಕ್ಟರಿಗೆ ಹೋಗುವ ಸಂದರ್ಭ ಚುನಾವಣಾ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರ. ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಅನಿತಾ ಹೇಮನಾಥ ಶೆಟ್ಟಿ, ಅಮಲ ರಾಮಚಂದ್ರ, ಮಹೇಶ್ ಅಂಕೊತ್ತಿಮಾರ್, ಪ್ರಸಾದ್ ಕೌಶಲ್ ಶೆಟ್ಟಿ, ಹೊನ್ನಪ್ಪ ಪೂಜಾರಿ, ವೇದನಾಥ ಸುವರ್ಣ, ಪ್ರಕಾಶ ಪುರುಷರಕಟ್ಟೆ, ರವಿಪ್ರಸಾದ್ ಶೆಟ್ಟಿ ಬನ್ನೂರು, ವಿಜಯ್ ಕುಮಾರ್ ಸೊರಕೆ, ಕೃಷ್ಣಪ್ರಸಾದ್ ಆಳ್ವ, ಮೊದಲಾದವರು ಉಪಸ್ಥಿತರಿದ್ದರು ‌

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading