ಪುತ್ತೂರು. “ಕಾಂಗ್ರೆಸ್ ಪಕ್ಷದ ಸರಕಾರಗಳು ಮತ್ತು ಶಾಸಕರು ಎಷ್ಟೇ ಅಭಿವೃದ್ದಿ ಕಾರ್ಯಗಳನ್ನು ಮಾಡಿದರೂ, ಬಿಜೆಪಿಯವರು ಹಿಂದೂ – ಮುಸ್ಲಿಂ ಎಂಬ ಭಾವನಾತ್ಮಕ ವಿಷಯಗಳನ್ನು ಯುವಕರ ತಲೆಯಲ್ಲಿ ಹುಟ್ಟು ಹಾಕಿ ಮತ ನಮ್ಮ ಪರವಾಗಿ ಬೀಳದಂತೆ ನೋಡಿಕೊಳ್ಳುತ್ತಾರೆ. ಈ ಪ್ರವೃತ್ತಿಯನ್ನು ಬದಲಿಸುವ ಕಾರ್ಯವನ್ನು ನಮ್ಮ ಪಕ್ಷದ ಕಾರ್ಯಕರ್ತರು ಮಾಡಬೇಕು” ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಭರತ್ ಮುಂಡೋಡಿಯವರು ಕರೆ ನೀಡಿದ್ದಾರೆ.
ಅವರು ಕೋಡಿಂಬಾಡಿ ಗ್ರಾಮ ಮಠಂತಬೆಟ್ಟುವಿನಲ್ಲಿ ನಡೆದ “ ನಮ್ಮ ಬೂತ್ ನಮ್ಮ ಜವಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ನವ ಸಂಕಲ್ಪ ಮಾಹಿತಿ ಕಾರ್ಯಾಗಾರ ಮತ್ತು ಮನೆ ಮನೆ ಪ್ರಚಾರ ಉದ್ಘಾಟನೆ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಭೇತಿ ನೀಡಿದರು.
“ ಬಿಜೆಪಿಯವರು ಅಲ್ಲಲ್ಲಿ ಹಿಂದೂ ಹೃದಯ ಸಂಗಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಹಿಂದೂ ಧರ್ಮದ ಅಭಿವೃದ್ದಿಗಾಗಿ, ಅಸಹಾಯಕ ಹಿಂದೂಗಳ ನೆರವು ನೀಡಲು ಹಿಂದೂ ಸಂಗಮವಾಗಬೇಕು ಆದರೇ ಪರ ಧರ್ಮ ನಿಂದನೆ ಮಾಡಲು ನಮಗೆ ಹಿಂದೂ ಸಂಗಮದ ಅಗತ್ಯವಿಲ್ಲ. ಇದನ್ನು ಜನರಿಗೆ ಪರಿಣಾಮಕಾರಿಯಾಗಿ ಮಟ್ಟಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು “ ಎಂದರು.

“ ಕಾರ್ಯಕರ್ತರು ಮೊದಲು ಮನೆಯವರಿಗೆ ಬೇಕಾದವರು ಆಗಬೇಕು,ಬಳಿಕ ನೆರೆಹೊರೆಯವರಿಗೆ, ಆಮೇಲೆ ಊರಿನವರಿಗೆ ಬೇಕಾದವನಾದರೇ ಮಾತ್ರ ಪಕ್ಷ ಬೆಳೆಸಲು ಸಾಧ್ಯ. ಕಾರ್ಯಕರ್ತರು ಇಂತಹ ವ್ಯಕ್ತಿತವನ್ನು ಬೆಳೆಸಬೇಕು ” ಎಂದರು.
ಇನ್ನೊರ್ವ ತರಭೇತುದಾರ ಎಂ .ಜಿ ಹೆಗ್ಗಡೆಯವರು ಮಾತನಾಡಿ “ ಬ್ರೀಟಿಷರು ದೇಶವನ್ನು ಬಿಟ್ಟು ಹೋದ ಸಂದರ್ಭ ದೇಶದ ಆರ್ಥಿಕ ಸಾಮಾಜಿಕ ಸ್ಥಿತಿ ಅದೋಗತಿಯಲ್ಲಿತ್ತು. ಆಹಾರ, ರಸ್ತೆ, ಶಿಕ್ಷಣ, ಶುದ್ದ ನೀರು ಹೀಗೆ ಮೂಲಭೂತ ಸಮಸ್ಯೆಗಳು ತಾಂಡಾವಾಡುತ್ತಿದ್ದ ದೇಶವನ್ನು ಮೊದಲ ಪ್ರಧಾನಿ ನೆಹರೂ ಸೇರಿದಂತೆ ಎಲ್ಲ ಪ್ರಧಾನಿಗಳು ಅಭಿವೃದ್ದಿಯತ್ತ ಕೊಂಡೊಯ್ದರು . ಇದನ್ನು ನಮ್ಮ ಕಾರ್ಯಕರ್ತರು ತಮ್ಮ ಮನೆ ಮನೆ ಭೇಟಿಯ ವೇಳೆ ಮತದಾರರರಗೆ ವಿವರಿಸಬೇಕು ಎಂದರು.

ಬಿಜೆಪಿಯವರು ತಮ್ಮ ಅಡಳಿತದ ವೈಫಲ್ಯವನ್ನು ಮುಚ್ಚಿ ಹಾಕಲು ನಕಲಿ ಹಿಂದೂತ್ವವನ್ನು ಗುರಾಣಿಯಾಗಿ ಬಳಸುತ್ತಿದ್ದು, ಇದನ್ನು ಮತದಾರರ ಮನಸ್ಸಿನಿಂದ ತೊಡೆದುಹಾಕುವ ಸಾಮಾರ್ಥ್ಯವನ್ನು ನಮ್ಮ ಕಾರ್ಯಕರ್ತರು ಬೆಳೆಸಿಕೊಳ್ಳಬೇಕು. ಮುಂದಿನ ಚುನಾವಣೆಯವರೆಗೆ ಕಾರ್ಯಕರ್ತರು ಭಾವಹಿಸುವ ಪ್ರತಿ ಕಾರ್ಯಕ್ರಮ, ಸಭೆ ಸಮಾರಂಭ , ಮನೆ ಭೇಟಿಯ ವೇಳೆ ಪಕ್ಷದ ಪರ ಪ್ರಚಾರ ಕಾರ್ಯ ಮಾಡಬೇಕು , ಬಿಜೆಪಿ ಸಾಂಸ್ಕೃತಿಕ ರಾಜಕಾರಣವನ್ನು ಹಿಮ್ಮೆಟ್ಟಿಸದಿದ್ದರೇ ಕಾಂಗ್ರೆಸ್ ಗೆಲ್ಲುವುದಿಲ್ಲ . ಸಮಾಜದಲ್ಲಿ ಧರ್ಮಗಳ ನಡುವಿನ ಕಂದಕವು ವಿಸ್ತಾರವಾಗಿ ದೇಶಕ್ಕೂ ಹಾನಿಯಾಗಲಿದೆ ಎಂದರು .
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಅಶೋಕ್ ಕುಮಾರ್ ರೈವರು ಮಾತನಾಡಿ” ಪಕ್ಷದ ಕಾರ್ಯಕರ್ತರು ನಾವು ಗೆಲ್ಲಲಿದ್ದೇವೆ ಎಂಬ ಹುಮ್ಮಸ್ಸಿನಲ್ಲಿ ಕೆಲಸ ಮಾಡಬೇಕು . ಮತದಾರರ ಪಟ್ಟಿಗೆ ಹೆಚ್ಚು ಹೆಚ್ಚು ಮತದಾರರನ್ನು ಸೇರಿಸುವ ಕಾರ್ಯ ಮಾಡಬೇಕು. ಪ್ರತಿ ಬೂತ್ ನಲ್ಲೂ ಅಲ್ಲಿನ ಕಾರ್ಯಕರ್ತರು ಪಕ್ಷದ ಪರವಾಗಿ ಬ್ಯಾನರ್ ಗಳನ್ನು ಹಾಕಬೇಕು ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮ ಸಂಘಟಿಸಿದ ಕೋಡಿಂಬಾಡಿ ಬೂತ್ 52 ರ ಅಧ್ಯಕ್ಷ ಪ್ರಭಾಕರ ಸಾಮಾನಿ, ವಲಯ ಅಧ್ಯಕ್ಷ ಮೊನ್ನಪ್ಪ ಗೌಡ ಪಮ್ಮನಮಜಲು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಹೊಸ ಪರಂಪರೆಗೆ ಸಾಕ್ಷಿಯಾದರು . ಈ ಮೂಲಕ ಕಾರ್ಯಕರ್ತರಿಂದ ಪಕ್ಷ ಎಂಬ ಸಂದೇಶವನ್ನು ನೀಡುವ ಪ್ರಯತ್ನ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾರತ್ ಮಾತೆಯ ಫೋಟೊ ಇರಿಸಲಾಗಿದ್ದು ಇದಕ್ಕೆ ಭಾಗವಹಿಸಿದ ಕಾಂಗ್ರೆಸ್ ಮುಖಂಡರು ಪುಷ್ಪಾರ್ಚನೆ ಮಾಡಿದರು.
ಮುರಳಿಧರ ರೈ ಮಠಂತಬೆಟ್ಟು ಪ್ರಾಸ್ತವಿಕ ನುಡಿಗಳನ್ನಾಡಿದರು. ನಿರಂಜನ ರೈ ಮಠಂತಬೆಟ್ಟು ಹಾಗೂ ಜಗನ್ನಾಥ ಶೆಟ್ಟಿ ನಡುಮನೆ ಕೋಡಿಂಬಾಡಿ ಕಾರ್ಯಕ್ರಮ ನಿರೂಪಿಸಿದರು.
ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ. ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ರಾಜರಾಮ್ ಕೆಬಿ, ಕಾಂಗ್ರೆಸ್ ಮುಖಂಡರಾದ ಸತೀಶ್ ಕೆಡೆಂಜಿ, ಚಂದ್ರಹಾಸ ರೈ, ಅಶೋಕ್ ಕುಮಾರ್ ರೈ, ರೈ ಎಸ್ಟೇಟ್ , ಡಾ.ರಘು ಬೆಳ್ಳಿಪ್ಪಾಡಿ, ಪ್ರವೀಣ್ ಚಂದ್ರ ಆಳ್ವ, ಮಹಮ್ಮದ್ ಬಡಗನ್ನೂರು, ಜಯ ಪ್ರಕಾಶ್ ಬದಿನಾರು, ಉಮಾನಾಥ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಹುಸೈನ್ ಕೆ ಬಿ ಕೆ, ವಿಕ್ರಮ್ ಶೆಟ್ಟಿ ಅಂತರ, ಯೋಗೀಶ್ ಸಾಮಾನಿ, ಭಾಲಕೃಷ್ಣ ಶೆಟ್ಟಿ, ಅಬ್ದುಲ್ ರೆಹಿಮಾನ್ ಯುನಿಕ್, ಮಿತ್ರದಾಸ ರೈ ಪೆರ್ನೆ,
ಮಲ್ಲಿಕಾ ಅಶೋಕ್ ಕಾಂತಳಿಕೆ,
ಪೂರ್ಣೀಮಾ ಯತೀಶ್ ಶೆಟ್ಟಿ,
ಗೀತಾ ಬಾಬು ಮೊಗೇರ,
ಮೋಹನ್ ಗುರ್ಜಿನಡ್ಕ,
ರಾಮಣ್ಣ ಪಿಲಿಂಜ,
ಎಲ್ಯಣ್ಣ ಪೂಜಾರಿ,
S.k ಮಹಮ್ಮದ್ ವಿಟ್ಲ,
ದಿವಾಕರ ಶೆಟ್ಟಿ ಕಾರ್ನೋಜಿ,
ಯತೀಶ್ ಶೆಟ್ಟಿ ಬರೆಮೇಲು,
ಮತ್ತಿತ್ತರರು ಉಪಸ್ಥಿತರಿದ್ದರು
.