ಪುತ್ತೂರು:ಫೆ 18 : ಜನರಿಗೆ ಉತ್ತಮ ಸೇವೆ ಲಭಿಸಬೇಕೆಂಬ ನಿಟ್ಟಿನಲ್ಲಿ ಸರ್ಕಾರ ನಮ್ಮ ಕ್ಲಿನಿಕ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಮೂಲಕ ಮನೆ ಬಾಗಿಲಿಗೆ ವೈದ್ಯರು, ಆಸ್ಪತ್ರೆಯ ವ್ಯವಸ್ಥೆ ಸಿಗಲಿದೆ. ದಿನದ 8 ಗಂಟೆ ನಮ್ಮ ಕ್ಲಿನಿಕ್ ಮೂಲಕ ಆರೋಗ್ಯ ತಪಾಸಣೆ ಕಾರ್ಯ ನಡೆಯಲಿದೆ. ಸಾರ್ವಜನಿಕರು ಸರ್ಕಾರದ ಯೋಜನೆಯನ್ನು ಬಳಸಿಕೊಳ್ಳಬೇಕಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಬನ್ನೂರಿನಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 15 ನೇ ಹಣಕಾಸು ಯೋಜನೆಯಡಿ ನಿರ್ಮಾಣವಾದ ನಮ್ಮ ಕ್ಲಿನಿಕ್ ಉದ್ಘಾಟನೆ ನಡೆಸಿ ಮಾತನಡಿದರು.
ಪುತ್ತೂರು ನಗರ ಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಸದಸ್ಯೆ ಗೌರಿ ಬನ್ನೂರು, ದ. ಕ. ಮಂಗಳೂರು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಕಿಶೋರ್ ಕುಮಾರ್, ದ.ಕ. ಮಂಗಳೂರು ಜಿಲ್ಲಾ ಆರ್. ಇ. ಹೆಚ್. ಅಧಿಕಾರಿ ಡಾ. ರಾಜೇಶ್ ಬಿ ವಿ, ಪುತ್ತೂರು ತಾಲೂಕು ನೋಡೆಲ್ ಅಧಿಕಾರಿ ಡಾ. ಬದ್ರುದ್ದೀನ್ ಎಂ. ಎನ್, ಉಪ್ಪಿನಂಗಡಿ ಸರಕಾರಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಕೃಷ್ಣನಂದ, ಪುತ್ತೂರು ತಾಲೂಕು ಅರೋಗ್ಯ ಅಧಿಕಾರಿ ಡಾ. ದೀಪಕ್ ರೈ ಉಪಸ್ಥಿತರಿದ್ದರು.


