ಬಂಟ್ವಾಳ : ಕ್ಷುಲ್ಲಕ ಕಾರಣಕ್ಕೆ ಪರಿಚಿತರಿಬ್ಬರ ನಡುವೆ ಗಲಾಟೆ ನಡೆದು ಓರ್ವ ಯುವಕ ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಎಂಬಲ್ಲಿ ಫೆ.18 ರಂದು ಮಧ್ಯಾಹ್ನ ನಡೆದಿದೆ. ಪಾಣೆಮಂಗಳೂರು ಜೈನರ ಪೇಟೆ ನಿವಾಸಿ ಸುಲೈಮಾನ್ ಇರಿತಕ್ಕೆ ಒಳಗಾದವರು. ಸ್ಥಳೀಯ ನಿವಾಸಿ ನಿಸಾರ್ ಇರಿದು ಗಾಯಗೊಳಿಸಿದಾತ.
ಡೈನಿಂಗ್ ಟೇಬಲ್ ಸಾಗಾಟ ಮಾಡಲು ವಾಹನ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಲೇಮಾನ್ ಹಾಗೂ ನಿಸಾರ್ ಮಧ್ಯೆ ಇಂದು ಮಧ್ಯಾಹ್ನ ಜಗಳವಾಗಿದೆ. ಈ ವೇಳೆ ನಿಸಾರ್ ಕತ್ತರಿಯಿಂದ ಸುಲೇಮಾನ್‌ನ ಬಲ ಭುಜಕ್ಕೆ ಇರಿದಿದ್ದಾನೆ.
ಗಾಯಗೊಂಡ ಸುಲೈಮಾನ್ ನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.