college Student Missing ಬೆಳ್ತಂಗಡಿ : ಫೆ 17 : ಪ್ರತಿಷ್ಟಿತ ಕಾಲೇಜಿನ ಡಿಗ್ರಿ ವಿದ್ಯಾರ್ಥಿನಿಯೊರ್ವಳು ವಿದ್ಯಾರ್ಥಿ ನಿಲಯದಿಂದ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಫೆ 4 ರಂದು ನಡೆದಿದೆ. ಉಜಿರೆ ಎಸ್.ಡಿ.ಎಂ ಕಾಲೇಜಿನ, ಪ್ರಥಮ ವರ್ಷದ ಬಿ.ಕಾಂ ಓದುತ್ತಿರುವ ದೀಕ್ಷಿತಾ ( 18 ವರ್ಷ) ಕಾಣೆಯಾದ ವಿದ್ಯಾರ್ಥಿನಿ.
ದೀಕ್ಷಿತಾರವರು ಉಜಿರೆ ಹಾಸ್ಟೇಲ್ ನಲ್ಲಿದ್ದು ಕಾಲೇಜಿಗೆ ಹೋಗಿ ಬರುತ್ತಿದ್ದರು. ಫೆ. 04 ರಂದು ಈಕೆ ಕಾಲೇಜಿನಲ್ಲಿ, ತಾನು ಮನೆಗೆ ಹೋಗಿ ಬರುವುದಾಗಿ ತಿಳಿಸಿ ಕಾಲೇಜಿನಿಂದ ತೆರಳಿದ್ದಾರೆ. ಆದರೇ ಮನೆಗೂ ಹೋಗದೇ ಸಂಬಂಧಿಕರ ಮನೆಗೂ ಹೋಗದೇ ವಾಪಾಸ್ಸು ಕಾಲೇಜಿಗೂ ಬಾರದೇ ಕಾಣೆಯಾಗಿದ್ದಾರೆಂದು ಅವರ ತಂದೆ ಶಶಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾಗಿರುವ ಇವರು ಪತ್ತೆಯಾದಲ್ಲಿ, ಬೆಳ್ತಂಗಡಿ ಪೊಲೀಸ್ ಠಾಣೆ ಯಾ ದಕ್ಷಿಣ ಕನ್ನಡ ಕಂಟ್ರೋಲ್ ರೂಮ್ ಗೆ ತಿಳಿಸುವಂತೆ ಪೊಲೀಸ್ ಇಲಾಖೆ ಕೋರಿದೆ ಹಾಗೂ ಫೆ 16 ರಂದು ಈ ಕುರಿತು ಬೆಳ್ತಂಗಡಿ ಪೊಲೀಸರು ಲುಕ್ ಔಟ್ ನೋಡಿಸನ್ನು ಹೊರಡಿಸಿದ್ದಾರೆ.