ಮಂಗಳೂರು: ತುಳುಭಾಷೆ(Tulu Language) ಯನ್ನ ದೈವಭಾಷೆ ಎಂದ ಶಾಸಕ ಯು.ಟಿ ಖಾದರ್ ಅವರ ಹೇಳಿಕೆಗೆ ಕೊಂಕು ಮಾತನಾಡಿದ ಸಚಿವ ಮಾಧುಸ್ವಾಮಿ ಹೇಳಿಕೆಗೆ ಸಂಘ ಪರಿವಾರದವರು ಹಾಗೂ ದೈವರಾಧಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ತುಳುನಾಡಿನ ಶಾಸಕ ಸಚಿವರ ಮೌನದ ಬಗ್ಗೆಯೂ ವಿರೋಧ ವ್ಯಕ್ತವಾಗುತ್ತಿದೆ. ಮಾಧುಸ್ವಾಮಿ ಕ್ಷಮೆಯಾಚಿಸಬೇಕು ಎಂಬ ಆಗ್ರಹ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.
ಮಾಧುಸ್ವಾಮಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಎಬಿವಿಪಿ ಉತ್ತರ ಪ್ರಾಂತ ಅಧ್ಯಕ್ಷರು, ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಅಂಕಣಕಾರ ರೋಹಿಣಾಕ್ಷ ಶಿರ್ಲಾಲು , ಹೌದು ನಮ್ಮ ದೈವಗಳು ತುಳುವಿನಲ್ಲೇ ಮಾತನಾಡುತ್ತವೆ. ತುಳು ನಮ್ಮ ದೈವದ ಭಾಷೆಯೂ ಹೌದು, ಜನ ಭಾಷೆಯೂ ಹೌದು. ನಮ್ಮ ದೈವಗಳು ತುಳುವಿನಲ್ಲಿ ಮಾತನಾಡುತ್ತವೆ ಎಂಬ ಮಾತಿಗೆ ಸಚಿವ ಮಾಧುಸ್ವಾಮಿ ವ್ಯಂಗ್ಯ ತುಳುನಾಡು ಮತ್ತು ತುಳು ಭಾಷೆಯ ಅಜ್ಞಾನದ ಜತೆಗೆ ಅಹಂಕಾರವೂ ಕಾರಣ. ತುಳುನಾದಡಿನಿಂದಲೇ ಆಯ್ಕೆಯಾಗಿ ಹೋದ ಸಂಸ್ಕೃತಿ ಸಚಿವರು ಹಾಗೂ ಹತ್ತಕ್ಕೂ ಮಿಗಿಲಾದ ಶಾಸಕರೇ ಇಂತಹ ವ್ಯಂಗ್ಯಕ್ಕೆ ನಿಮ್ಮ ಸಮ್ಮತಿಯೂ ಇದೆಯೇ? ಸದನದಲ್ಲಿ ನೀವು ತುಳುನಾಡನ್ನು ಪ್ರತಿನಿಧಿಸುತ್ತಿದ್ದೀರಿ. ಮಾಧುಸ್ವಾಮಿಯವರ ವ್ಯಂಗ್ಯ ನಿಮ್ಮ ತುಳುವಿಗೆ, ನಿಮ್ಮ ದೈವಕ್ಕೆ ಮಾಡಿದ ಅವಮಾನ ಎಂದು ನಿಮಗನಿಸುವುದಿಲ್ಲವೇ? ಎಂದು ತನ್ನ ಫೇಸ್ಬುಕೀನಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆದರರೊಬ್ಬರು ತಮ್ಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಬಿಜೆಪಿಯ ಕರಾವಳಿಯ ಶಾಸಕರು ಮತ್ತು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಯಾರಿ ಭಾಷಿಗ ಶಾಸಕ ಯು.ಟಿ ಖಾದರ್ ಅವರು ತುಳುವನ್ನ ದೈವಭಾಷೆ ಅಂದಾಗ ಅದಕ್ಕೆ ಕೊಂಕು ಮಾತಾಡಿದ ಮಾಧುಸ್ವಾಮಿ ಅವರನ್ನ ತರಾಟೆಗೆ ತೆಗೆದುಕೊಳ್ಳದ ನಿಮ್ಮ ಅಭಿಮಾನ ಸತ್ತು ಹೋಗಿದೆಯಾ?’ ಎಂದು ಕರಾವಳಿಯ ಶಾಸಕರನ್ನು ಪ್ರಶ್ನಿಸಿದ್ದಾರೆ. ಹಾಗೂ ಮಾಧುಸ್ವಾಮಿ ಬಿಜೆಪಿಗರೇ ಅಗಿರಲಿ ತನ್ನ ಮಾತೃಭಾಷೆಗೆ ಅವಮಾನ ಆದಾಗ ವಿರೋಧಿಸದ ನೀವುಗಳು ಆ ವ್ಯಕ್ತಿಯಿಂದ ಬಹಿರಂಗ ಕ್ಷಮೆ ಕೇಳಿಸದಿದ್ದರೆ ನೀವು ನಮ್ಮ ತುಳುನಾಡಿನ ಪ್ರತಿನಿಧಿಗಳೇ ಅಲ್ಲ. ಕನ್ನಡ ರಾಜ್ಯಭಾಷೆ ನಮಗೂ ಗೌರವ ಇದೆ ಹಾಗಂತಾ ನಮ್ಮ ಮಾತೃ ಭಾಷೆಯ ಬಗ್ಗೆ ಕೊಂಕು ನುಡಿಯಲು ಯಾವೊಬ್ಬನಿಗೂ ಅಧಿಕಾರವಿಲ್ಲ ಎಂದಿದ್ದಾರೆ.
ಹಾಗೂ ಖಾದರ್ ಅವರು ರಾಜಕೀಯ ಕಾರಣಕ್ಕೇ ಉಲ್ಲೇಖಿಸಿರಬಹುದು ಆದರೆ ವಿಷಯ నిజ ಅಲ್ವಾ ? ಸಾವಿರಾರು ವರ್ಷ ಇತಿಹಾಸ ಇರೋ ಪಾರ್ದನಗಳು ತುಳುವಲ್ಲೇ ಇರೋದು ಕನ್ನಡದಲ್ಲಿ ಇಲ್ಲ ತಾನೇ ? ದೈವದ ನುಡಿ ಮುಡಿಪುಗಳೆಲ್ಲಾ ತುಳುವಲ್ಲೇ ನಡೆಯೋದು ಇಷ್ಟೆಲ್ಲಾ ಅರಿವಿರುವ ನೀವು ಆದಷ್ಟು ಬೇಗ ಮಾಧುಸ್ವಾಮಿಯಿಂದ ಕ್ಷಮೆ ಕೇಳಿಸಲೇಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕರನ್ನು ಟ್ಯಾಗ್ ಮಾಡಿದ್ದಾರೆ.

ಮತ್ತೊಬ್ಬ ತುಳುನಾಡಿನ ದೈವರಾಧಕರು ತನ್ನ ಫೇಸ್ಬುಕ್ನ ನಲ್ಲಿ ,
ಒಂದು ವೇಳೆ ಬಿಜೆಪಿ ಅಧಿಕಾರದಲ್ಲಿ ಇದ್ದಲ್ಲಿ ದೈವಭಾಷೆಯಾದ ತುಳುಭಾಷೆ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ್ದ ದುರಹಂಕಾರಿ ಕಾಂಗ್ರೆಸ್ ಮಂತ್ರಿಯಿಂದ ರಾಜಿನಾಮೆ ಕೊಡಿಸುತ್ತಿದ್ದೆವು. ಇಂತಿ ತುಳುನಾಡ ಬಿಜೆಪಿ ನಾ*ಯಕರು.. ಎಂದು ಬಿಜೆಪಿಯವರ ಮೌನದ ಬಗ್ಗೆ ಲೇವಡಿ ಮಾಡಿದ್ದಾರೆ.

ಖಾದರ್ ಹೇಳಿಕೆ ವಿಡಿಯೋ ಕೆಲವೇ ಗಂಟೆಗಳಲ್ಲಿ 20ಸಾವಿರದಷ್ಟು ಜನ ನಿಖರ ನ್ಯೂಸ್ ಫೇಸ್ಬುಕೀನಲ್ಲಿ ವೀಕ್ಷಿಸಿ, ವಿಪಕ್ಷ ಉಪನಾಯಕ ಯು ಟಿ ಖಾದರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತುಳುಭಾಷೆಯನ್ನು ಎರಡನೇ ದರ್ಜೆಯ ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡಬೇಕು ತುಳುಭಾಷೆ ದೈವ ದೇವರು ಮಾತನಾಡುವ ಭಾಷೆ , ಅದಕ್ಕೆ ಅದರದ್ದೇ ಆದ ಇತಿಹಾಸ ಲಿಪಿ ಇದೆ ಎಂದು ಸರ್ಕಾರವನ್ನು ವಿಧಾನಸಭೆಯ ಅಧಿವೇಶನದಲ್ಲಿ ಒತ್ತಾಯಿಸಿದರು.