ಮಂಗಳೂರು : ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಸ್ವಾತಿ ಗಡಿಯಾರ್‌ ಗೆ ಪ್ರಥಮ ಬಹುಮಾನ

WhatsApp Image 2023-02-16 at 18.47.58
Ad Widget

Ad Widget

Ad Widget

ಪುತ್ತೂರು: ಫೆ 16 :  ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಶನ್ ಮಂಗಳೂರು ಆರ್‌ಸಿಒ ಪ್ರೊಫೆಷನಲ್, ಒಲಿವಿಯಾ ಮತ್ತು ಸಿವಿ ಪ್ರೊಫೆಷನಲ್ ಸಹಯೋಗದಲ್ಲಿ ನಡೆದ ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಸ್ವಾತಿ ಗಡಿಯಾರ್‌ ಪ್ರಥಮ ಬಹುಮಾನ ಪಡೆದಿದ್ದಾರೆ.

Ad Widget

ಬೆಂದೂರ್‌ವೆಲ್‌ನ ಮಾಯಾ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಗಳೂರು, ಕಾಸರಗೋಡು, ಉಡುಪಿ, ಮಡಿಕೇರಿ, ಕಾರವಾರದ 45ಕ್ಕೂ ಹೆಚ್ಚು ಮೇಕಪ್ ಕಲಾವಿದರು ಭಾಗವಹಿಸಿದ್ದರು. 2k23 ರ ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಸ್ವಾತಿ ಗಡಿಯಾರ್ ಮಂಗಳೂರಿನ ಮರ್ಸಿ ಅಕಾಡೆಮಿಯಲ್ಲಿ ಬ್ಯೂಟಿ ಕಲ್ಚರ್, ಸ್ಕಿನ್, ಹೇರ್‌ನಲ್ಲಿ ಡಿಪ್ಲೊಮಾ ಮಾಡಿದ್ದು, ಝೋರೇನ್ ಸ್ಟುಡಿಯೋ ಬೆಂಗಳೂರಿನ ಪ್ರಮಾಣೀಕೃತ ಮೇಕಪ್ ಕಲಾವಿದೆಯಾಗಿದ್ದಾರೆ.

Ad Widget

Ad Widget

ಇವರು ಮಂಗಳೂರು ಕಾರ್ಸ್ಟ್ರೀಟ್‌ನ ಅನಂತೇಶ್ ಕಾಂಪ್ಲೆಕ್ಸ್ ನಲ್ಲಿರುವ “ಫೈನ್ ಟಚ್ ಗ್ಲಾಮ್ ಸ್ಟುಡಿಯೋ”ದ ಮಾಲೀಕರಾಗಿದ್ದಾರೆ.

Ad Widget

Ad Widget

Ad Widget

Leave a Reply

Recent Posts

error: Content is protected !!
%d bloggers like this: