ಮುಂಬೈ: ವಿವಾದಾತ್ಮಕ ಹೇಳಿಕೆಯಿಂದ ಆಗಾಗ್ಗೆ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮುಸ್ಲಿಂ ರಾಜಕಾರಣಿಯನ್ನು ವಿವಾಹವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಅವರಿಬ್ಬರ ಫೋಟೊ ವೈರಲ್ ಆಗುತ್ತಿದೆ. ಮಹಾರಾಷ್ಟ್ರ ಎಸ್ಪಿ ಯುವ ಘಟಕದ ಅಧ್ಯಕ್ಷ ಫಹಾದ್ ಅಹ್ಮದ್ ಅವರನ್ನು ಕೋರ್ಟ್ ನಲ್ಲಿ ಜನವರಿ 2 ರಂದು ವಿವಾಹವಾಗಿದ್ದಾರೆ.
ಈ ಕುರಿತ ವಿಡಿಯೋವೊಂದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ವರಾ ಭಾಸ್ಕರ್ ಇಂದು ಹಂಚಿಕೊಂಡಿದ್ದಾರೆ. ” ಕೆಲವೊಮ್ಮೆ ನಮ್ಮ ಪಕ್ಕದಲ್ಲೇ ಏನಾದರೂ ಇದ್ದರೂ, ಅದನ್ನು ನಾವು ಇನ್ನೆಲ್ಲೋ ದೂರದಲ್ಲಿ ಹುಡುಕುತ್ತೇವೆ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ ಮೊದಲು ಸ್ನೇಹವನ್ನು ಕಂಡುಕೊಂಡು, ನಮ್ಮನ್ನು ಅರ್ಥೈಸಿಕೊಂಡೆವು. ನನ್ನ ಹೃದಯಕ್ಕೆ ಸ್ವಾಗತ ಫಹಾದ್ ಎಂದು ಸ್ವರಾ ಬರೆದುಕೊಂಡಿದ್ದಾರೆ.
ತಮ್ಮ ಪ್ರೀತಿಯ ಕಥೆಯನ್ನು (Love Story) ವಿವರಿಸುವಾಗ ನಟಿ ತಮ್ಮ ಎಲ್ಲಾ ಸುಂದರ ಕ್ಷಣಗಳನ್ನು ಸೇರಿಸಿರುವಂತಹ ವೀಡಿಯೊವನ್ನು (Video) ಹಂಚಿಕೊಂಡಿದ್ದಾರೆ. ವೀರೆ ದಿ ವೆಡ್ಡಿಂಗ್ ನಟಿ, ಜನವರಿ 6, 2023 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು (Special Marriage Act) ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿದ್ದಾರೆ (Registered) ಎಂದು ತಿಳಿಸಿದ್ದಾರೆ.
Sometimes you search far & wide for something that was right next to you all along. We were looking for love, but we found friendship first. And then we found each other!
— Swara Bhasker (@ReallySwara) February 16, 2023
Welcome to my heart @FahadZirarAhmad It’s chaotic but it’s yours! ♥️✨🧿 pic.twitter.com/GHh26GODbm

ಸ್ವರಾ ಭಾಸ್ಕರ್ ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ ಪೋಸ್ಟ್ಂದೂ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು. ತನ್ನ ತಲೆಯನ್ನು ಯಾರದೋ ತೋಳುಗಳಲ್ಲಿ ಆರಾಮವಾಗಿಟ್ಟುಕೊಂಡು ಮಲಗಿರುವ ಫೋಸ್ ನಲ್ಲಿ ಸ್ವರಾ ಆ ಪೋಸ್ಟ್ ಹಾಕಿದ್ದರು. ಅವರು ಹಾಸಿಗೆಯ ಮೇಲೆ ಮಲಗಿರುವಾಗ ವ್ಯಕ್ತಿಯೊಬ್ಬರು ತೋಳಿನಿಂದ ಅವರನ್ನು ಬಳಸಿ ಹಿಡಿದಿದ್ದರು . ಬಹಳಷ್ಟು ಹಿಂದೆ ಸ್ವರಾ ಭಾಸ್ಕರ್ ಅವರು ಬರಹಗಾರ ಹಿಮಾಂಶು ಶರ್ಮಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್ ಗಳು ಹರಿದಾಡಿದ್ದವು.

ತಮ್ಮ ಮನಸಿನಲ್ಲಿರುವುದನ್ನು ಮುಕ್ತವಾಗಿ ಮಾತನಾಡುವುದಕ್ಕೆ ಹಾಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ವಿಚಾರದಿಂದ ಹೆಸರುವಾಸಿಯಾದ ಸ್ವರ ಭಾಸ್ಕರ್ ತಮ್ಮ ಹೇಳಿಕೆಗಳಿಂದ ಆಗಾಗ ಟ್ರೋಲ್ ಗೂ ಒಳಗಾಗುತ್ತಾರೆ. ಇತ್ತೀಚೆಗೆ ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ನಡಾವ್ ಲಪಿಡ್ ನೀಡಿದ ಹೇಳಿಕೆಗೆ ಸ್ವರಾ ಭಾಸ್ಕರ್ ಬೆಂಬಲವನ್ನು ನೀಡಿ ಟ್ರೋಲ್ ಗೆ ತುತ್ತಾಗಿದ್ದರು.
‘ತನು ವೆಡ್ಸ್ ಮನು’, ‘ಪ್ರೇಮ್ ರಥನ್ ಧನ್ ಪಾಯೋ’, ‘ಅನಾರ್ಕಲಿ ಆಫ್ ಆರಾ’, ‘ವೀರೇ ದಿ ವೆಡ್ಡಿಂಗ್ʼ ಮುಂತಾದ ಸಿನಿಮಾಗಳಲ್ಲಿ ಸ್ವರಾ ನಟಿಸಿದ್ದಾರೆ.
