ಗೇರು ಕೃಷಿಕರಿಗೆ ವರದಾನವಾಗಲಿದೆ cashew protect ವೆಬ್‌ ಸೈಟ್‌ ಹಾಗೂ ಕಿರುತಂತ್ರಾಂಶ – ವಿಶ್ವದಲ್ಲೇ ಮೊದಲ ಬಾರಿಗೆ  ಅಭಿವೃದ್ಧಿಪಡಿಸಿದೆ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ

WhatsApp Image 2023-02-15 at 20.25.50
Ad Widget

Ad Widget

Ad Widget

Cashew protect ಪುತ್ತೂರು : ಫೆ 15 : ಗೇರು ಕೃಷಿಗೆ ಭಾದಿಸುವ  ಕೀಟ,  ರೋಗ ಮತ್ತು ಪೋಷಕಾಂಶ ಕೊರತೆ ಪತ್ತೆ ಹಚ್ಚುವ, ಕೃತಕ ಬುದ್ಧಿಮತ್ತೆ ಆಧಾರಿತ  ವೆಬ್‌ ಸೈಟ್‌  ಹಾಗೂ ಕಿರುತಂತ್ರಾಂಶ – cashew protectನ್ನು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದೆ. ಈ ಮೂಲಕ  ಜಾಗತಿಕ ಮಟ್ಟದಲ್ಲಿ ಮೊದಲ ಬಾರಿಗೆ ಗೇರು ಕೃಷಿಗೆ ಸಂಬಂಧಪಟ್ಟು ತಂತ್ರಾಂಶವೊಂದನ್ನು ಅಭಿವೃದ್ದಿಪಡಿಸಲಾಗಿದೆ

Ad Widget

 ಈ ತಂತ್ರಾಂಸದಿಂದ ಆಸಕ್ತ ಕೃಷಿಕರಿಗೆ ಅಥವಾ ಪ್ರಕೃತಿ ಪ್ರೇಮಿಗಳಿಗೆ ಬೇಕಾಗುವ ಸಸ್ಯ/ಪ್ರಾಣಿ/ಕೀಟ/ಪಕ್ಷಿಗಳ ಪತ್ತೆ ಕೆಲಸಕ್ಕೆ ಈಗ ಪುಸ್ತಕ/ತಜ್ಞ/ಗೂಗಲ್ ಗುರು ಇತ್ಯಾದಿಗಳನ್ನು ಎಡತಾಕುವ  ಅವಶ್ಯಕತೆಯಿಲ್ಲ . ಎಲ್ಲವೂ ಅಂಗೈಯಲ್ಲಿ ದೊರಕಲಿದೆ. ಈವರೆಗೆ   ಗೇರುಬೆಳೆಯ ಕೀಟ/ರೋಗ/ಪೋಷಕಾಂಶ ಕೊರತೆ ಪತ್ತೆಹಚ್ಚುವ ಕಿರುತಂತ್ರಾಂಶ ಲಭ್ಯವಿರಲಿಲ್ಲ . ಆ ಕೊರತೆ ಇದೀಗ ನೀಗಿದೆ.   ಜಾಲತಾಣದ ವಿಳಾಸ – https://cashewprotect.icar.gov.in.  ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಪ್ಲೇಸ್ಟೋರಿನಲ್ಲಿ Cashew Protect ಹೆಸರಿನಲ್ಲಿ ಕಿರುತಂತ್ರಾಂಶ  ಲಭ್ಯ.  ಇದು ಭಾರತೀಯ ಕೃಷಿ ಸಂಶೋಧನಾ  ಪರಿಷತ್ತಿನಡಿಯಲ್ಲಿ ಬರುವ ಎಲ್ಲ ಬೆಳೆ ಸಂಶೋಧನಾ ಕೇಂದ್ರಗಳಲ್ಲಿ ಮೊದಲ ಪ್ರಯತ್ನ ಎಂದು ಹೇಳಲಾಗುತ್ತಿದೆ  

Ad Widget

Ad Widget

ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಗೆ ಸಾಕಷ್ಟು ಕೃಷಿಕರು  ವಾಟ್ಸಪ್ಪಿನಲ್ಲಿ ಛಾಯಾಚಿತ್ರಗಳನ್ನು ಕಳುಹಿಸಿ ಪರಿಹಾರ ಕೇಳುತ್ತಾರೆ. ಆದರೆ ಈ ವ್ಯವಸ್ಥೆಯನ್ನು ನಿರಂತರವಾಗಿ ನಿರ್ವಹಣೆ ಮಾಡುವುದು ಕಷ್ಟಸಾಧ್ಯ.  ಹೀಗಾಗಿ  ಬಳಕೆದಾರರನ್ನು ಸಬಲೀಕರಣ ಮಾಡುವ ಉದ್ದೇಶದಿಂದ ಇದನ್ನು ಅಭಿವೃದ್ದಿ ಪಡಿಸಲಾಗಿದೆ.

Ad Widget

ಈ ಕಿರು ತಂತ್ರಾಂಶದ ಮೂಲಕ ತೆಗೆದ ಫೋಟೊ ಅಥಾವ ರೈತ ಈಗಾಗಲೇ ತೆಗೆದಿರುವ  ಫೋಟೋಗಳನ್ನು ಅಪ್ಲೋಡ್‌ ಮಾಡಿದರೆ, ಸಮಸ್ಯೆಗಳನ್ನು ಪತ್ತೆಹಚ್ಚಿ ಪರಿಹಾರ ಪಡೆಯಬಹುದು. ಅಪ್ಲೋಡ್‌ ಮಾಡಿರುವ  ಫೋಟೋದಲ್ಲಿರುವ ಬಾಧೆಯನ್ನು ಹೋಲುವ ಅಥವಾ  ಅತ್ಯಂತ ಹತ್ತಿರ ಇರುವ ಬಾಧೆಯನ್ನು ತಂತ್ರಾಂಶ ಫೋಟೋ ಸಮೇತ  ನೀಡಿ  ಶೇಕಡಾ ಎಷ್ಟು ಹೋಲುತ್ತದೆ ಎಂಬುದನ್ನೂ ತಿಳಿಸುತ್ತದೆ. ಇದರಿಂದ ಫಲಿತಾಂಶ ಸರಿ ಇದೆಯೋ ಇಲ್ಲವೋ ತಿಳಿಯುತ್ತದೆ.  ಜೊತೆಗೆ ಬಾಧೆಯ ಗುಣಲಕ್ಷಣಗಳನ್ನು ಹಾಗೂ ಪರಿಹಾರೋಪಾಯಗಳನ್ನೂ ಸೂಚಿಸುತ್ತದೆ. ಫಲಿತಾಂಶ ತಪ್ಪಾಗಿದ್ದರೆ/ಸಮಾಧಾನ ಕೊಡದಿದ್ದರೆ ಸಂಬಂಧಪಟ್ಟ ತಜ್ಞರಿಗೆ  ತಂತ್ರಾಂಶದ ಮೂಲಕ ಫೋಟೋಗಳನ್ನು ಕಳುಹಿಸಬಹುದು.  ಜತೆಗೆ   ಸೋಷಿಯಲ್‌ ಮೀಡಿಯಾದ ಮೂಲಕ  ಅನುಭವಸ್ಥರಿಂದ ಉತ್ತರಗಳನ್ನು ಪಡೆಯುವ ಅವಕಾಶವನ್ನು ನೀಡಲಾಗಿದೆ.   

Ad Widget

Ad Widget

ಇದು ಗೇರಿಗೆ ಬಾಧೆ ನೀಡುವ  60 ಕೀಟ, 20 ರೋಗ ಹಾಗೂ ಹತ್ತು ಪೋಷಕಾಂಶಗಳ ಕೊರತೆಯನ್ನು ಪತ್ತೆ ಹಚ್ಚಿ ಪರಿಹಾರ ನೀಡುವ ಉದ್ದೇಶ ಹೊಂದಿದೆ.  ಸದ್ಯಕ್ಕೆ 6  ಕೀಟಗಳು (ಚಹಾ ಸೊಳ್ಳೆ, ಕಾಂಡ ಹಾಗೂ ಬೇರು ಕೊರಕ, ಹಿಟ್ಟು ತಿಗಣೆ, ಎಲೆಕೊರಕ, ರಸ ಹೀರುವ ಕೀಟ, ಹಣ್ಣು ಮತ್ತು ಕಾಯಿಕೊರಕ) ಹಾಗೂ 1 ರೋಗವನ್ನು (ಲೀಫ್ ಬ್ಲೈಟ್) ಮಾತ್ರ ಪತ್ತೆಹಚ್ಚುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿದೆ.  ಗೇರು ಬೆಳೆಯುವ ಎಲ್ಲಾ ಪ್ರದೇಶಗಳ ರೈತರನ್ನು ತಲುಪುವಂತೆ ಹನ್ನೊಂದು ಭಾಷೆಗಳಲ್ಲಿ (ಇಂಗ್ಲೀಷ್, ಹಿಂದಿ, ಕನ್ನಡ, ಗುಜರಾತಿ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ, ಮರಾಠಿ, ಗಾರೋ (ಮೇಘಾಲಯದ್ದು)) ಪ್ರತ್ಯೇಕವಾಗಿ ಮಾಹಿತಿಯನ್ನು ಅಳವಡಿಸಿದ್ದಾರೆ. 

ವಿಶೇಷವೆಂದರೆ ’ಅನಲಿಟಿಕ್ಸ್’ವಿಭಾಗದಲ್ಲಿ ಬಳಕೆದಾರರು ಕೊಟ್ಟ ಫೋಟೋಗಳ ಆಧಾರದ ಮೇಲೆ ವಿಶ್ವದ ವಿವಿಧ ಪ್ರದೇಶಗಳಲ್ಲಿ, ವಿವಿಧ ಕಾಲಘಟ್ಟಗಳಲ್ಲಿ ಕಂಡುಬರುವ ಕೀಟ, ರೋಗ ಹಾಗೂ ಪೋಷಕಾಂಶ ಕೊರತೆಯ ಸಂಖ್ಯೆ ಮತ್ತು ವಿಧಗಳ ವಿಶ್ಲೇಷಣೆ ಸಿಗುತ್ತದೆ. ಇದರ ಮೂಲಕ ಆಯಾ ಪ್ರದೇಶದ ಕೃಷಿಕರನ್ನು ಸಂಭಾವ್ಯ ಹಾನಿಯ ಬಗ್ಗೆ ಎಚ್ಚರಿಸಬಹುದು. ಆದರೆ ಇದು ಸಾಧ್ಯವಾಗುವುದು ಹೆಚ್ಚು ಬಳಕೆದಾರರು ಹೆಚ್ಚೆಚ್ಚು ಬಳಸಿದಾಗ ಮಾತ್ರ. 

 ಇದರ ಪರಿಕಲ್ಪನೆ, ವಿನ್ಯಾಸ ಹಾಗೂ  ನಿರ್ವಹಣೆ ಪುತ್ತೂರಿನ ಐಸಿಆರ್‌, ಡಿಸಿಆರ್ ಹಿರಿಯ ವಿಜ್ಞಾನಿ ಡಾ ಮೋಹನ್ ತಲಕಾಲುಕೊಪ್ಪ. ಫೋಟೋ ಮತ್ತು ತಾಂತ್ರಿಕ ಮಾಹಿತಿಯುನ್ನು ಗೇರಿಗೆ ಸಂಬಂಧಪಟ್ಟ ದೇಶದ ಹದಿನಾಲ್ಕು ವಿಜ್ಞಾನಿಗಳು ಕೊಟ್ಟಿದ್ದಾರೆ.  ಸುಮಾರು ಒಂದೂವರೆ ವರ್ಷದ ಶ್ರಮ.     ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ   ಕರ್ನಾಟಕ ಸರಕಾರದ ಮೂಲಕ   ಒದಗಿಸಿದ ಅರ್ಥಿಕ ಸಹಾಯದಲ್ಲಿ ಈ ಆಯಪ್‌ ಅನ್ನು ಅಭಿವೃದ್ದಿಪಡಿಸಲಾಗಿದೆ

ಈ ತಂತ್ರಾಂಶ ಗೇರು ವಿಜ್ಞಾನಿಗಳಿಗೆ ಪರ್ಯಾಯವೇ? ಸದ್ಯಕ್ಕಂತೂ ಅಲ್ಲ. ಯಾಕೆಂದರೆ ವಿವಿಧ ರೋಗ/ಕೀಟಗಳನ್ನು ಪತ್ತೆಹಚ್ಚಲು ಹಾಗೂ ಪರಿಹಾರೋಪಾಯಗಳನ್ನು ಕಂಡುಹಿಡಿದು ಅದನ್ನು ಪತ್ತೆಹಚ್ಚುವಂತೆ ತಂತ್ರಾಂಶಕ್ಕೆ ಕಲಿಸಲು ವಿಜ್ಞಾನಿಗಳೇ ಬೇಕು. ಆದರೆ ದಾಪುಗಾಲಿಡುತ್ತಿರುವ ತಂತ್ರಜ್ಞಾನದಲ್ಲಿ ಮುಂದೆ ಆಗುವ ಬದಲಾವಣೆಯನ್ನು ಊಹಿಸಲೂ ಅಸಾಧ್ಯ!

Leave a Reply

Recent Posts

error: Content is protected !!
%d bloggers like this: