Arecanut | ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಅಕ್ರಮ ಸಾಗಾಟ ಮಾಡುತ್ತಿದ್ದ ಬರ್ಮಾ ಅಡಿಕೆ ವಶಕ್ಕೆ –

Screenshot_20230215-001152_Twitter
Ad Widget

Ad Widget

Ad Widget

ಮಿಜೋರಾಂನಲ್ಲಿ ನಡೆದ ಗಡಿ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬರ್ಮಾ ಅಡಿಕೆಯನ್ನು (Arecanut) ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಬರ್ಮಾದಿಂದ ಅಕ್ರಮವಾಗಿ ಅಡಿಕೆಯನ್ನು ಭಾರತಕ್ಕೆ ಸಾಗಿಸಲಾಗುತ್ತಿತ್ತು.

Ad Widget

ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿಗಳು ಮತ್ತು ಗಡಿ ಕಸ್ಟಮ್ಸ್ ಇಲಾಖೆಯು ಮಿಜೋರಾಂನ ಮೆಲ್‌ಬುಕ್ ಬಳಿ ಭಾರತ- ಮ್ಯಾನ್ಮಾರ್ ಅಂತರಾಷ್ಟ್ರೀಯ ಗಡಿಯಲ್ಲಿ ಜಂಟಿ ಕಾರ್ಯಾಚರಣೆಯನ್ನು ನಡೆಸಿತ್ತು. ಕಾರ್ಯಾಚರಣೆ ವೇಳೆ ಸುಮಾರು 780 ಚೀಲ ಬರ್ಮಾ ಅಡಿಕೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಡಿಕೆಯನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಶಪಡಿಸಿಕೊಂಡ ಅಡಿಕೆಯ ಮೌಲ್ಯ ಸುಮಾರು 3.51 ಕೋಟಿ ರೂಪಾಯಿ.

Ad Widget

Ad Widget

ಕಳೆದ ಡಿಸೆಂಬರ್‌ನಲ್ಲಿ ಅಸ್ಸಾಂ ಪೊಲೀಸರು ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದ್ದರು.

Ad Widget

ಮಿಜೋರಾಂನಿಂದ ಅಕ್ರಮವಾಗಿ ಸಾಗಿಸಲಾಗಿದ್ದ ಅಡಿಕೆಯನ್ನು ಕ್ಯಾಚಾ‌ ಜಿಲ್ಲೆಯಲ್ಲಿ ಪತ್ತೆ ಮಾಡಿದ್ದರು. ಅಂದು ತೈಲ ಟ್ಯಾಂಕರ್‌ನಲ್ಲಿ ಬಚ್ಚಿಟ್ಟಿದ್ದ 2000 ಕಿಲೋಗ್ರಾಂಗಳಷ್ಟು ಬರ್ಮಾ ಅಡಿಕೆಗಳನ್ನು ಆ ವಶಪಡಿಸಿಕೊಂಡಿದ್ದರು. ಈ ಜಾಲದ ಹಿಂದೆ ಪ್ರಭಾವಿ ವ್ಯಕ್ತಿಗಳೂ ಇದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.

Ad Widget

Ad Widget

ಇದಾದ ಬಳಿಕ ನಾಗ್ಪುರ ನಿವಾಸಿಯನ್ನು ಅಂದು ಬಂಧಿಸಲಾಗಿತ್ತು. ಆತ ಬರ್ಮಾದಿಂದ ಅಕ್ರಮವಾಗಿ ಅಡಿಕೆಯನ್ನು ಕಳ್ಳಸಾಗಣೆ ಮಾಡಿ ವಿವಿಧ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದರು. ಇದೀಗ ಈ ಪ್ರಕರಣದ ಬಗ್ಗೆಯೂ ತನಿಖೆ ನಡೆಸುತ್ತಿದ್ದು, ಅಡಿಕೆ ಕಳ್ಳಸಾಗಾಣಿಗೆಯ ಜಾಲವನ್ನು ಪತ್ತೆ ಮಾಡುತ್ತಿದ್ದಾರೆ.

Leave a Reply

Recent Posts

error: Content is protected !!
%d bloggers like this: