Arecanut | ವಿಧಾನ ಸಭಾ ಚುನಾವಣೆಗೆ ಮುಂಚೆ ಅಡಿಕೆ ಬೆಳೆಗಾರರಿಗೆ ಮೋದಿ ಸರಕಾರದಿಂದ ಭರ್ಜರಿ ಗಿಪ್ಟ್ – ಕನಿಷ್ಠ ಆಮದು ಬೆಲೆ ರೂ 100 ಏರಿಕೆ

FB_IMG_1676394807804
Ad Widget

Ad Widget

Ad Widget

ಮಂಗಳೂರು: ಅಡಿಕೆಯ (Arecanut) ಕನಿಷ್ಟ ಆಮದು ಬೆಲೆಯನ್ನು ಹೆಚ್ಚಿಸಬೇಕೆಂಬ ಅಡಿಕೆ ಬೆಳೆಗಾರರ ಬೇಡಿಕೆಯನ್ನು ಮಾನ್ಯ ಕೇಂದ್ರ ಸರಕಾರ ಮಾನ್ಯ ಮಾಡಿದೆ. ಈ ಹಿಂದೆ ಕನಿಷ್ಟ ಆಮದು ಬೆಲೆ ರೂ 251 ಇತ್ತು. ಇದನ್ನು ರೂ 351 ಕ್ಕೆ ಹೆಚ್ಚಿಸಿ ಆದೇಶಿಸಿದೆ.

Ad Widget

ಈ ಬೆಲೆ ಹೆಚ್ಚಳದಿಂದಾಗಿ ವಿದೇಶದಿಂದ ಆಮದಾಗುವ ಅಡಿಕೆ ಪ್ರಮಾಣದ ಮೇಲೆ ಇನ್ನಷ್ಟು ನಿಯಂತ್ರಣ ಬೀಳಲಿದೆ. ಅಲ್ಲದೇ ದೇಸಿ ಅಡಿಕೆ ಬೆಳೆಯ ಧಾರಣೆ ಅಧಿಕಗೊಳ್ಳುವ ಸಾಧ್ಯತೆಯಿದೆ.

Ad Widget

Ad Widget

Ad Widget

ನಾಲ್ಕು ದಿನಗಳ ಹಿಂದೆ ಪುತ್ತೂರಿನಲ್ಲಿ ನಡೆದ ಕೃಷಿ ಮೇಳದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ” ಅಡಿಕೆಯ ಕನಿಷ್ಟ ಆಮದು ಬೆಲೆ ಹೆಚ್ಚಿಸುವ ಬಗ್ಗೆ ಪ್ರಸ್ತಾವನೆಯನ್ನು ಕೃಷಿ ಇಲಾಖೆಯು ವಾಣಿಜ್ಯ ಇಲಾಖೆಗೆ ಕಳುಹಿಸಿದೆ. ಸದ್ಯದಲ್ಲೆ ಎಂಐಪಿ ರೂ 351 ಆಗಲಿದ್ದು, ಆಗ ಅಡಿಕೆ ರೇಟ್ ಕೆಜಿಗೆ 700ಕ್ಕೆ ತಲುಪಬಹುದು ಎಂದಿದ್ದರು.

Ad Widget

ವಿದೇಶದಿಂದ ಭಾರತಕ್ಕೆ ಬರುವ ಅಡಿಕೆ ಮೇಲೆ ಆಮದು ಕನಿಷ್ಠ ದರವನ್ನು ಉತ್ಪಾದನ ವೆಚ್ಚ ಪರಿಗಣಿಸಿ ಹೆಚ್ಚಳಗೊಳಿಸುವಂತೆ ಕ್ಯಾಂಪ್ಕೋ ನೇತೃತ್ವದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳು ಕೇಂದ್ರದ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌, ಪೀಯೂಷ್‌ ಗೋಯಲ್‌, ಪ್ರಹ್ಲಾದ್‌ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದವು.

Ad Widget

Ad Widget

ವಿದೇಶದಿಂದ ಭಾರತಕ್ಕೆ ಬರುವ ಅಡಿಕೆ ಮೇಲೆ ಆಮದು ಕನಿಷ್ಠ ದರವನ್ನು ಉತ್ಪಾದನ ವೆಚ್ಚ ಪರಿಗಣಿಸಿ ಹೆಚ್ಚಳಗೊಳಿಸುವಂತೆ ಕ್ಯಾಂಪ್ಕೋ ನೇತೃತ್ವದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳು ಕೇಂದ್ರದ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌, ಪೀಯೂಷ್‌ ಗೋಯಲ್‌, ಪ್ರಹ್ಲಾದ್‌ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದವು.

ಕನಿಷ್ಟ ಆಮದು ಬೆಲೆ ಏರಿಕಯಾಗಿರುವುದನ್ನು ಟ್ವೀಟ್ ಮಾಡಿ ಖಚಿತ ಪಡಿಸಿರುವ ಶೋಭಾ ಕರಂದ್ಲಾಜೆಯವರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಗೆ ಧನ್ಯವಾದ ಆರ್ಪಿಸಿದ್ದಾರೆ.

ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿದೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರ.

ಹೊರದೇಶದಿಂದ ಕಡಿಮೆ ಬೆಲೆಗೆ ಅಮದಾಗುತ್ತಿರುವ ಅಡಿಕೆ ರಾಜ್ಯದ ಬೆಳೆಗಾರರನ್ನು ಕಂಗೆಡಿಸಿತ್ತು, ನಮ್ಮ ರಾಜ್ಯದ ಅಡಿಕೆ ಬೆಲೆಯನ್ನು ತೀವ್ರವಾಗಿ ಬಾಧಿಸಿತ್ತು.

ಇಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ನಮ್ಮ ಅಡಿಕೆ ಬೆಳೆಗಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೊರದೇಶಗಳಿಂದ ಆಮದಾಗುವ ಅಡಿಕೆ ಬೆಳೆಯ ಆಮದು ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.

ಹಿಂದಿನ ₹251 ಕನಿಷ್ಠ ಆಮದು ದರವನ್ನು ₹100 ಗಳಿಂದ, ₹351ಕ್ಕೆ ಹೆಚ್ಚಿಸಿದೆ. ಇನ್ನು ಮುಂದೆ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿದರೂ ₹351 ಕ್ಕಿಂತ ಹೆಚ್ಚಿನ ಬೆಲೆಯನ್ನು ಕೊಡಬೇಕಾಗಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದ ಈ ಆದೇಶ, ದೇಶೀಯ ಮಾರುಕಟ್ಟೆಯಲ್ಲಿ ನಮ್ಮ ರೈತರ ಅಡಿಕೆಗೆ ಹೆಚ್ಚಿನ ಬೆಲೆ ದೊರಕಿಸಿಕೊಡುವಲ್ಲಿ ಸಹಾಯಕವಾಗಲಿದೆ.

ವಿದೇಶಿ ಅಡಿಕೆಗಳ ಮೇಲಿನ ಕನಿಷ್ಠ ಆಮದು ಬೆಲೆಯನ್ನು ₹351ಕ್ಕೇ ಏರಿಸುವ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡೆಯನ್ನು ಸ್ವಾಗತಿಸುತ್ತಾ, ಸದಾ ರೈತರ ಹಿತ ಕಾಯುವ ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ನಾನು ಮನಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ಎಂಬ ಬರಹವನ್ನು ಸಚಿವೆ ಪೋಸ್ಟ್ ಮಾಡಿದ್ದಾರೆ.

ಈ ಮೂಲಕ ಬಿಜೆಪಿ ನೇತ್ರತ್ವದ ಸರಕಾರವು ಕರ್ನಾಟಕ ವಿಧಾನಸಭಾ ಚುನಾವಣೆಗಿಂತ ತುಸು ಮುಂಚೆ ರಾಜ್ಯದ ಆಡಿಕೆ ಬೆಳೆಗಾರರಿಗೆ ಭರ್ಜರಿ ಕೊಡುಗೆ ನೀಡಿದಂತಾಗಿದೆ

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: