ಪುತ್ತೂರು, ಫೆ 14 : ಕಾರು ಹಾಗೂ ಸ್ಕೂಟರ್ ಮಧ್ಯೆ ಅಪಘಾತ ಸಂಭವಿಸಿ ಸವಾರ ಗಾಯಗೊಂಡ ಘಟನೆ ಪುತ್ತೂರಿನ ಹೊರ ವಲಯದ ಕೃಷ್ಣನಗರದಲ್ಲಿ ಸಂಭವಿಸಿದೆ. ಪುತ್ತೂರಿನ ಖ್ಯಾತ ಗುತ್ತಿಗೆದಾರರರೊಬ್ಬರ ಪುತ್ರ ಗಾಯಗೊಂಡ ಸ್ಕೂಟರ್ ಸವಾರ.
ಸ್ಕೂಟರ್ ಸುಜುಕಿ ಆ್ಯಕ್ಸೆಸ್ (KA 21 Y 5419) ಸವಾರ ಗಂಗಾಧರ ಎಂಬವರು ಕೃಷ್ಣ ನಗರದ ಹಾಲಿನ ಡಿಪೋಗೆ ಹಾಲುಕೊಟ್ಟು ಹಿಂತಿರುಗುತ್ತಿದ್ದ ವೇಳೆ ಹಿಂದಿನಿಂದ ಬಂದ ಮಾರುತಿ ಸ್ವಿಫ್ಟ್ ( KA 21 Z 5643) ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸುಮಾರು 10ಮೀ ದೂರ ಎಸೆಯಲ್ಪಟ್ಟಿದೆ ಹಾಗೂ ಸವಾರ ಕಾರಿನ ಎದುರಿನ ಗ್ಲಾಸ್ ನ ಮೇಲೆ ಬಿದ್ದು ತಲೆಗೆ ಗಂಭೀರ ವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಳುವನ್ನು ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಹಾಗೂ ಸ್ಕೂಟರ್ ಗಳೆರಡಕ್ಕೂ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ನಗರ ಸಂಚಾರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.