How to block Mobile Phone : ಕಳುವಾದ, ಕಾಣೆಯಾದ ಮತ್ತು ಸುಲಿಗೆಯಾದ Mobile Phone ಗಳನ್ನು ಬ್ಲಾಕ್ ಮಾಡುವುದು ಹೇಗೆ ಗೊತ್ತೆ ? ಇಲ್ಲಿದೆ ಹೊಸ ವಿಧಾನದ ಸಂಪೂರ್ಣ ವಿವರ

WhatsApp Image 2023-02-14 at 14.37.52
Ad Widget

Ad Widget

Ad Widget

How to block Mobile Phone : ಮಂಗಳೂರು : ಫೆ 14 : ಕಳುವಾದ/ಕಾಣೆಯಾದ/ಸುಲಿಗೆಯಾದ Mobile Phone ಗಳು ಸೈಬರ್ ಅಪರಾಧ ಹಾಗೂ  ನಾರ್ಕೋಟಿಕ್ಸ್ ಅಪರಾಧ ಸೇರಿದಂತೆ ಇತರ ಗಂಭೀರ ಅಪರಾಧಗಳಲ್ಲಿ ಬಳಕೆಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ವಿಪರಿತವಾಗಿ ಹೆಚ್ಚಳವಾಗಿದೆ.  ಈ ಹಿನ್ನಲೆಯಲ್ಲಿ ಕೇಂದ್ರ ಟೆಲಿಕಮ್ಯುನಿಕೇಶನ್ ಇಲಾಖೆಯಿಂದ  ಕಳುವಾದ/ಕಾಣೆಯಾದ/ಸುಲಿಗೆಯಾದ Mobile Phone ಗಳನ್ನು ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

Ad Widget

ಹೀಗೆ ಬಳಕೆದಾರರ ಕೈ ತಪ್ಪಿದ ಪೋನ್‌ ಗಳು ದುರ್ಬಳಕೆಯಾಗುವುದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕೂಡ ಮುಂದಾಗಿದ್ದು ಮೊಬೈಲ್‌ ಬ್ಲಾಕ್‌ ಮಾಡುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು Mobile Phone ಗಳನ್ನು ಬ್ಲಾಕ್‌ ಮಾಡುವ ಹೊಸ ವಿಧಾನದ ಬಗ್ಗೆ ಪತ್ರಿಕಾ ಪ್ರಕಟನೆ ಜಾರಿ ಮಾಡಿರುತ್ತಾರೆ. ಅದನ್ನು ಈ ಕೆಳಗೆ ನೀಡಲಾಗಿದೆ

Ad Widget

Ad Widget

ಈ ಕೆಳಕಂಡ ವಿಧಾನಗಳನ್ನು ಅನುಸರಿಸುವುದರ  ಕಳುವಾದ ಯಾ ಕಾಣೆಯಾದ ಯಾ ಸುಲಿಗೆಯಾದ   Mobile Phone ಗಳನ್ನು ಬ್ಲಾಕ್ ಮಾಡಬಹುದಾಗಿದೆ .  

Ad Widget

1. ನಿಮ್ಮ Mobile Phone ಕಳುವು/ಕಾಣೆಯಾದರೆ/ಸುಲಿಗೆಯಾದರೆ ತಾವು ತಕ್ಷಣವೇ KSP E-Lost ಅಪ್ಲಿಕೇಶನ್ ನಲ್ಲಿ ದೂರನ್ನು ಸಲ್ಲಿಸಿ Digital E Acknowledgement ಪಡೆದುಕೊಳ್ಳಬೇಕು. ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳುವುದು. ಸ್ವೀಕೃತಿಯ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು.

Ad Widget

Ad Widget

2. ನೀವು ಕಳೆದುಕೊಂಡಿರುವ ಸಿಮ್ ಕಾರ್ಡ್ ಅನ್ನು ಸಂಬಂಧಪಟ್ಟ ಸರ್ವಿಸ್ ಪ್ರೊವೈಡರ್ ನಿಂದ ಮತ್ತೆ ಪಡೆದುಕೊಂಡು ಒ.ಟಿ.ಪಿ ಪಡೆಯಲು ಸದರಿ ಸಿಮ್ ಕಾರ್ಡನ್ನು ಚಾಲನೆಯಲ್ಲಿ ಇಟ್ಟುಕೊಳ್ಳುವುದು. CEIR PORTAL ನಲ್ಲಿ ಒ.ಟಿ.ಪಿ ಪಡೆಯಲು ಇದು ಅನುಕೂಲವಾಗುತ್ತದೆ.

3. http://www.ceir.gov.in ವೆಬ್ ಸೈಟ್‌ಗೆ ಹೋಗಿ ತಮ್ಮ ಕಳುವಾದ/ಕಾಣೆಯಾದ/ಸುಲಿಗೆಯಾದ Mobile Phone ಗಳ ಮಾಹಿತಿಯನ್ನು ನಮೂದಿಸಬೇಕು. ಸದರಿ ಮಾಹಿತಿ ನಮೂದಿಸಿದ 24 ಗಂಟೆಗಳಲ್ಲಿ ತಮ್ಮ Mobile Phone ಬ್ಲಾಕ್ ಆಗುತ್ತದೆ. ನಂತರ ಯಾರೂ ಕೂಡಾ ಆ Mobile ಅನ್ನು ದುರ್ಬಳಕೆ ಮಾಡಲು ಸಾದ್ಯವಿರುವುದಿಲ್ಲ.

4. ಕಳುವಾದ/ಕಾಣೆಯಾದ/ಸುಲಿಗೆಯಾದ Mobile Phone ಪತ್ತೆಯಾದರೆ ಈಗಾಗಲೇ ತಿಳಿಸಿರುವ CEIR PORTAL ನಲ್ಲಿ ಲಾಗಿನ್ ಆಗಿ Unblock ಮಾಡಿ ಉಪಯೋಗಿಸಬಹುದು. ಹಾಗೆಯೇ ಸಾರ್ವಜನಿಕರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೆ CEIR PORTAL ಮೂಲಕ ಕಳುವಾದ/ಕಾಣೆಯಾದ Mobile Phone ಅನ್ನು Block ಮಾಡಲಾಗುವುದು ಹಾಗೂ ಸದರಿ Mobile Phone ಪತ್ತೆಯಾದಲ್ಲಿ Unblock ಮಾಡಲಾಗುವುದು

Leave a Reply

Recent Posts

error: Content is protected !!
%d bloggers like this: