Ad Widget

Muthalik vs Sunil | ನನ್ನ ಮೇಲೆ 109 ಕೇಸ್ ಹಾಕಲಾಗಿದೆ : ಬಿಜೆಪಿ ಇರುವಾಗಲೇ ಹೆಚ್ಚು ಕೇಸ್ ದಾಖಲಾಗಿದೆ – ಸುನೀಲ್ ಮೊದಲು ಚುನಾವಣೆಗೆ ನಿಂತಾಗ ಏನಿತ್ತು ಈಗ ಆಸ್ತಿ ಎಷ್ಟಾಗಿದೆ ಗೊತ್ತಾಗುತ್ತದೆ ಎಂದ ಮುತಾಲಿಕ್ : ನಿಮ್ಮ ಸ್ಪರ್ಧೆ ನೋಟಿಗಾಗಿ ಎಂದು ಹಿಂದೂ ನಾಯಕನ ಲೇವಡಿ ಮಾಡಿದ ಸುನೀಲ್ ಕುಮಾರ್

InShot_20230213_164444408
Ad Widget

Ad Widget

Ad Widget

ಮಂಗಳೂರು, ಫೆ.12: ನನ್ನ ಮೇಲೆ ಈ ತನಕ 109 ಕೇಸ್ ಹಾಕಲಾಗಿದೆ. ಇದರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೇ ನನ್ನ ಮೇಲೆ ಹೆಚ್ಚು ಕೇಸ್ ದಾಖಲಾಗಿದೆ. ಗಡಿಪಾರು ನಿರ್ಬಂಧನೆ , ಹಿಂದುತ್ವದ ವಿಚಾರದಲ್ಲಿ ನಮ್ಮವರಿಂದಲೇ ಹೆಚ್ಚು ತೊಂದರೆ ಅನುಭವಿಸಿದ್ದೇನೆ ಎಂದು ಶ್ರೀರಾಮ ಸೇನಾ ಕರ್ನಾಟಕ ಇದರ ರಾಷ್ಟ್ರೀಯ ಅಧ್ಯಕ್ಷ, ಕಾರ್ಕಳದ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ (Muthalik vs Sunil) ಹೇಳಿದ್ದಾರೆ.

Ad Widget

Ad Widget

Ad Widget

Ad Widget

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಕಾರ್ಕಳದಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ, ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Ad Widget

Ad Widget

Ad Widget

Ad Widget

ನನಗೆ ರಾಜಕೀಯ ಗೊತ್ತಿಲ್ಲ. ಪ್ರಾಮಾಣಿಕತೆ ಮತ್ತು ನೇರ ಮಾತು ಇದೇ ನನಗೆ ಮುಳ್ಳಾಯಿತು. ನಾನು ಕೂಡಾ ಬಕೆಟ್ ಹಿಡಿದಿದ್ದರೆ, ಅವರ ಬಾಲ ಹಿಡಿಕೊಂಡಿದ್ದರೆ, ಬಿಜೆಪಿಯವರ ಡೋಂಗಿ ಹಿಂದುತ್ವ, ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದರೆ ಎಲ್ಲೊ ಇರುತ್ತಿದ್ದೆ ಎಂದು ಅಭಿಪ್ರಾಯಪಟ್ಟರು..

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ನನಗೆ ಯಾರ ಒತ್ತಡವೂ ಇಲ್ಲ. ನನಗೆ ತುಂಬಾ ಜನರು ಬೆಂಬಲ ನೀಡುತ್ತಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾಗುವುದು ಖಚಿತ ಎಂದರು.

Ad Widget

Ad Widget

ನನ್ನದು ಅಸಲಿ ಹಿಂದುತ್ವ ಮತ್ತು ಭ್ರಷ್ಟಚಾರದ ವಿರುದ್ಧ ಸ್ಪರ್ಧೆಯಾಗಿದೆ. ಕಾರ್ಕಳದಲ್ಲಿ ಜನರನ್ನು ಬೆದರಿಸುವ ವಾತಾವರಣ ಇದೆ ಎಂದು ಹೇಳಿದರು.

ಸಚಿವ ವಿ.ಸುನೀಲ್ ಕುಮಾರ್ ಕಾರ್ಕಳದಲ್ಲಿ ಮೊದಲು ಸ್ಪರ್ಧೆ ಮಾಡುವಾಗ ಅವರ ಆಸ್ತಿ ಎಷ್ಟಿತ್ತು, ಈಗ ಎಷ್ಟು ಹೆಚ್ಚಾಗಿದೆ ಎಂದು ನೋಡಿದಾಗ ಗೊತ್ತಾಗುತ್ತದೆ ಅವರ ಭ್ರಷ್ಟಾಚಾರ. ನನ್ನಲ್ಲಿ ಏನು ಇಲ್ಲ. ನನಗೆ ಬ್ಯಾಂಕ್ ಅಕೌಂಟ್ ಕೂಡಾ ಇಲ್ಲ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ನನ್ನಲ್ಲಿ ದುಡ್ಡಿಲ್ಲ. ಆದರೆ ನನಗೆ ಭಯ ಇಲ್ಲ. ಚುನಾವಣೆಯಲ್ಲಿ ಸ್ಪರ್ಧೆಗೆ ತೊಂದರೆಯಾಗದು ಎಂದರು.

 ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನಾ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಮಂಗಳೂರು ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು ಉಪಸ್ಥಿತರಿದ್ದರು.

ಸಚಿವ ಸುನಿಲ್ ಕುಮಾರ್ ಫೇಸ್ಬುಕ್ ಫೋಸ್ಟ್ ಹಾಕಿದ್ದು, ಅದರಲ್ಲಿ ಹಣಕ್ಕಾಗಿ ಚುನಾವಣೆಗೆ ನಿಂತಿದ್ದಿರಿ ಎಂದು ಹಿರಿಯ ಹಿಂದೂ ನಾಯಕ, ತನ್ನ ಗುರುವನ್ನೇ ಲೇವಡಿ ಮಾಡಿದ್ದಾರೆ.

ಪೋಸ್ಟ್ ಹೀಗಿದೆ:
ಪ್ರಿಯ ಮುತಾಲಿಕ್ ಜೀ,

ನೀವು ಆಮಿಷಕ್ಕೆ ಒಳಗಾಗಿಯೇ ಕಾರ್ಕಳದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೀರಿ ಎಂದು ನಮಗೆ ಮೊದಲೇ ಅನುಮಾನವಿತ್ತು. ಅದೀಗ ನಿಜವಾಗಿದೆ !

ಸ್ವಂತ ಬುದ್ಧಿಯಿಂದ ನೀವು ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.
ನೀವು ಕಾರ್ಕಳದಿಂದ ಸ್ಪರ್ಧೆಗೆ ಇಳಿಯುವುದನ್ನು ನಾನು ಮೊದಲೇ ಸ್ವಾಗತಿಸಿದ್ದೇನೆ. ಈಗ ನಿಮಗೆ ತನು ಮನ ಧನ ಸಹಾಯ ಮಾಡುವವರೂ ಕಾರ್ಕಳಕ್ಕೆ ಬಂದು ಪ್ರಚಾರ ಮಾಡಲಿ ಎಂದು ನಾನು ಆಶಿಸುತ್ತೇನೆ.

ನಿಮ್ಮ ಸ್ಪರ್ಧೆಯ ಉದ್ದೇಶ ಏನೆಂಬುದನ್ನು ಕೆಲ ದಿನಗಳ ಹಿಂದೆ ” ವೋಟು, ನೋಟು” ಹೇಳಿಕೆಯ ಮೂಲಕ ತಿಳಿಸಿದ್ದಿರಿ. ಈಗ ತನುಮನಧನ ಸಹಾಯವಿದೆ ಎಂದು ಹೇಳುತ್ತಿದ್ದೀರಿ. ಒಟ್ಟಾರೆಯಾಗಿ ನಿಮ್ಮ‌ ಈ ಸ್ಪರ್ಧೆಯ ಉದ್ದೇಶ ಕಾರ್ಕಳದ ಹಿತವಲ್ಲ, ಹಿಂದುತ್ವದ ಹಿತವಲ್ಲ, ಜನತೆಯ ಹಿತವೂ ಅಲ್ಲ. ಅದು ” ತನು- ಮನ-ಧನ” – ನೋಟಿಗಾಗಿ ಎಂಬುದು ನಿಮ್ಮ ಹೇಳಿಕೆಯಲ್ಲೇ ಸ್ಪಷ್ಟವಾಗಿದೆ.

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: