ಗ್ರಾಮ ಪಂಚಾಯತ್ ನೌಕರರು ತನ್ನ ಬೇಡಿಕೆಯನ್ನು ಈಡೇರಿಸಲು ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಬೆಳ್ತಂಗಡಿ (Belthangady) ತಾಲೂಕಿನ ಗ್ರಾಮ ಪಂಚಾಯತ್ ಬೆಂಗಳೂರಿಗೆ ಹೋಗಿದ್ದು ಅಲ್ಲಿ ವಸತಿ ವ್ಯವಸ್ಥೆ ಇಲ್ಲದೆ ಪರದಾಡುತಿದ್ದ ನೂರಾರು ನೌಕರರಿಗೆ ಕಾಂಗ್ರೇಸ್ ಯುವನಾಯಕ ರಕ್ಷಿತ್ ಶಿವರಾಂ ಸಹಾಯ ಹಸ್ತ ಚಾಚಿದ್ದರೆ.
ಬೆಳ್ತಂಗಡಿಯ ನೌಕರರು ಭಾಗವಹಿಸಿದ್ದು ಆದರೆ ನೂರಾರು ಪ್ರತಿಭಟನಾಕಾರರಿಗೆ ನಿಲ್ಲಲು ವಸತಿ, ಊಟದ ವ್ಯವಸ್ಥೆ ಇಲ್ಲದೆ ಪರದಾಡುವ ಸಮಯದಲ್ಲಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ, ಕಾಂಗ್ರೆಸ್ ಯುವ ನಾಯಕ ರಕ್ಷಿತ್ ಶಿವರಾಂ ರವರಿಗೆ ಕರೆ ಮಾಡಿ ಪರಿಸ್ಥಿತಿ ಹೇಳಿದಾಗ, ರಕ್ಷಿತ್ ಶಿವಾರಂ ರವರು ಕೂಡಲೇ ಸ್ಪಂದಿಸಿ ಸುಮಾರು ಐನೂರು ಮಂದಿಗೆ ವಸತಿ,ಊಟದ ವ್ಯವಸ್ಥೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತ್ ನೌಕರರ ಮತ್ತು ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ನೌಕರರನ್ನು ಸಿ ಮತ್ತು ಡಿ ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇತ್ತಿಚೆಗೆ ಪ್ರೀಡಂ ಪಾರ್ಕ ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ರಾಜ್ಯ ಅಧ್ಯಕ್ಷ ಜೈ ಪ್ರಸಾದ್ ಬಳ್ಮಾ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಾದ ನಾವು ಇಲಾಖೆಯ ಅಭಿವೃದ್ಧಿಗೆ ಕಳೆದ ಮೂರು ದಶಕಗಳಿಂದ ದುಡಿಯುತ್ತಿದ್ದೇವೆ ಎಂದು ಹೇಳಿದರು.
ಬಡ ಗ್ರಾಮ ಪಂಚಾಯಿತಿ ನೌಕರರಾದ ಬಿಲ್ ಕಲೆಕ್ಟರ್, ಕ್ಲರ್ಕ್, ಡಿ ಇ ಒ, ಡಾಟಾ ಎಂಟ್ರಿ ಆಪರೇಟರ್, ವಾಟರ್ ಮ್ಯಾನ್, ಪಂಪು ಚಾಲಕ ಶುಚಿತ್ವ ನೌಕರರು ಹಾಗೂ ಅಟೆಂಡರ್ ಗಳು ಭವಿಷ್ಯ ನಿಧಿ ಇಲ್ಲದೆ ಆರೋಗ್ಯ ಭದ್ರತೆ, ಸರಿಯಾದ ವೇತನ ಉದ್ಯೋಗ ಭದ್ರತೆ ನಿವೃತ್ತಿ ಜೀವನಕ್ಕೆ ಭದ್ರತೆ ಇಲ್ಲದೆ ಮೂರು ದಶಕಗಳಿಂದ ಕೇವಲ ಕನಿಷ್ಠ ಕೂಲಿ ಪಡೆದು ಕರ್ತವ್ಯ ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು.
ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ 18000 ಕ್ಕೂ ಅಧಿಕ ಗ್ರಾಮ ಪಂಚಾಯತ್ ನೌಕರರು ಸೇರಿ ಹೋರಾಟ ಮಾಡುತ್ತಾ ಬಂದಿದ್ದೇವೆ.
ಕನಿಷ್ಠ ವೇತನ ನೀಡಿ ಜೀತ ದಾಳದಂತೆ ಇಳಿಸಿಕೊಳ್ಳಲಾಗುತ್ತಿದೆ ಗ್ರಾಮೀಣ ಭಾಗಗಳಲ್ಲಿ ರಾಜಕೀಯ ಒತ್ತಡ, ಮೇಲಾಧಿಕಾರಿಗಳ ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿದ್ದು ನಮ್ಮಗಳ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತಿಲ್ಲ.
2022 ರಲ್ಲಿ ಬೆಳಗಾವಿ ಸುವರ್ಣ ಸೌಧದ ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿದವು ಮುಖ್ಯಮಂತ್ರಿಗಳ ಪರವಾಗಿ ಸಚಿವರಾದ ಗೋವಿಂದ ಕಾರಜೋಳ ಆಗಮಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅಶ್ವಾಸನೆ ನೀಡಿದರು ಇಲ್ಲಿಯವರೆಗೆ ನಮ್ಮಗಳ ಬೇಡಿಕೆ ಇಡೇರಲ್ಲಿಲ್ಲ ಎಂದು ಕಿಡಿಕಾರಿದರು.