Connect with us

ದಕ್ಷಿಣ ಕನ್ನಡ

ಟಿಪ್ಪುವನ್ನು ಬೆಂಬಲಿಸುವ ಕಾಂಗ್ರೆಸ್, ಜೆಡಿಎಸ್ ಬೇಕಾ ? ಅವರು 1700 ಪಿಎಫೈ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರೇ ನಾವು ಅದನ್ನು ಶಾಶ್ವತವಾಗಿ ನಿಷೇಧ ಮಾಡಿದೇವು : ಪುತ್ತೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಕಿಚ್ಚು ಹಚ್ಚಿದ ಶಾ

Ad Widget

ಪುತ್ತೂರು : ಫೆ 12 : ಟಿಪ್ಪುವನ್ನು ಬೆಂಬಲಿಸುವ ಕಾಂಗ್ರೆಸ್ ಜೆಡಿಎಸ್‌  ಗೆ ಮತ ಹಾಕಬೇಕೆ ಅಥಾವ ರಾಣಿ ಅಬ್ಬಕನನ್ನು ಬೆಂಬಲಿಸುವ ಬಿಜೆಪಿಗೆ ಮತ ಹಾಕಬೇಕೆ  ಎಂಬುದನ್ನು ನಿರ್ಧರಿಸಿ. ರಾಷ್ಟ್ರ ಭಕ್ತರ ಸೇನೆಯನ್ನು ಹೊಂದಿರುವ ಮೋದಿ ನೇತ್ರತ್ವದ ಬಿಜೆಪಿ ಹಾಗೂ ಕರ್ನಾಟಕವನ್ನು ತನ್ನ ATM ಮಾಡಿಕೊಂಡಿರುವ ಗಾಂಧಿ ಪರಿವಾರದ ಭ್ರಷ್ಟ ಕಾಂಗ್ರೇಸ್ ಇದರಲ್ಲಿ ಒಂದನ್ನು ಜನತೆ ಆಯ್ಕೆ ಮಾಡಬೇಕು.   ಜೆಡಿಎಸ್‌ ಗೆ ಹಾಕುವ ಪ್ರತಿ ಮತವು ಕಾಂಗ್ರೆಸ್‌ ನ ಬುಟ್ಟಿ ಸೇರಲಿದೆ. ನವ ಕರ್ನಾಟಕ ನವ ಭಾರತದ ನಿರ್ಮಾಣಕ್ಕೆ ಬಿಜೆಪಿಗೆ ಮತ ಹಾಕಿ ಎಂದು  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುತ್ತೂರಿನಲ್ಲಿ ಹೇಳಿದರು.

Ad Widget

Ad Widget

Ad Widget

Ad Widget

ತೆಂಕಿಲದ ವಿವೇಕಾನಂದ ಶಾಲೆಯ ಮೈದಾನದಲ್ಲಿ ಶನಿವಾರ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಭಾಷಣ ಮಾಡಿದರು. ಆರಂಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಗುಣಗಾನ ಮಾಡಿದ ಅವರು ಬಳಿಕ ಮೋದಿ ಮತ್ತು ರಾಜ್ಯ ಬಿಜೆಪಿ ಸರಕಾರ ಕೈಗೊಂಡ ಅಭಿವೃದ್ದಿ .ಕಾರ್ಯಗಳನ್ನು ವಿವರಿಸಿದರು. ಅವರು ತಮ್ಮ ಭಾಷಣದ ಕೊನೆಯಲ್ಲಿ ಕ್ಯಾಂಪ್ಕೋ ವೇದಿಕೆಯನ್ನು ಪಕ್ಷದ  ಚುನಾವಣಾ ಪ್ರಚಾರಕ್ಕೂ ಬಳಸಿಕೊಂಡರು.

Ad Widget

Ad Widget

ನನಗೆ ಕೇಂದ್ರ  ಸಚಿವನ ಜತೆಗೆ  ಇನ್ನೂ ಒಂದು ಜವಬ್ದಾರಿಯಿದೆ.  ಅದು ನನ್ನ ಪಕ್ಷದ್ದು. ಅದನ್ನು ಇಲ್ಲಿ  ಹೇಳಬೇಕೇ ?  ಬೇಡವೇ ? ಎಂದು ಸಭಿಕರಲ್ಲಿ  ಕೇಳಿ  ಕ್ಯಾಂಪ್ಕೋ ವೇದಿಕೆಯಲ್ಲೇ  ಚುನಾವಣಾ ಪ್ರಚಾರದ ಶಂಖನಾದ ಮಾಡಿದರು.

Ad Widget

Ad Widget

ಕರ್ನಾಟಕ ರಾಜ್ಯದ  ಅಭಿವೃದ್ದಿ  ಇಲ್ಲಿ ಬಿಜೆಪಿ ಸರಕಾರವಿದ್ದಾಗ ಮಾತ್ರ ಆಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಕರ್ನಾಟಕದ ಪ್ರಗತಿ ಬೇಕಾಗಿಲ್ಲ.  ಯಡಿಯೂರಪ್ಪನವರು ಅವಧಿಯಲ್ಲಿ ರಾಜ್ಯದ  ರೈತರಿಗೆ  ಬಹಳಷ್ಟು ಉಪಕಾರವಾಗಿದ್ದು ಅದನ್ನು ಈಗಲೂ ಜನತೆ ಸ್ಮರಿಸುತ್ತಾರೆ. ಯಡಿಯೂರಪ್ಪ ನವರೇ ಬೆಂಗಳೂರನ್ನು ಮಾಡಿದ್ದು. ಹಾಗಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ತನ್ನಿ ಎಂದರು.

Ad Widget

Ad Widget

ಕಾಂಗ್ರೆಸ್ 1700 ಪಿ ಎಫೈ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರೆ, ಮೋದಿ ಸರಕಾರ ಪಿಎಫೈಯನ್ನು ಶಾಶ್ವತವಾಗಿ ನಿಷೇದಿಸಿತ್ತು. ತುಷ್ಟಿಕರಣದ ರಾಜಕಾರಣ ಮಾಡುವ ಕಾಂಗ್ರೆಸ್ ದೇಶ ದ್ರೋಹಿ ಕೃತ್ಯ ನಡೆಸುವ ಸಂಘಟನೆಗಳನ್ನು ಪೋಷಿಸುತ್ತದೆ. ಉಗ್ರ ಚಟುವಟಿಕೆ ಹಾಗೂ ನಕ್ಸಲಿಸಂನ್ನು ಅಂತ್ಯಗೊಳಿಸಿದ  ಬಿಜೆಪಿಯಿಂದ ಮಾತ್ರ ದೇಶ ಹಾಗೂ ರಾಜ್ಯ ವನ್ನು ಸುರಕ್ಷಿತವಾಗಿಡಲು ಸಾಧ್ಯ.

ಕಾಶ್ಮೀರ ಭಾರತದ ಭಾಗವಲ್ಲವೇ? ನಾವು ಅರ್ಟಿಕಲ್ 370ನ್ನು ನಿಷೇಧಿಸಲು ಮುಂದಾದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಅದನ್ನು ವಿರೋಧಿಸಿತ್ತು.  ಅಲ್ಲಿ ರಕ್ತದ ನದಿಯೆ ಹರಿಯಬಹುದೆಂದು  ಹೆದರಿಸಿತ್ತು.  ಆದರೆ ಈಗಿರುವುದು ದೇಶದಲ್ಲಿ  ಮೋದಿ ಸರಕಾರ. ವಿರೋಧಿಸುವುದು ಬಿಡಿ. ಕೊದಲನ್ನು ಮುಟ್ಟುವ  ತಾಕತ್ತನ್ನು ಯಾರೂ ಪ್ರದರ್ಶಿಸಲಿಲ್ಲ ಎಂದು ವ್ಯಂಗ್ಯವಾಡಿದರು.

ಲಿಂಗಾಯತ ನಾಯಕತ್ವಕ್ಕೆ ಮಣೆ – ಬೊಮ್ಮಾಯಿ ಕೈ ಬಲಪಡಿಸಿ ಎಂದ ಶಾ

ಇನ್ನು ತನ್ನ ಭಾಷಣದ ಮಧ್ಯ ಭಾಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕೊಂಡಾಡಿದರು. ಬಳಿಕ ಸಿಎಂ ಬೊಮ್ಮಾಯಿ ಅವರ ಕೈ ಬಲ ಪಡಿಸಿ ಎಂದ ಅವರು ಸಭಿಕರಲ್ಲಿ ಬೊಮ್ಮಾಯಿ ಸರಕಾರಕ್ಕೆ ಮೆಚ್ಚುಗೆಯಾಗಿ ಕರತಾಡನ ಮಾಡುವಂತೆಯೂ ಕೋರಿದರು . ಈ ಮೂಲಕ ಈ ಬಾರಿಯ ಚುನಾವಣೆಯನ್ನು ಲಿಂಗಾಯಿತ ನಾಯಕತ್ವದಲ್ಲೆ ಎದುರಿಸುವ ಸಂದೇಶ ರವಾನಿಸಿದರು.

 ವಾರದ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಮುಖಂಡ ಎಚ್‌ ಡಿ ಕುಮಾರ ಸ್ವಾಮಿ ಬ್ರಾಹಣ ಸಿಎಂ ಅಸ್ತ್ರ ಪ್ರಯೋಗಿಸಿ ಬಿಜೆಪಿಯನ್ನು ಇಕ್ಕಟ್ಟಿಗೆ ತಳ್ಳಿದ್ದರು. ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿಯವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಬ್ರಾಹ್ಮಣರನ್ನು ಸಿಎಂ ಮಾಡಲಿದೆ ಎಂದು ಕುಮಾರಸ್ವಾಮಿ ಹೇಳಿದ್ದರು,  ಇದು ಲಿಂಗಾಯಿತ ಬೆಲ್ಟ್‌ ನಲ್ಲಿ ಬಿಜೆಪಿಗೆಾದ  ತೊಂದರೆಯಾಗಬಹುದು ಎಂದು ಅರಿತಿರುವ ಶಾ ಅದಕ್ಕೆ ಬೊಮ್ಮಾಯಿ ಕೈ ಬಲ ಪಡಿಸಿ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

Click to comment

Leave a Reply

ಪುತ್ತೂರು

ನರಿಮೊಗರು : ಬೈಕ್ – ಜೀಪು ನಡುವೆ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು – ಇಬ್ಬರು ಮಕ್ಕಳು ಗಂಭೀರ : ಬೈಕನ್ನು ಎಳೆದೊಯ್ದ ಜೀಪು – ಜೀಪು ತೆಗೆಯಲು ಸಾರ್ವಜನಿಕರ ತೀವ್ರ ವಿರೋಧ

Ad Widget

ಪುತ್ತೂರು: ಬೈಕ್ ಮತ್ತು ಜೀಪೊಂದರ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟು ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರು ಸಮೀಪದ ಪಾಪೆತ್ತಡ್ಕ ಎಂಬಲ್ಲಿ ಎ.17ರಂದು ನಡೆದಿದೆ.

Ad Widget

Ad Widget

Ad Widget

Ad Widget

ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಜೀಪು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದೆ.

Ad Widget

Ad Widget

ಬೈಕ್ ಸವಾರ ಮುಂಡೂರು ಗ್ರಾಮದ ಕಡ್ಯ ನಿವಾಸಿ, ದಿ.ಬಾಳಪ್ಪ ಗೌಡರ ಪುತ್ರ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ ಗೌಡ(46.ವ) ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲೋಕೇಶ್ ಅವರ ಜೊತೆ ಬೈಕ್‌ನಲ್ಲಿದ್ದ ಅವರ ಮಕ್ಕಳಾದ ದೀಪ್ತಿ(8.ವ) ಹಾಗೂ ಗಗನ್ (4.ವ) ಗಂಭೀರ ಗಾಯಗೊಂಡಿದ್ದು ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Ad Widget

Ad Widget

ಔಷಧಿಗೆ ಬಂದಿದ್ದರು: ಲೋಕೇಶ್ ಅವರು ತಮ್ಮ ಮಕ್ಕಳಿಗೆ ಔಷಧಿಗೆಂದು ಪುರುಷರಕಟ್ಟೆಗೆ ಹೋಗಿ ಬರುವಾಗ ಈ ಅಪಘಾತ ಸಂಭವಿಸಿದೆ.

Ad Widget

Ad Widget

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಲೋಕೇಶ್ ಗೌಡ ಅವರು ಪತ್ನಿ ಮಾಲತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

ಅಪಘಾತ ನಡೆದ ವೇಳೆ ಘಟನಾ ಸ್ಥಳದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಪುತ್ತೂರು ಜಾತ್ರೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇದ್ದುದರಿಂದ ರಸ್ತೆ ಸಂಪೂರ್ಣ ಬ್ಲಾಕ್ ಆಗಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತ್ತು.

ಜೀಪು ತೆಗೆಯಲು ವಿರೋಧ: ಲಾಠಿ ಪ್ರಹಾರ: ಅಪಘಾತದ ಬಳಿಕ ರಸ್ತೆ ಬದಿಯ ಕಣಿಯಲ್ಲಿದ್ದ ಜೀಪನ್ನು ಅಲ್ಪ ಸಮಯದ ಬಳಿಕ ಚಾಲಕನ ಕಡೆಯವರು ಸ್ಥಳದಿಂದ ತೆರವು ಮಾಡಲು ಪ್ರಯತ್ನಿಸಿದಾಗ ಸ್ಥಳದಲ್ಲಿದ್ದ ಯುವಕರು ಜೀಪು ತೆಗೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎರಡೂ ತಂಡಗಳ ಮಧ್ಯೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಸ್ಥಳದಿಂದ ಚದುರಿಸಿದರು.

ಕಠಿಣ ಕ್ರಮಕ್ಕೆ ಆಗ್ರಹ: ಜೀಪು ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಬವಿಸಿ ಸಾವನ್ನಪ್ಪಿದ್ದು ಜೀಪು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿ ಸೇರಿದ್ದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂತು.

ರಾಂಗ್ ಸೈಡಲ್ಲಿ ಜೀಪು ಬಂದದ್ದೇ ಘಟನೆಗೆ ಕಾರಣ..? ಜೀಪು ಸವಾರ ಜೀಪನ್ನು ರಾಂಗ್ ಸೈಡಲ್ಲಿ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನುವ ಆರೋಪ ಸ್ಥಳೀಯವಾಗಿ ಕೇಳಿ ಬಂದಿದೆ. ಜೀಪಿನಲ್ಲಿ ಐದು ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.

ಬೈಕ್‌ನ್ನು ಎಳೆದೊಯ್ದ ಜೀಪ್..!

ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಬೈಕ್‌ಗೆ ಜೀಪು ಗುದ್ದಿ 150 ಮೀ. ದೂರ ಬೈಕ್‌ನ್ನು ಜೀಪ್ ಎಳೆದುಕೊಂಡು ಹೋಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಬೈಕ್ ಜೀಪಿನ ಅಡಿಯಲ್ಲಿ ಅಪ್ಪಚ್ಚಿಯಾಗಿತ್ತು.

ಗೃಹ ಪ್ರವೇಶದ ಸಂತಸದಲ್ಲಿದ್ದ ಮೃತ ಲೋಕೇಶ್ :

ಮೃತ ಲೋಕೇಶ್ ಅವರ ಮನೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಇನ್ನೇನು ಕೆಲವೇ ಸಮಯದಲ್ಲಿ ಗೃಹ ಪ್ರವೇಶ ಮಾಡುವ ಸಂತಸದಲ್ಲಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

Continue Reading

ಪುತ್ತೂರು

Puttur Jathre | ಪುತ್ತೂರ ಒಡೆಯನ ದರ್ಶನ ಬಲಿಗೆ ಕ್ಷಣಗಣನೆ – ‘ಪುತ್ತೂರು ಬೆಡಿ’ ಭರದ ತಯಾರಿ – ಶೃಂಗಾರಗೊಂಡ ಬ್ರಹ್ಮರಥ

Ad Widget

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ (Puttur Jathre) ಎ.10ರಿಂದ ಪ್ರಾರಂಭವಾಗಿದ್ದು, ಎ.17ರಂದು ಮಧ್ಯಾಹ್ನ ದರ್ಶನ ಬಲಿ ರಾತ್ರಿ ಬ್ರಹ್ಮಕಲಶೋತ್ಸವ ಹಾಗೂ ಪುತ್ತೂರು ಬೆಡಿ ಎಂದೇ ಪ್ರಸಿದ್ದಿಯಾಗಿರುವ ವಿಶೇಷ ಸುಡುಮದ್ದುಗಳ ಪ್ರದರ್ಶನ ನಡೆಯಲಿದೆ.

Ad Widget

Ad Widget

Ad Widget

Ad Widget

ಇದೀಗ ಶ್ರೀದೇವರ ವಿಶೇಷ ದರ್ಶನ ಬಲಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಭಕ್ತ ಸಾಗರ ದೇವಸ್ಥಾನಕ್ಕೆ ಹರಿದು ಬರುತ್ತಿದೆ. ದರ್ಶನ ಬಲಿ ನಂತರ ಬಟ್ಟಲು ಕಾಣಿಕೆ ನಡೆಯಲಿದೆ.

Ad Widget

Ad Widget

ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ. ಬಂದೋಬಸ್ತಿಗಾಗಿ ಜಿಲ್ಲೆಯ ವಿವಿಧ ಕಡೆಗಳಿಂದ ಪೊಲೀಸರನ್ನು ಕರೆಸಲಾಗಿದೆ. ಜೊತೆಗೆ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳದವರೂ ಬಂದೋಬಸ್ತ್ ನಿರತರಾಗಿದ್ದಾರೆ.ಮಪ್ತಿಯಲ್ಲಿಯೂ ನೂರಾರು ಪೊಲೀಸರು ಕಾರ್ಯನಿರತರಾಗಿದ್ದಾರೆ.ಡಿವೈಎಸ್ಪಿ ಅರುಣ್ ನಾಗೇಗೌಡರ ನೇತೃತ್ವದಲ್ಲಿ ಬಂದೋಬಸ್ತ್ ನಡೆಯಲಿದೆ.

Ad Widget

Ad Widget

ಎ.17ರಂದು ಬೆಳಿಗ್ಗೆ, ಶ್ರೀ ದೇವಳದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ.ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಈ ವರ್ಷ ಸುಮಾರು ರೂ.8.5 ಲಕ್ಷ ವೆಚ್ಚದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ. ಕಾರ್ಕಳದ ರಮಾನಂದ ಮತ್ತು ಪುತ್ತೂರಿನ ನಾಗೇಶ್ ರಾವ್ ಅವರು ಸಿಡಿಮದ್ದು ಪ್ರದರ್ಶನದ ಗುತ್ತಿಗೆ ವಹಿಸಿಕೊಂಡಿದ್ದಾರೆ.

Ad Widget

Ad Widget

ಮೊಬೈಲ್ ಸಿಸಿ ಕ್ಯಾಮರಾ ಕಂಟ್ರೋಲ್ ರೂಮ್: ಜಾತ್ರಾ ಗದ್ದೆಯಲ್ಲಿ ಹಲವು ಕಡೆ ಸಿಸಿ ಕ್ಯಾಮರ ಆಳವಡಿಸಲಾಗಿದೆ.ದೇವಳದ ರಥ ಮಂದಿರದ ಬಳಿ ಮೊಬೈಲ್ ಸಿಸಿ ಕ್ಯಾಮರಾ ಕಂಟ್ರೋಲ್ ರೂಮ್ ವ್ಯವಸ್ಥೆ ಮಾಡಲಾಗಿದೆ.ಶೇಟ್ ಇಲೆಕ್ಟೋನಿಕ್ಸ್ ಸಂಸ್ಥೆ ಸಿಸಿ ಕ್ಯಾಮರಾಗಳ ನಿಯಂತ್ರಣ ಮಾಡಲಿದ್ದಾರೆ. ಪೊಲೀಸರ ಜೊತೆ ಸಿಸಿ ಕ್ಯಾಮರಾ ಕಣ್ಣಾವಲು ಕಾರ್ಯ ಮಾಡುತ್ತಿದೆ.

Continue Reading

ದಕ್ಷಿಣ ಕನ್ನಡ

ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಆಗಮಿಸಿದ ಬಲ್ನಾಡು ಉಳ್ಳಾಳ್ತಿ ದೈವಗಳ ಕಿರುವಾಳು – ಶ್ರೀ ದೇವರ ತೆಪ್ಪೋತ್ಸವ

Ad Widget

Photo : ಕೃಷ್ಣಾ ಸ್ಟುಡಿಯೋ

Ad Widget

Ad Widget

Ad Widget

Ad Widget

ಪುತ್ತೂರು: ಇತಿಹಾಸ ಪ್ರಸಿದ್ಧ  ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಎ.16ರಂದು ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ  ದೈವಗಳ ಕಿರುವಾಳು ಸೂಟೆಯ ಬೆಳಕಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮನವಾಯಿತು.

Ad Widget

Ad Widget

ಸೂಟೆಯ ಬೆಳಕಿನಲ್ಲೇ ಬಲ್ನಾಡಿನಿಂದ ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಬಂದ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರು ಜಾತ್ರೆಯಲ್ಲಿ ಪಾಲ್ಗೊಂಡರು. ಕಿರುವಾಳು ಮೆರವಣಿಗೆಯ ದಾರಿ ಮಧ್ಯೆ ಭಕ್ತರು ಸಾಲು ಸಾಲಾಗಿ ಆರತಿ ನೆರವೇರಿಸಿದರು.

Ad Widget

Ad Widget

ಕಿರುವಾಳು ದೇವಳಕ್ಕೆ ತಲುಪಿದ ಬಳಿಕ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಶ್ರೀಧರ್ ತಂತ್ರಿಯವರ ವೈದಿಕತ್ವದಲ್ಲಿ ರಾತ್ರಿಯಿಂದ  ಬೆಳಗ್ಗಿನ ಜಾವದ ತನಕ ಉತ್ಸವಾದಿಗಳು ನಡೆಯಿತು.

Ad Widget

Ad Widget

 ಭಂಡಾರದ ಸ್ಥಾನದಲ್ಲಿ ಉಳ್ಳಾಲ್ತಿ ಅಮ್ಮನವರಿಗೆ ಬೆಳಗ್ಗಿನಿಂದಲೇ ಭಕ್ತರು ಮಲ್ಲಿಗೆ ಸಮರ್ಪಿಸುತ್ತಿದ್ದರು. ಬೆಳಗ್ಗಿನಿಂದಲೇ ಭಕ್ತರಿಗೆ ದೈವಗಳ ಭಂಡಾರದ ಸ್ಥಾನದಲ್ಲಿ ಮಲ್ಲಿಗೆ ಸಮರ್ಪಣೆಗೆ ಅವಕಾಶ ನೀಡಲಾಯಿತು.  

ಸಂಜೆ ಗಂಟೆ 6ಕ್ಕೆ ಬಲ್ನಾಡು ದೈವಸ್ಥಾನದಿಂದ ಹೊರಟ ದೈವಗಳ ಕಿರುವಾಳು ಭಂಡಾರ ರಾತ್ರಿ ಸುಮಾರು  9.28ಕ್ಕೆ ಬಪ್ಪಳಿಗೆ ತಲುಪಿತ್ತು 10.15ಕ್ಕೆ ಮಹಿಳಾ ಪೊಲೀಸ್ ಠಾಣೆಯ ಬಳಿಯ ಅಂಕದಕಟ್ಟೆಗೆ ಬಂದು ಅಲ್ಲಿ ಭಕ್ತರು ಸಮರ್ಪಣೆ ಮಾಡಿದ ಮಲ್ಲಿಗೆ ಸ್ವೀಕಾರ ಮಾಡಿ ದೇವಳಕ್ಕೆ ಪುಷ್ಕರಣಿಯ ಭಾಗದಿಂದ ಆಗಮಿಸಿ ಗಂಟೆ 10.46ಕ್ಕೆ ಶ್ರೀ ಉಳ್ಳಾಲ್ತಿ ನಡೆಯ ಬಳಿ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ನಡೆಯಿತು ಬಳಿಕ ಪೂರ್ವ ಶಿಷ್ಟ ಪರೆಂಪರೆಯಂತೆ ಶ್ರೀ ದೇವರ ತೆಪ್ಪೋತ್ಸವ ದೇವಳದ ಕೆರೆಯಲ್ಲಿ ನಡೆಯಿತು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading