Ad Widget

ಟಿಪ್ಪುವನ್ನು ಬೆಂಬಲಿಸುವ ಕಾಂಗ್ರೆಸ್, ಜೆಡಿಎಸ್ ಬೇಕಾ ? ಅವರು 1700 ಪಿಎಫೈ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರೇ ನಾವು ಅದನ್ನು ಶಾಶ್ವತವಾಗಿ ನಿಷೇಧ ಮಾಡಿದೇವು : ಪುತ್ತೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಕಿಚ್ಚು ಹಚ್ಚಿದ ಶಾ

WhatsApp-Image-2023-02-12-at-09.06.15-3
Ad Widget

Ad Widget

Ad Widget

ಪುತ್ತೂರು : ಫೆ 12 : ಟಿಪ್ಪುವನ್ನು ಬೆಂಬಲಿಸುವ ಕಾಂಗ್ರೆಸ್ ಜೆಡಿಎಸ್‌  ಗೆ ಮತ ಹಾಕಬೇಕೆ ಅಥಾವ ರಾಣಿ ಅಬ್ಬಕನನ್ನು ಬೆಂಬಲಿಸುವ ಬಿಜೆಪಿಗೆ ಮತ ಹಾಕಬೇಕೆ  ಎಂಬುದನ್ನು ನಿರ್ಧರಿಸಿ. ರಾಷ್ಟ್ರ ಭಕ್ತರ ಸೇನೆಯನ್ನು ಹೊಂದಿರುವ ಮೋದಿ ನೇತ್ರತ್ವದ ಬಿಜೆಪಿ ಹಾಗೂ ಕರ್ನಾಟಕವನ್ನು ತನ್ನ ATM ಮಾಡಿಕೊಂಡಿರುವ ಗಾಂಧಿ ಪರಿವಾರದ ಭ್ರಷ್ಟ ಕಾಂಗ್ರೇಸ್ ಇದರಲ್ಲಿ ಒಂದನ್ನು ಜನತೆ ಆಯ್ಕೆ ಮಾಡಬೇಕು.   ಜೆಡಿಎಸ್‌ ಗೆ ಹಾಕುವ ಪ್ರತಿ ಮತವು ಕಾಂಗ್ರೆಸ್‌ ನ ಬುಟ್ಟಿ ಸೇರಲಿದೆ. ನವ ಕರ್ನಾಟಕ ನವ ಭಾರತದ ನಿರ್ಮಾಣಕ್ಕೆ ಬಿಜೆಪಿಗೆ ಮತ ಹಾಕಿ ಎಂದು  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುತ್ತೂರಿನಲ್ಲಿ ಹೇಳಿದರು.

Ad Widget

Ad Widget

Ad Widget

Ad Widget

ತೆಂಕಿಲದ ವಿವೇಕಾನಂದ ಶಾಲೆಯ ಮೈದಾನದಲ್ಲಿ ಶನಿವಾರ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಭಾಷಣ ಮಾಡಿದರು. ಆರಂಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಗುಣಗಾನ ಮಾಡಿದ ಅವರು ಬಳಿಕ ಮೋದಿ ಮತ್ತು ರಾಜ್ಯ ಬಿಜೆಪಿ ಸರಕಾರ ಕೈಗೊಂಡ ಅಭಿವೃದ್ದಿ .ಕಾರ್ಯಗಳನ್ನು ವಿವರಿಸಿದರು. ಅವರು ತಮ್ಮ ಭಾಷಣದ ಕೊನೆಯಲ್ಲಿ ಕ್ಯಾಂಪ್ಕೋ ವೇದಿಕೆಯನ್ನು ಪಕ್ಷದ  ಚುನಾವಣಾ ಪ್ರಚಾರಕ್ಕೂ ಬಳಸಿಕೊಂಡರು.

Ad Widget

Ad Widget

Ad Widget

Ad Widget

ನನಗೆ ಕೇಂದ್ರ  ಸಚಿವನ ಜತೆಗೆ  ಇನ್ನೂ ಒಂದು ಜವಬ್ದಾರಿಯಿದೆ.  ಅದು ನನ್ನ ಪಕ್ಷದ್ದು. ಅದನ್ನು ಇಲ್ಲಿ  ಹೇಳಬೇಕೇ ?  ಬೇಡವೇ ? ಎಂದು ಸಭಿಕರಲ್ಲಿ  ಕೇಳಿ  ಕ್ಯಾಂಪ್ಕೋ ವೇದಿಕೆಯಲ್ಲೇ  ಚುನಾವಣಾ ಪ್ರಚಾರದ ಶಂಖನಾದ ಮಾಡಿದರು.

ಕರ್ನಾಟಕ ರಾಜ್ಯದ  ಅಭಿವೃದ್ದಿ  ಇಲ್ಲಿ ಬಿಜೆಪಿ ಸರಕಾರವಿದ್ದಾಗ ಮಾತ್ರ ಆಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಕರ್ನಾಟಕದ ಪ್ರಗತಿ ಬೇಕಾಗಿಲ್ಲ.  ಯಡಿಯೂರಪ್ಪನವರು ಅವಧಿಯಲ್ಲಿ ರಾಜ್ಯದ  ರೈತರಿಗೆ  ಬಹಳಷ್ಟು ಉಪಕಾರವಾಗಿದ್ದು ಅದನ್ನು ಈಗಲೂ ಜನತೆ ಸ್ಮರಿಸುತ್ತಾರೆ. ಯಡಿಯೂರಪ್ಪ ನವರೇ ಬೆಂಗಳೂರನ್ನು ಮಾಡಿದ್ದು. ಹಾಗಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ತನ್ನಿ ಎಂದರು.

Ad Widget

Ad Widget

ಕಾಂಗ್ರೆಸ್ 1700 ಪಿ ಎಫೈ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರೆ, ಮೋದಿ ಸರಕಾರ ಪಿಎಫೈಯನ್ನು ಶಾಶ್ವತವಾಗಿ ನಿಷೇದಿಸಿತ್ತು. ತುಷ್ಟಿಕರಣದ ರಾಜಕಾರಣ ಮಾಡುವ ಕಾಂಗ್ರೆಸ್ ದೇಶ ದ್ರೋಹಿ ಕೃತ್ಯ ನಡೆಸುವ ಸಂಘಟನೆಗಳನ್ನು ಪೋಷಿಸುತ್ತದೆ. ಉಗ್ರ ಚಟುವಟಿಕೆ ಹಾಗೂ ನಕ್ಸಲಿಸಂನ್ನು ಅಂತ್ಯಗೊಳಿಸಿದ  ಬಿಜೆಪಿಯಿಂದ ಮಾತ್ರ ದೇಶ ಹಾಗೂ ರಾಜ್ಯ ವನ್ನು ಸುರಕ್ಷಿತವಾಗಿಡಲು ಸಾಧ್ಯ.

ಕಾಶ್ಮೀರ ಭಾರತದ ಭಾಗವಲ್ಲವೇ? ನಾವು ಅರ್ಟಿಕಲ್ 370ನ್ನು ನಿಷೇಧಿಸಲು ಮುಂದಾದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಅದನ್ನು ವಿರೋಧಿಸಿತ್ತು.  ಅಲ್ಲಿ ರಕ್ತದ ನದಿಯೆ ಹರಿಯಬಹುದೆಂದು  ಹೆದರಿಸಿತ್ತು.  ಆದರೆ ಈಗಿರುವುದು ದೇಶದಲ್ಲಿ  ಮೋದಿ ಸರಕಾರ. ವಿರೋಧಿಸುವುದು ಬಿಡಿ. ಕೊದಲನ್ನು ಮುಟ್ಟುವ  ತಾಕತ್ತನ್ನು ಯಾರೂ ಪ್ರದರ್ಶಿಸಲಿಲ್ಲ ಎಂದು ವ್ಯಂಗ್ಯವಾಡಿದರು.

ಲಿಂಗಾಯತ ನಾಯಕತ್ವಕ್ಕೆ ಮಣೆ – ಬೊಮ್ಮಾಯಿ ಕೈ ಬಲಪಡಿಸಿ ಎಂದ ಶಾ

ಇನ್ನು ತನ್ನ ಭಾಷಣದ ಮಧ್ಯ ಭಾಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕೊಂಡಾಡಿದರು. ಬಳಿಕ ಸಿಎಂ ಬೊಮ್ಮಾಯಿ ಅವರ ಕೈ ಬಲ ಪಡಿಸಿ ಎಂದ ಅವರು ಸಭಿಕರಲ್ಲಿ ಬೊಮ್ಮಾಯಿ ಸರಕಾರಕ್ಕೆ ಮೆಚ್ಚುಗೆಯಾಗಿ ಕರತಾಡನ ಮಾಡುವಂತೆಯೂ ಕೋರಿದರು . ಈ ಮೂಲಕ ಈ ಬಾರಿಯ ಚುನಾವಣೆಯನ್ನು ಲಿಂಗಾಯಿತ ನಾಯಕತ್ವದಲ್ಲೆ ಎದುರಿಸುವ ಸಂದೇಶ ರವಾನಿಸಿದರು.

 ವಾರದ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಮುಖಂಡ ಎಚ್‌ ಡಿ ಕುಮಾರ ಸ್ವಾಮಿ ಬ್ರಾಹಣ ಸಿಎಂ ಅಸ್ತ್ರ ಪ್ರಯೋಗಿಸಿ ಬಿಜೆಪಿಯನ್ನು ಇಕ್ಕಟ್ಟಿಗೆ ತಳ್ಳಿದ್ದರು. ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿಯವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಬ್ರಾಹ್ಮಣರನ್ನು ಸಿಎಂ ಮಾಡಲಿದೆ ಎಂದು ಕುಮಾರಸ್ವಾಮಿ ಹೇಳಿದ್ದರು,  ಇದು ಲಿಂಗಾಯಿತ ಬೆಲ್ಟ್‌ ನಲ್ಲಿ ಬಿಜೆಪಿಗೆಾದ  ತೊಂದರೆಯಾಗಬಹುದು ಎಂದು ಅರಿತಿರುವ ಶಾ ಅದಕ್ಕೆ ಬೊಮ್ಮಾಯಿ ಕೈ ಬಲ ಪಡಿಸಿ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: