Ad Widget

ಮದುವೆ ಹಾಲ್‌ ಗೆ ಆಗಮಿಸದ ಪುತ್ತೂರಿನ ಮದುಮಗ  – ವರನಿಲ್ಲದೇ ಸುಳ್ಯದ ಯುವತಿಯ ಮದುವೆ ರದ್ದು – ಅಷ್ಟಕ್ಕೂ ವರ ಕೊನೆ ಕ್ಷಣದಲ್ಲಿ ಕೈಕೊಟ್ಟದ್ದು ಯಾಕೇ ಗೊತ್ತೆ ?

WhatsApp Image 2023-02-10 at 18.09.00
Ad Widget

Ad Widget

Ad Widget

ಸುಳ್ಯ : ಫೆ 10  ಮೂಹೂರ್ತದ ವೇಳೆ ಮದು ಮಗ ಛತ್ರಕ್ಕೆ ಆಗಮಿದೇ ಕೈ ಕೊಟ್ಟು  ಪೂರ್ವ ನಿಗದಿಯಾಗಿದ್ದ ವಿವಾಹ ರದ್ದುಗೊಂಡ ಘಟನೆ ಫೆ 9 ರಂದು ಸುಳ್ಯದಲ್ಲಿ ನಡೆದಿದೆ. ವರನ ಮೊದಲ ಪತ್ನಿ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದೇ ವರ ಬಾರದಿರಲು ಕಾರಣ ಎಂದು ಹೇಳಲಾಗುತ್ತಿದೆ

Ad Widget

Ad Widget

Ad Widget

Ad Widget

ಪುತ್ತೂರು ತಾಲೂಕು ರೆಂಜ ಗ್ರಾಮದ ಗುಮ್ಮಟಗದ್ದೆಯ ಕೃಷ್ನ ಎಂಬ ಯುವಕನೊಂದಿಗೆ  ಸುಳ್ಯ ತಾಲೂಕಿನ ಉಬರಡ್ಕದ ಯುವತಿಯ ವಿವಾಹ ನಿಗದಿಯಾಗಿತ್ತು.  ಗುರುವಾರ  ಕೆವಿಜಿ ಪುರಭವನದಲ್ಲಿ ವಿವಾಹ ಕಾರ್ಯಕ್ರಮ ನಡೆಸಲು ಹಾಲ್‌ ಬುಕ್‌ ಮಾಡಲಾಗಿತ್ತು.

Ad Widget

Ad Widget

Ad Widget

Ad Widget

ವರನ ಕಡೆಯವರು ಬಂದು ಹಾಲ್‌ ಅಲಂಕರಿಸಿದ್ದರು. ವಧುವಿನ ಕಡೆಯವರು  ವಧುವಿನೊಂದಿಗೆ  ಹಾಲ್‌ ಆಗಮಿಸಿದ್ದರು . ಸುಮಾರು 500 ಜನಕ್ಕೆ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಆದರೇ ಹಾಲ್‌ ಗೆ ಆಗಮಿಸಬೇಕಿದ್ದ ವರ ತನ್ನ ಕಡೆಯವರೆಗೂ ಸ್ಪಷ್ಟ ಮಾಹಿತಿ ಒದಗಿಸದೇ ನಾಪತ್ತೆಯಾಗಿದ್ದ.

ಆತನ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿತ್ತು. ಹೀಗಾಗಿ ದಲಿತ ಮುಖಂಡೆ ಸರಸ್ವತಿಯವರ ಮೂಲಕ ಸುಳ್ಯ ಠಾಣೆಗೆ ವಿಷಯ ಮುಟ್ಟಿಸಲಾಯಿತು.ಈ ವೇಳೆ ವರನಿಗೆ ಮೊದಲೇ ವಿವಾಹ ವಾಗಿರುವ ವಿಚಾರ ಬೆಳಕಿಗೆ ಬಂದಿದೆ.

Ad Widget

Ad Widget

 ವರನಿಗೆ ಈ ಹಿಂದೆ ಮದುವೆಯಾಗಿದ್ದು ಆತ ಎರಡನೇ ಮದುವೆಯಾಗುವ ಮಾಹಿತಿ ಪಡೆದ ಪತ್ನಿ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ವರ ನಾಪತ್ತೆಯಾಗಿದ್ದಾನೆಂದು ತಿಳಿದ ವಧುವಿನ ಕಡೆಯವರು ಸಭಾಂಗಣದಿಂದ ತೆರಳಿದ್ದಾರೆ ಸಿದ್ದಪಡಿಸಲಾಗಿದ್ದ ಊಟವನ್ನು ವಸತಿ ನಿಲಯಗಳಿಗೆ ನೀಡಲಾಯಿತು ಎಂದು ತಿಳಿದು ಬಂದಿದೆ

Ad Widget

Leave a Reply

Recent Posts

error: Content is protected !!
%d bloggers like this: