ವಿಟ್ಲ: ಫೆ 7 : ಪ್ರತಿಯೊಬ್ಬರೂ ಭೂಮಿಯ ಮಾಲಿಕರಾಗಬೇಕೆಂಬ ಸದ್ದುದ್ದೇಶದಿಂದ ಸರ್ಕಾರ ಅಕ್ರಮ ಸಕ್ರಮದಂತ ಕಾರ್ಯಕ್ರಮ ಹಾಕಿಕೊಂಡಿದೆ. ಫೆ.11ರಂದು ಪುತ್ತೂರಿಗೆ ಆಗಮಿಸಲಿರುವ ಮುಖ್ಯ ಮಂತ್ರಿಗಳು ಕುಮ್ಕಿಯ ಹಕ್ಕನ್ನು ನೀಡುವ ಕುರಿತಾಗಿ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಜನರಿಗೆ ತಿಳಿಸಲಿದ್ದಾರೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಚಂದಳಿಕೆ ಭಾರತ ಆಡಿಟೋರೀಯಂ ನಲ್ಲಿ ಅಕ್ರಮ ಸಕ್ರಮ ಮಂಜೂರಾತಿ ಸಭೆಯಲ್ಲಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು. 78 ಮಂದಿ ಫಲಾನುಭವಿಗಳಿಗೆ 94ಸಿ, 94 ಸಿಸಿ ಹಕ್ಕು ಪತ್ರ ವಿತರಣೆ ಮಾಡಲಾಯಿತು.
ಚುನಾವಣೆ ಬರುತ್ತಿದ್ದು ಜನರ ವಿಶ್ವಾಸ ಉಳಿಸುವ ಕೆಲಸವನ್ನು ಮಾಡುಲಾಗುತ್ತಿದೆ. ತಹಸೀಲ್ದಾರನ್ನು ಬದಲಾವಣೆ ಮಾಡಿ ಮಂಜೂರಾತಿ ಸಭೆಯನ್ನು ಮಾಡಲಾಗುತ್ತಿದ್ದು, ಹತ್ತು ದಿನಕ್ಕೊಮ್ಮೆ ಸಿಟ್ಟಿಂಗ್ ಮಾಡಲಾಗುವುದು. ಅರ್ಜಿ ನೀಡಿದ ಎಲ್ಲರಿಗೂ ಕಾನೂನಿನ ಅವಕಾಶದಲ್ಲಿ ಗರಿಷ್ಠ ಮಿತಿಯಲ್ಲಿ ಜಾಗವನ್ನು ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

ಬಂಟ್ವಾಳ ತಹಸೀಲ್ದಾರ ದಯಾನಂದ, ಬಗರ್ ಹುಕುಂ ಸಮಿತಿಯ ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಭಟ್, ಉಪತಹಸೀಲ್ದಾರ ವಿಜಯ ವಿಕ್ರಮ, ಬಂಟ್ವಾಳ ತಾಲೂಕು ಆಡಳಿತದ ಅಧಿಕಾರಿಗಳು ಹಾಜರಿದ್ದರು.