Connect with us

ಪುತ್ತೂರು

ಪುತ್ತೂರು : ಸ್ಕೂಟರ್ ಸ್ಕಿಡ್ ಆಗಿ ಮಹಿಳೆಗೆ ಗಾಯ – ತಕ್ಷಣ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಫಿಲೋಮಿನಾ ಕಾಲೇಜು ವಿದ್ಯಾರ್ಥಿ : ತುರ್ತು ಕಾರ್ಯಕ್ರಮದ ನಡುವೆಯೂ ಘಟನಾ ಸ್ಥಳದಲ್ಲಿ ಸಹಾಯ ಮಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು

Ad Widget

Ad Widget

Ad Widget

Ad Widget Ad Widget

ಪುತ್ತೂರು: ದರ್ಬೆ ಸಮೀಪ ಪುತ್ತೂರಿನ ಫಿಲೋಮಿನಾ ಕಾಲೇಜಿನ ಎದುರು ಸ್ಕೂಟರ್ ಸ್ಕಿಡ್ ಆಗಿ ಗಾಯಗೊಂಡ ಮಹಿಳೆಯನ್ನು ಪುತ್ತೂರು ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಯೋರ್ವ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದರು.

Ad Widget

Ad Widget

Ad Widget

Ad Widget

Ad Widget

ಮುಕ್ರುಂಪಾಡಿ ಮೂಲದ ಮಹಿಳೆ ಚಲಾಯಿಸುತಿದ್ದ ಸ್ಕೂಟರನ್ನು ಕಾರೊಂದು ಓವರ್ ಟೆಕ್ ಮಾಡುವಾಗ ಸ್ಕೂಟರ್ ಸ್ಕಿಡ್ ಆಗಿದೆ. ಅಪಘಾತದಲ್ಲಿ ಮಹಿಳೆಯ ತಲೆ ಕೈ ಕಾಲಿಗೆ ಗಂಭೀರ ಗಾಯಗಳಾಗಿದೆ. ಘಟನೆ ಸಂಜೆ ನಡೆದಿರುವುದರಿಂದ ಅದೇ ಸಂದರ್ಭ ಪಿಲೋಮಿನಾ ಕಾಲೇಜು ಬಿಟ್ಟಿದ್ದರಿಂದ ವಿದ್ಯಾರ್ಥಿಗಳು ಮನೆಗೆ ತೆರಳಲು ಹೊರ ಬರುತ್ತಿದ್ದರು. ಅಪಘಾತ ನೋಡಿದ ತಕ್ಷಣ ಫಿಲೋಮಿನಾ ಕಾಲೇಜಿನ ಪದವಿ ವಿದ್ಯಾರ್ಥಿ ತ್ರಿಶೂಲ್ ಆಟೋ ರಿಕ್ಷಾ ಒಂದರಲ್ಲಿ ಗಾಯಳು ಮಹಿಳೆಯನ್ನು ಹಾಕಿಕೊಂಡು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇವರಿಗೆ ಪುತ್ತೂರು ಪ್ರಾಪರ್ಟಿಸ್ ಮಾಲಕ ನಿತಿನ್ ಪಕ್ಕಳ ಕೂಡ ಸಹಾಯ ಮಾಡಿದ್ದಾರೆ.

Ad Widget

Ad Widget

ಅದೇ ದಾರಿಯಾಗಿ ತುರ್ತು ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶಾಸಕ ಸಂಜೀವ ಮಠಂದೂರು ಅವರು ತಕ್ಷಣ ಕಾರಿನಿಂದ ಇಳಿದು ಗಾಯಳು ಮಹಿಳೆಯ ಮನೆಗೆ ವಿಷಯ ತಿಳಿಸಿ , ಟ್ರಾಫಿಕ್ ಪೊಲೀಸರನ್ನು ಕರೆದು ಅಪಘಾತಗೊಂಡ ವಾಹನವನ್ನು ಬದಿಗೆ ಇಡಲು ಶಾಸಕರ ಸಹಾಯಕರು ಸಹಾಯ ಮಾಡಿದರು.

Ad Widget

Ad Widget

ತುರ್ತು ಕಾರ್ಯಕ್ರಮದ ನಡುವೆಯೂ ಶಾಸಕರು ತುಂಬಾ ಸಮಯ ಘಟನಾ ಸ್ಥಳದಲ್ಲಿದ್ದು ಪೊಲೀಸ್ ಹಾಗೂ ಆಸ್ಪತ್ರೆಯಿಂದ ಮಾಹಿತಿ ಪಡೆದುಕೊಂಡರು.

Ad Widget

Ad Widget

ಟ್ರಾಫಿಕ್ ಜಾಮ್ ಆಗಿದ್ದರಿಂದ ಘಟನಾ ಸ್ಥಳದಲ್ಲಿ ನೂರಾರು ಜನ ಸೇರಿದ್ದರು.

ತುರ್ತು ಸಹಾಯ ಮಾಡಿದ ತ್ರಿಶೂಲ್ ಪುತ್ತೂರು ಅಕ್ವಾಟಿಕ್ ಕ್ಲಬ್ ನ ಜೀವ ರಕ್ಷಕ ತಂಡದ ತರಬೇತುದಾರರಾಗಿದ್ದಾರೆ

Click to comment

Leave a Reply

ಶಿಕ್ಷಣ

Press Release-ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳ ಉದ್ಘಾಟನಾ ಕಾರ್ಯಕ್ರಮದ ಪತ್ರಿಕಾ ಪ್ರಕಟಣೆ

Ad Widget

Ad Widget

Ad Widget

Ad Widget Ad Widget

ವಿವೇಕಾನಂದ ಪದವಿಪೂರ್ವ ಕಾಲೇಜು 2024-25ನೇ ಶೈಕ್ಷಣಿಕ ವರ್ಷದಿಂದ ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪರಿಚಯಿಸುತ್ತಿದೆ. ಪದವಿಪೂರ್ವ ಶಿಕ್ಷಣ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಈ ವಿನೂತನ ಪ್ರಯೋಗವನ್ನು ನಮ್ಮ ಸಂಸ್ಥೆ ಆರಂಭಿಸುತ್ತಿದ್ದು, ಈ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಶೇರು ವಹಿವಾಟು, Tally, ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಮುಂತಾದ ವಿಷಯಗಳ ಬಗ್ಗೆ ವ್ಯಾವಹಾರಿಕ ಹಾಗೂ ಪ್ರಾಯೋಗಿಕ ಜ್ಞಾನ ನೀಡುವ ಉದ್ದೇಶವಿದೆ.

Ad Widget

Ad Widget

Ad Widget

Ad Widget

Ad Widget

ಈ ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳ ಉದ್ಘಾಟನಾ ಸಮಾರಂಭವು 24  ಏಪ್ರಿಲ್ 2024 ನೇ ಬುಧವಾರ 10 ಗಂಟೆಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇರುವ ನೇತಾಜಿ ಸಭಾಂಗಣದಲ್ಲಿ ಜರುಗಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ. ಪಿ. ಇವರು ವಹಿಸಲಿದ್ಧಾರೆ.

Ad Widget

Ad Widget

ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಉದ್ಯಮಿಗಳು ಹಾಗೂ ಅಜೇಯ ವಿಶ್ವಸ್ಥ ಮಂಡಳಿ, ಮೂರ್ಕಜೆ, ವಿಟ್ಲ ಇದರ ಅಧ್ಯಕ್ಷರಾದ  ಪಿ. ಸುಬ್ರಾಯ ಪೈ ಇವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೆಲ್ತ್ ವಿಷನ್ ಪುತ್ತೂರು ಹಾಗೂ ಹಾರ್ದಿಕ್ ಹರ್ಬಲ್ಸ್ ಬಂಟ್ವಾಳ ಇದರ ಸಂಸ್ಥಾಪಕರಾದ ಮುರಳೀಧರ ಕೆ. ಇವರು ಭಾಗವಹಿಸಲಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಕೆ. ಎನ್. ಸುಬ್ರಹ್ಮಣ್ಯ ಹಾಗೂ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಇವರು ಉಪಸ್ಥಿತಲಿರಲಿದ್ದಾರೆ.

Ad Widget

Ad Widget

ಈ ಕಾರ್ಯಕ್ರಮದಲ್ಲಿ ಪೋಷಕರು, ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್‌ಗಳು ಆರಂಭಗೊಳ್ಳಲಿದ್ದು ಹಲವಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.

Ad Widget

Ad Widget
Continue Reading

ಪುತ್ತೂರು

ಕಳೆದ ವರ್ಷ ಶೇ 100 ಫಲಿತಾಂಶ ದಾಖಲಿಸಿದ ವಿದ್ಯಾಮಾತಾ ಅಕಾಡೆಮಿಯಿಂದ KARTET 2024ಕ್ಕೆ ತರಬೇತಿ ಪ್ರಾರಂಭ – ಆನ್ಲೈನ್ ತರಬೇತಿ ಪ್ರಾರಂಭಿಸಿದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ

Ad Widget

Ad Widget

Ad Widget

Ad Widget Ad Widget

2023ನೇ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಹೆಗ್ಗಳಿಕೆಯೊಂದಿಗೆ 2024ನೇ ಸಾಲಿನ KARTET ಗೆ ಅರ್ಜಿ ಸಲ್ಲಿಸಿರುವ ಮತ್ತು ಅರ್ಜಿ ಸಲ್ಲಿಸಲು ಉದ್ದೇಶಿಸಿರುವ ಭವಿಷ್ಯದ ಸರಕಾರಿ ಶಿಕ್ಷಕರಿಗೆ  ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಪ್ರಾರಂಭಿಸಿದೆ.

Ad Widget

Ad Widget

Ad Widget

Ad Widget

Ad Widget

ವಿದ್ಯಾಮಾತಾ ಅಕಾಡೆಮಿಯು
ಈ ವರ್ಷವೂ ಕೂಡ  ಆನ್ ಲೈನ್ ತರಬೇತಿಯನ್ನು ಒದಗಿಸಲಿದ್ದು ದಿನಾಂಕ 25.04.2024ರಿಂದ 2 ತಿಂಗಳ ಕಾಲ ಪ್ರತಿನಿತ್ಯ ರಾತ್ರಿ 7ರಿಂದ 8ರ ವರೆಗೆ ಆನ್ ಲೈನ್ ತರಗತಿಗಳು ನಡೆಯಲಿದ್ದು, ಈ ಅರ್ಹತಾ ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳು  ವಿದ್ಯಾಮಾತಾ ಅಕಾಡೆಮಿಯನ್ನು ಈ ಕೆಳಗಡೆ ನೀಡಿರುವ ದೂರವಾಣಿ ಸಂಖ್ಯೆ ಅಥವಾ ಖುದ್ದಾಗಿ  ಸಂಸ್ಥೆಯ ಸುಳ್ಯ ವಿದ್ಯಾಮಾತಾ ಅಕಾಡೆಮಿಯ ಕಛೇರಿ ಮತ್ತು ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯ ಕಛೇರಿಯನ್ನು  ಹಾಗೂ ಕಾರ್ಕಳದ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ.

Ad Widget

Ad Widget

ಶಿಕ್ಷಕರ ಅರ್ಹತಾ ಪರೀಕ್ಷೆಯ ಮಾನದಂಡಗಳು:

Ad Widget

Ad Widget

ಅರ್ಜಿ ಸಲ್ಲಿಸಲು  15.05.2024 ಕೊನೆಯ ದಿನಾಂಕವಾಗಿರುತ್ತದೆ

Ad Widget

Ad Widget

ವಿದ್ಯಾರ್ಹತೆ:
PUC D.Ed, BE. BEd,   BA.B.Ed, BSc.B.Ed
B.com B.Ed

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:
ಫೋಟೋ, ಅಂಕಪಟ್ಟಿಗಳು,ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು 30.06.2024ರಂದು ನಡೆಯಲಿದೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
PH:  9148935808 / 96204 68869

*ಸುಳ್ಯ ಶಾಖೆ:*  ಟಿ.ಎ.ಪಿ.ಸಿ.ಎಂ.ಎಸ್  ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239
*PH: 9448527606*

*ಕಾರ್ಕಳ ಶಾಖೆ:*
ಒಂದನೆಯ ಮಹಡಿ, MCC ಬ್ಯಾಂಕ್ ಮೇಲ್ಗಡೆ, ತಾಲೂಕು ಕಚೇರಿ ರಸ್ತೆ, (ಬಂಡಿ ಮಠ ಬಸ್ ಸ್ಟ್ಯಾಂಡ್ ಎದುರು ರಸ್ತೆ ) ಕಾರ್ಕಳ
PH:- 8310484380 / 9740564044 / 9620468869

Continue Reading

ಪುತ್ತೂರು

ಪುತ್ತೂರು: ಚೌಟರ ಪರ ರೋಡ್ ಶೋದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಭಾಗಿ : ತಮಿಳುನಾಡಿನಲ್ಲಿ ಓಟಿಂಗ್ ಪರ್ಸೆಂಟ್ ಕಡಿಮೆಯಾಗಿದೆ ಇಲ್ಲಿ ಜಾಸ್ತಿ ಆಗಬೇಕು : ಅಣ್ಣಾಮಲೈ : ‘ಸಿಂಗಂ’ ಕಾಣಲು ರೋಡ್ ಶೋ ಗೆ ಬ್ಯಾಗ್ ಸಮೇತ ಭಾಗಿಯಾದ ಕಾಲೇಜು ವಿದ್ಯಾರ್ಥಿಗಳು

Ad Widget

Ad Widget

Ad Widget

Ad Widget Ad Widget

ಪುತ್ತೂರು, ಎ.24 – ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ದಾಖಲೆಯ ಅಂತರದಿಂದ ಗೆಲ್ಲಿಸಬೇಕು. ಭಾರತೀಯ ಸೇನೆಯ ಗೋರ್ಖಾ ರೆಜಿಮೆಂಟಿನಲ್ಲಿ ದೇಶ ಸೇವೆ ಮಾಡಿ ಬಂದವರು. ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗಣ ಅಭಿವೃದ್ಧಿಯ ಬಗ್ಗೆ ದೊಡ್ಡ ಕನಸನ್ನು ಇಟ್ಟುಕೊಂಡ ವ್ಯಕ್ತಿ ನಮಗೆ ಅಭ್ಯರ್ಥಿಯಾಗಿ ಸಿಕ್ಕಿದ್ದಾರೆ. ರೆಕಾರ್ಡ್ ಮಾದರಿಯಲ್ಲಿ ಗೆಲ್ಲಿಸಿ ಮೋದಿಯವರ ಕೈಬಲಪಡಿಸಬೇಕು ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಪುತ್ತೂರಿನಲ್ಲಿ ರೋಡ್ ಶೋ ನಡೆಸಿದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೋದಿಯವರು ಮತ್ತೊಮ್ಮೆ ಪ್ರಧಾನಿ ಹೇಗೂ ಆಗುತ್ತಾರೆ ಎಂದು ಉದಾಸೀನ ತಾಳುವುದು ಬೇಡ. ಕಳೆದ ಬಾರಿ 79 ಪರ್ಸೆಂಟ್ ಓಟಿಂಗ್ ಆಗಿತ್ತು. ಅದನ್ನು ನಾವು 85 ಪರ್ಸೆಂಟ್ ಆಗುವಂತೆ ಮಾಡಬೇಕಾಗಿದೆ. ಗೆಲುವಿನ ಅಂತರವನ್ನು ದಾಖಲೆಯ ಮಟ್ಟಕ್ಕೆ ಒಯ್ಯಬೇಕಾಗಿದೆ. ಎಪ್ರಿಲ್ 19ರಂದು ಮೊದಲ ಹಂತದ ಓಟಿಂಗ್ ತಮಿಳುನಾಡು ಸೇರಿ ಕೆಲವು ಕಡೆ ಆಗಿದೆ. ಆದರೆ, 2019ಕ್ಕೆ ಹೋಲಿಸಿದರೆ ಈ ಬಾರಿ ಮೊದಲ ಹಂತದಲ್ಲಿ ಓಟಿಂಗ್ ಪರ್ಸೆಂಟ್ ಕಡಿಮೆಯಾಗಿದೆ. ಬಿಸಿಲು ಜಾಸ್ತಿಯಿದೆಯೆಂದು ನಾವು ಓಟ್ ಮಾಡದೇ ಇರುವುದಲ್ಲ.

Ad Widget

Ad Widget

ಯಾರಿಗೆಲ್ಲ ನಮ್ಮ ಪ್ರಧಾನಿ ಮೋದಿ ಮೇಲೆ ಪ್ರೀತಿ ಇದೆಯೋ ಅವರೆಲ್ಲ ಓಟ್ ಮಾಡಲೇಬೇಕಾಗಿದೆ. ಮೋದಿಯವರು 400 ಸ್ಥಾನಗಳನ್ನು ಗೆಲ್ಲಿಸುವ ಗುರಿ ನೀಡಿದ್ದಾರೆ. ಮುಂದಿನ 25 ವರ್ಷದ ಕನಸು ಇಟ್ಟುಕೊಂಡು ಮೋದಿ ಈ ಗುರಿ ಇಟ್ಟಿದ್ದಾರೆ. ನಾವೆಲ್ಲ ಮೋದಿಯವರ ಗುರಿ ಸಾಧನೆಗೆ ಬೆಂಬಲ ನೀಡಬೇಕಾಗಿದೆ. ಆದರೆ ಕಾಂಗ್ರೆಸಿನವರು ಚೊಂಬು ಹಿಡ್ಕೊಂಡು ಓಡಾಡುತ್ತಿದ್ದಾರೆ. ಮೋದಿಯವರು ಇಷ್ಟೊಂದು ಸಂಖ್ಯೆಯಲ್ಲಿ ಟಾಯ್ಲೆಟ್ ಕಟ್ಟಿಕೊಟ್ಟಿದ್ದಾರೆ, ಕಾಂಗ್ರೆಸ್ ಈಗಲೂ ಯಾಕೆ ಚೊಂಬು ಹಿಡ್ಕೊಂಡು ಹೋಗುತ್ತಿದ್ದಾರೆಂದು ಅರ್ಥವಾಗಲ್ಲ. ಕಾಂಗ್ರೆಸಿಗೆ ವಾರಂಟಿ ಇಲ್ಲ, ಅವರಿಗೆ ಗ್ಯಾರಂಟಿಯೂ ಇಲ್ಲ ಎಂದು ವ್ಯಂಗ್ಯವಾಡಿದರು.

Ad Widget

Ad Widget

Ad Widget

Ad Widget

ಸಿಂಗಂ’ ಕಾಣಲು ರೋಡ್ ಶೋದಲ್ಲಿ ಭಾಗಿಯಾದ ವಿದ್ಯಾರ್ಥಿಗಳು : ನಿವೃತ್ತ ಐಪಿಎಸ್ ಅಧಿಕಾರಿ ಸಿಂಗಂ ಖ್ಯಾತಿಯ ಅಣ್ಣಾಮಲೈಯನ್ನು ಕಾಣಲು ವಿದ್ಯಾರ್ಥಿಗಳ ದಂಡೆ ರೋಡ್ ಶೋದಲ್ಲಿ ಭಾಗವಹಿಸಿತ್ತು.

ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬ್ಯಾಗ್ ಸಮೇತ ದರ್ಬೆಯಿಂದಲೇ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಿಮ್ಮ ಉತ್ಸಾಹಕ್ಕೆ ಋಣಿಯಾಗಿದ್ದೇನೆ ; ಕ್ಯಾಪ್ಟನ್ ಬ್ರಿಜೇಶ್ ಚೌಟ

ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಇಷ್ಟೊಂದು ಬಿಸಿಲಿನ ನಡುವೆಯೂ ಉತ್ಸಾಹದಿಂದ ಸೇರಿದ ನಿಮ್ಮೆಲ್ಲರನ್ನು ನೋಡಿ ಹೆಮ್ಮೆಯಾಗುತ್ತಿದೆ. ಹಿಂದುತ್ವಕ್ಕಾಗಿ, ಪ್ರಧಾನಿ ಮೋದಿಗಾಗಿ, ಈ ದೇಶದ ಭವಿಷ್ಯಕ್ಕಾಗಿ ಪುತ್ತೂರಿನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದೀರಿ. ನಿಮ್ಮ ಉತ್ಸಾಹಕ್ಕೆ ಋಣಿಯಾಗಿದ್ದೇನೆ. ನಿಮ್ಮ ಆಶೋತ್ತರಗಳನ್ನು ಈಡೇರಿಸಲು ಕಟಿಬದ್ಧನಾಗಿದ್ದೇನೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಓಟಿಂಗ್ ಆಗುವಂತೆ ಸಂಕಲ್ಪ ಮಾಡೋಣ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಫೈರ್ ಬ್ರಾಂಡ್ ಮುಖಂಡ ಅರುಣ್ ಪುತ್ತಿಲ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರೋಡ್ ಶೋ ವಾಹನಲ್ಲಿ ಇದ್ದರು.

ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಕಡಬದ ಬಿಳಿನೆಲೆ ಶಾಲೆಯ ಹೆಲಿಪ್ಯಾಡ್ ಗೆ ಆಗಮಿಸಿದ ಅಣ್ಣಾಮಲೈ ಅವರನ್ನು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಸೇರಿದಂತೆ ಬಿಜೆಪಿ ನಾಯಕರು ಸ್ವಾಗತಿಸಿದರು. ಪುತ್ತೂರಿನಿಂದ ಮಂಗಳೂರಿಗೆ ಹಿಂತಿರುಗುವ ಸಂದರ್ಭದಲ್ಲಿ ಫರಂಗಿಪೇಟೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಕಾರ್ಯಕರ್ತರು ಅವಿರತ ಶ್ರಮ ಹಾಕಬೇಕಾಗಿದೆ ಎಂದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading