ಪುತ್ತೂರು: ಹಿರಿಯ ಪತ್ರಕರ್ತ ಬಿ. ಟಿ. ರಂಜನ್ ಅವರು ನಿಧನರಾಗಿ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂಸ್ಮರಣೆ ಕಾರ್ಯಕ್ರಮ ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ನಡೆಯಿತು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ ಶಶಿಧರ ಕುತ್ಯಾಳ, ಉಪಾಧ್ಯಕ್ಷ ಅಜಿತ್ ಕುಮಾರ್, ಕೋಶಾಧಿಕಾರಿ ಸಂಶುದ್ಧೀನ್ ಸಂಪ್ಯ, ಪ್ರೆಸ್ ಕ್ಲಬ್ ಮ್ಯಾನೇಜರ್ ಪ್ರವೀಣ್ ಬೊಳ್ವಾರು, ಪತ್ರಕರ್ತರಾದ ಸುಧಾಕರ ಸುವರ್ಣ, ರಾಜೇಶ್ ಪಟ್ಟೆ, ಪ್ರಸಾದ್ ಬಲ್ನಾಡು, ಕುಮಾರ್, ಅನೀಶ್ ಮತ್ತಿತರರು ಉಪಸ್ಥಿತರಿದ್ದರು.
ಹೊಸದಿಂಗತ ಪತ್ರಿಕೆಯ ಪುತ್ತೂರು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ರಂಜನ್ 2022ರ ಫೆ 6 ರಂದು ನಿಧನ ಹೊಂದಿದರು. ಅದಕ್ಕೂ ಮೊದಲು ಅವರು ಮುಂಗಾರು ಉದಯವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು. ಮೂರು ದಶಕಕ್ಕೂ ಅಧಿಕ ಕಾಲ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಅವರು ಪುತ್ತೂರು ಪತ್ರಕರ್ತರ ಸಂಘದ ಪ್ರಥಮ ಅಧ್ಯಕ್ಷರು ಆಗಿದ್ದರು.