ಬೆಂಗಳೂರು: ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

ತಾರೀಕು 2-2-2023 ನೇ ಗುರುವಾರ 2022-23ನೇ ಸಾಲಿನ ‘ಗಡಿನಾಡ ಚೇತನ’ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು. ಕಾಸರಗೋಡಿನ ಜಗದ್ಗುರು ಶಂಕರಾಚರ್ಯ ಸಂಸ್ಥಾನ, ಎಡನೀರು ಮಠಕ್ಕೆ ನಾಡೋಜ ಡಾ. ಕಯ್ಯಾರ ಕಿಯಣ್ಣ ರೈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಠದ ಪರವಾಗಿ ಮ್ಯಾನೇಜರ್ ರಾಜೇಂದ್ರ ಕಲ್ಲೂರಾಯ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭ ಮಹಾರಾಷ್ಟ್ರ ಗಡಿ ಭಾಗದ ಕನ್ನಡಪರ ಗಡಿನಾಡ ಹೋರಾಟಗಾರ ಶ್ರೀ ಎಂ.ಎಸ್ ಸಿಂಧೂರ, ಬೆಳಗಾವಿ ಭಾಗದ ಕನ್ನಡದ ಧ್ವನಿ ಶ್ರೀ ಅಶೋಕ್ ಚಂದರಗಿ ಅವರನ್ನು ಕೂಡಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಹಿರಿಯ ಸಾಹಿತಿ ಡಾ, ಚಂದ್ರಶೇಖರ ಕಂಬಾರ, ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ರಾಣಿ ಸತೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.