Connect with us

ದಕ್ಷಿಣ ಕನ್ನಡ

Janata Adalat ಫೆ.4 :  ಶಾಸಕರೊಂದಿಗೆ ರೋಟರಿ ಜನತಾ ಅದಾಲತ್ – ಪುತ್ತೂರಿನ ಅಭಿವೃದ್ಧಿ ಹಾಗೂ ಅಗತ್ಯಗಳ ಕುರಿತ ಸಾರ್ವಜನಿಕರ ಪ್ರಶ್ನೆಗಳಿಗೆ ಮಠಂದೂರು ಅವರಿಂದ ನೇರ ಉತ್ತರ

Ad Widget

Ad Widget

Ad Widget

Ad Widget Ad Widget

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗೆ ಆಗಿರುವ ಮುಂದಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಹಾಗೂ ಇನ್ನಿತರ  ಅಗತ್ಯಗಳಿಗೆ ಸಂಬಂದಿಸಿದ ಪ್ರಶ್ನೆಗಳು ಬೇಡಿಕೆಗಳು ಸಾರ್ವಜನಿಕರ ಬಳಿ ಇದ್ದರೇ , ಇದನ್ನು ನೇರವಾಗಿ ಜನ ಪ್ರತಿನಿಧಿಗೆ ಕೇಳುವ ಹಾಗೂ ಅವರಿಂದ ಉತ್ತರ ಪಡೆಯುವ ಅವಕಾಶವನ್ನು  ಪುತ್ತೂರಿನ ರೋಟರಿ ಕ್ಲಬ್‌  ಒದಗಿಸಿದೆ. ಫೆ. 4ರಂದು ಪುತ್ತೂರು ಜೈನ ಭವನದಲ್ಲಿ ನಡೆಯುವ ಈ ವಿನೂತನ ’ರೋಟರಿ ಜನತಾ ಅದಾಲತ್ʼ ಎಂಬ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲು ಶಾಸಕ ಸಂಜೀವ ಮಠಂದೂರು ಇರಲಿದ್ದಾರೆ.

Ad Widget

Ad Widget

Ad Widget

Ad Widget

Ad Widget

 ಕಾರ್ಯಕ್ರಮದಲ್ಲಿ ಶಾಸಕರದೊಂದಿಗೆ ಪ್ರಶ್ನಾವಳಿಗಾಗಿ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಪ್ರಶ್ನೆಗಳನ್ನು ಲಿಖಿತ ರೂಪದಲ್ಲಿ ಕೊಡುವಂತೆ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಪಿ.ಬಿ ಮತ್ತು ವೃತ್ತಿ ಸೇವಾ ನಿರ್ದೇಶಕರಾಗಿರುವ ವಾಮನ್ ಪೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Ad Widget

Ad Widget

ಅವರು ಪುತ್ತೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ,1965 ರಲ್ಲಿ ಪ್ರಾರಂಭಗೊಂಡ ಪ್ರತಿಷ್ಠಿತ ಅಂತರಾಷ್ಟ್ರೀಯ ಸಂಸ್ಥೆ ಮತ್ತೂರು ರೋಟರಿ ಕ್ಲಬ್ ಪುತ್ತೂರಿನ ಹಿರಿಯ ಗಣ್ಯ ವ್ಯಕ್ತಿಗಳ ದೂರದೃಷ್ಟಿಯಿಂದ ಹುಟ್ಟಿ ಬೆಳೆದು ತನ್ನದೇ ಆದ ಕೊಡುಗೆಯನ್ನು ಪುತ್ತೂರಿನ ಜನತೆಗೆ ನೀಡುತ್ತಾ ಬಂದಿದೆ.  1998ರಲ್ಲಿ ಆಗಿನ ರೋಟರಿ ಅಧ್ಯಕ್ಷ ಗಣಪತಿ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಆಗಿನ ಶಾಸಕ ವಿನಯ ಕುಮಾರ್ ಸೊರಕೆ, ಹಿಂದೆ ಸಂಸದರಾಗಿದ್ದ ಧನಂಜಯ ಕುಮಾರ್ ಅವರೊಂದಿಗೂ ಕೂಡಾ ಅದಾಲತ್ ಮಾಡುವ ಮೂಲಕ ಪುತ್ತೂರಿನ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡಲಾಗಿತ್ತು. ಇದೀಗ ಈಗಿನ ಶಾಸಕರಾಗಿರುವ ಸಂಜೀವ ಮಠಂದೂರು ಅವರ ಜೊತೆ ಅದಾಲತ್ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget

ಕಾರ್ಯಕ್ರಮ ಕೋರ್ಟ್ ಮಾದರಿಯಲ್ಲಿದ್ದು, ಸಂಜೆ ಗಂಟೆ 5 ರಿಂದ 7 ಗಂಟೆಯ ತನಕ ನಡೆಯಲಿದೆ. ಈಗಾಗಲೇ ಸುಮಾರು 35ಕ್ಕೂ ಅಧಿಕ ಲಿಖಿತ ಪ್ರಶ್ನೆಗಳು ಬಂದಿವೆ. ಅದನ್ನು ಕ್ರೋಢೀಕರಿಸಿ ಜೇಸಿಐಯ ರಾಷ್ಟ್ರೀಯ ತರಬೇತುದಾರ  ಕೃಷ್ಣಮೋಹನ್ ಅವರು ಅದಾಲತ್ ನಿರ್ವಹಣೆ ಮಾಡಲಿದ್ದಾರೆ.  ಹಿರಿಯ ನ್ಯಾಯವಾದಿ ರಾಮ ಮೋಹನ್ ರಾವ್ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

Ad Widget

Ad Widget

ಪತ್ರಿಕಾಗೋಷ್ಠಿಯಲ್ಲಿ ರೋಟರಿ ವಲಯ-5ರ ಸಹಾಯಕ ಗವರ್ನರ್ ಜಗಜೀವನ್ ದಾಸ್ ರೈ, ಕಾರ್ಯಕ್ರಮ ಸಂಯೋಜಕರಾದ ಶ್ರೀಕಾಂತ್ ಕೊಳತ್ತಾಯ, ಝೇವಿಯರ್ ಡಿಸೋಜ ಅವರು ಉಪಸ್ಥಿತರಿದ್ದರು.

Click to comment

Leave a Reply

ಮಂಗಳೂರು

Brijesh Chowta-ಕಾಂಗ್ರೆಸಿಗೆ ಮತ ನೀಡಿದರೆ ಎಸ್ಡಿಪಿಐ ಕೈ ಬಲಪಡಿಸಿದಂತೆ ; ಶಕ್ತಿನಗರ ಕಾಲ್ನಡಿಗೆ ರೋಡ್ ಶೋದಲ್ಲಿ ಕ್ಯಾ. ಬ್ರಿಜೇಶ್ ಚೌಟ

Ad Widget

Ad Widget

Ad Widget

Ad Widget Ad Widget

ಮಂಗಳೂರು, ಎ.24 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಚುನಾವಣಾ ಪ್ರಚಾರದ ಕೊನೆಯಲ್ಲಿ ಮಂಗಳೂರು ನಗರದ ಶಕ್ತಿನಗರದಲ್ಲಿ ಕಾಲ್ನಡಿಗೆಯಲ್ಲಿ ರೋಡ್ ಶೋ ನಡೆಸಿದ್ದಾರೆ. ಶಕ್ತಿನಗರದಿಂದ ನಾಲ್ಯಪದವು ಶತಮಾನೋತ್ಸವ ಶಾಲೆಯ ವರೆಗೂ ನೂರಾರು ಕಾರ್ಯಕರ್ತರ ಜೊತೆಗೆ ಕಾಲ್ನಡಿಗೆಯಲ್ಲಿ ಬಂದು ಮತಯಾಚನೆ ಮಾಡಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಇದೇ ವೇಳೆ ಮಾತನಾಡಿದ ಬ್ರಿಜೇಶ್ ಚೌಟ, ಜಿಲ್ಲೆಯಲ್ಲಿ ಬಿಜೆಪಿ ವಿರೋಧಿ ಶಕ್ತಿಗಳೆಲ್ಲ ಒಂದಾಗಿವೆ. ಎಸ್ಡಿಪಿಐ ಅವರಲ್ಲಿ ಅಭ್ಯರ್ಥಿ ಯಾರೆಂದು ಕೇಳಿದರೆ ಕಾಂಗ್ರೆಸ್, ಕಮ್ಯುನಿಸ್ಟರಲ್ಲಿ ಕೇಳಿದರೂ ಕಾಂಗ್ರೆಸ್ ಎಂದೇ ಹೇಳುತ್ತಾರೆ. ಕಾಂಗ್ರೆಸಿನವರಲ್ಲಿ ಕೇಳಿದರೆ ಅಭ್ಯರ್ಥಿ ಬಗ್ಗೆ ಸಂಶಯ ಇದೆ. ಅವರಲ್ಲೇ ಮನೆಯೊಂದು ಮೂರು ಬಾಗಿಲು ಎನ್ನುವ ರೀತಿ ಇದೆ. ಹೀಗಾಗಿ ಕಾಂಗ್ರೆಸಿಗೆ ಮತ ನೀಡಿದರೆ ಎಸ್ಡಿಪಿಐ ಕೈ ಬಲಪಡಿಸಿದಂತಾಗುತ್ತದೆ ಎಂದು ಹೇಳಿದರು.

Ad Widget

Ad Widget

ನೀವು ನೈಜ ದೇಶಭಕ್ತರು, ದೇಶಕ್ಕಾಗಿ ಮತ

Ad Widget

Ad Widget

ಬುಧವಾರ ಬೆಳಗ್ಗೆ ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆ, ಮುಕ್ಕ ಶ್ರೀನಿವಾಸ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿಯಿತ್ತ ಕ್ಯಾ. ಬ್ರಿಜೇಶ್ ಚೌಟ, ನಿಮಗೆ ರಾಷ್ಟ್ರಭಕ್ತಿ, ರಾಷ್ಟ್ರಸೇವೆಯ ಬಗ್ಗೆ ಪ್ರತ್ಯೇಕ ಹೇಳಬೇಕಾಗಿಲ್ಲ. ನೀವೇ ನೈಜ ದೇಶ ಭಕ್ತರು. ಕೊರೊನಾ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಬಲತುಂಬಿದವರು ವೈದ್ಯರು ಮತ್ತು ಆರೋಗ್ಯ ಸಿಬಂದಿ. ನಿಮ್ಮನ್ನು ಕೊರೊನಾ ವಾರಿಯರ್ಸ್ ಎಂಬುದಾಗಿ ಕೊಂಡಾಡಿದ್ದರು ಎಂದರಲ್ಲದೆ, ಪ್ರಧಾನಿಯನ್ನು ಮೂರನೇ ಬಾರಿಗೆ ಗದ್ದುಗೆ ಏರಿಸುವಲ್ಲಿ ನಿಮ್ಮ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.

Ad Widget

Ad Widget
Continue Reading

ಮಂಗಳೂರು

Congress roadshow-ಪಂಪ್’ವೆಲ್’ನಿಂದ ಕಣ್ಣೂರುವರೆಗೆ ಸಾಗಿದ ಕಾಂಗ್ರೆಸ್ ರೋಡ್ ಶೋ

Ad Widget

Ad Widget

Ad Widget

Ad Widget Ad Widget

ಮಂಗಳೂರು: ಲೋಕಸಭೆ ಚುನಾವಣೆಯ ಕೊನೆ ದಿನವಾದ ಬುಧವಾರ ಮಂಗಳೂರಿನ ಪಂಪ್’ವೆಲ್’ನಿಂದ ಕಣ್ಣೂರುವರೆಗೆ ರೋಡ್ ಶೋ ಜರಗಿತು.

Ad Widget

Ad Widget

Ad Widget

Ad Widget

Ad Widget

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಸದಸ್ಯ ಐವನ್ ಡಿಸೋಜಾ, ಕಾರ್ಪೋರೇಟರ್ ಗಳಾದ ಶಶಿಧರ್ ಹೆಗ್ಡೆ, ಅಶ್ರಫ್, ಕೇಶವ ಮರೋಳಿ, ನವೀನ್ ಡಿಸೋಜಾ, ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್ ದಾಸ್, ಪ್ರಮುಖರಾದ ಯು.ಟಿ. ಫರ್ಜಾನ್, ರವಿರಾಜ್ ಪೂಜಾರಿ, ರಮಾನಂದ್ ಪೂಜಾರಿ, ಸುನಿಲ್ ಪೂಜಾರಿ, ರಾಕೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Ad Widget

Ad Widget

ಗರೋಡಿ, ದರ್ಗಾ ಭೇಟಿ:
ರೋಡ್ ಶೋ ನಡುವೆ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಕಂಕನಾಡಿ ಬ್ರಹ್ಮಬೈದರ್ಕಳ ಗರೋಡಿ, ಅಡ್ಯಾರ್ ಕಣ್ಣೂರು ಶೇಖ್ ಯೂಸುಫ್ ಸಿದ್ದೀಕ್ ದರ್ಗಾ ಶರೀಫ್’ಗೆ ಭೇಟಿ ನೀಡಿದರು.

Ad Widget

Ad Widget

ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಬುಧವಾರ ಸಂಜೆ ಉರ್ವ, ಬಂದರು ಪ್ರದೇಶದಲ್ಲಿ ರೋಡ್ ಶೋ ನಡೆಸಿ, ಮತ ಯಾಚಿಸಿದರು.

Ad Widget

Ad Widget

ತೆರೆದ ವಾಹನದ ಮುಂಭಾಗದಿಂದ ಸಾಗುತ್ತಿದ್ದ ಕಾರ್ಯಕರ್ತರು, ಘೋಷಣೆಗಳನ್ನು ಕೂಗುತ್ತಾ ಸಾಗಿದರು. ನಾಸಿಕ್ ಬ್ಯಾಂಡ್ ಸದ್ದು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು.

Continue Reading

ರಾಜಕೀಯ

Belthangady-ಬೆಳ್ತಂಗಡಿ : ಸಿಗದ ಮೂಲಭೂತ ಸೌಕರ್ಯ – ನೋಟಾಗೆ ಮತ ಚಲಾಯಿಸಲು ಮಲೆಕುಡಿಯ ಸಮುದಾಯದ ನಿರ್ಧಾರ

Ad Widget

Ad Widget

Ad Widget

Ad Widget Ad Widget

ಬೆಳ್ತಂಗಡಿ: ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ತಾಲೂಕಿನ ನಾವೂರು ಗ್ರಾಮದ ಮೂಲ ನಿವಾಸಿ ಮಲೆಕುಡಿಯ ಸಮುದಾಯದವರು ತಮನ್ನು ಎಲ್ಲ ರಾಜಕೀಯ ಪಕ್ಷಗಳೂ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಈ ಬಾರಿ ನೋಟ ಚಲಾಯಿಸಲು ನಿರ್ಧರಿಸಿದ್ದು ಈ ಬಗ್ಗೆ ತಮ್ಮ ಗ್ರಾಮದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವೂರು ಗ್ರಾಮದ ಅಲ್ಯ, ಪುಳಿತ್ತಡಿ, ಎರ್ಮಲೆ ಮಂಜಲ, ಕುದ್ರೋಳಿ, ಕಾಸರೋಳಿ ಪರಿಸರದ ಆದಿವಾಸಿ ಕುಟುಂಬಗಳು ನೋಟಾ ಮತವನ್ನು ಚಲಾಯಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

22 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳು ಈ ಪರಿಸರದಲ್ಲಿ ಜೀವನ ನಡೆಸುತ್ತಿದ್ದು ಸುಮಾರು 100 ಮಂದಿ ಮತದಾರರಿದ್ದಾರೆ. ದಶಕಗಳಿಂದ ಈ ಜನರು ತಮ್ಮ ಪ್ರದೇಶಕ್ಕೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಒದಗಿಸುವಂತೆ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

Ad Widget

Ad Widget

ಕುದುರೇಮುಖ ರಾಷ್ಟ್ರೀಯ ಉದ್ಯಾನವದ ಒಳಗಿರುವ ಈ ಕುಟುಂಬಗಳಿಗೆ ಇನ್ನೂ ಯಾವುದೇ ಮೂಲಭೂತ ಸೌಲಭ್ಯಗಳು ಲಭಿಸಿಲ್ಲ. ಗ್ರಾಮಪಂಚಾಯತಿನಿಂದ ಆರಂಭಿಸಿ ಪ್ರಧಾನಿಯವರೆಗೆ ಎಲ್ಲರಿಗೂ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ. ತಮ್ಮ ಬೇಡಿಕೆಗಳಿಗೆ ಯಾವ ರಾಜಕೀಯ ಪಕ್ಷಗಳೂ ಸರಕಾರಗಳೂ ಸ್ಪಂದಿಸಲಿಲ್ಲ ಎಂಬುದು ಇಲ್ಲಿನ ಜನರ ಆರೋಪವಾಗಿದೆ. ಪುಳಿತ್ತಡಿ ಪರಿಸರದಲ್ಲಿ ಇನ್ನೂ ಕರೆಂಟ್ ಬಂದಿಲ್ಲ ಆದರೆ ಅವರ ಮನೆಗಳಲ್ಲೆಲ್ಲ ವಿದ್ಯುತ್ ಮೀಟರ್ ಅಳವಡಿಸಲಾಗಿದೆ.

Ad Widget

Ad Widget

2017ರ ವೇಳೆಗೆ ಏಕಾಏಕಿ ಗುತ್ತಿಗೆದಾರರು ಬಂದು ಇವರ ಮನೆಗಳಿಗೆ ಮೀಟರ್ ಅಳವಡಿಸಿದ್ದರು. ಮೀಟರ್ ಅಳವಡಿಸಿ ಆರು ವರ್ಷಗಳೇ ಕಳೆದಿದೆ ಎನ್ನುತ್ತಾರೆ ಇಲ್ಲಿನ ಜನರು. ಆದರೆ ಮತ್ತೆ ಯಾರೂ ಇತ್ತ ತಿರುಗಿ ನೋಡಿಲ್ಲ. ಅರಣ್ಯದ ನಡುವೆ ವಾಸಿಸುತ್ತಿರುವ ಈ ಜನರಿಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಕತ್ತಲಾದ ಮೇಲೆ ಇವರ ಬದುಕೇ ದುಸ್ತರ, ಕೃಷಿಗೆ ನೀರುಣಿಸಲೂ ಸಾಧ್ಯವಾಗದೆ ಇವರು ಸಂಕಷ್ಟದಲ್ಲಿದ್ದಾರೆ.

Ad Widget

Ad Widget

ಮೆಸ್ಕಾಂ ಅಧಿಕಾರಿಗಳು ಇಲ್ಲಿಗೆ ವಿದ್ಯುತ್ ಒದಗಿಸಲು ಈ ಬಗ್ಗೆ ಸರ್ವೆ ನಡೆಸಿದ್ದು 2017ರಲ್ಲಿ 46,81,398 ರೂಗಳ ಅಂದಾಜುಪಟ್ಟಿ ತಯಾರಿಸಿದ್ದರು. ಇದಕ್ಕೆ ಅರಣ್ಯ ಇಲಾಖೆಯ ಅನುಮೋದನೆ ಪಡೆಯಲು ನಿಗದಿತ ನಮುನೆಯಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ. ಆದರೆ ಈ ಆನ್ ಲೈನ್ ಅರ್ಜಿ ಏನಾಗಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading