ನವದೆಹಲಿ:2023-2024ನೇ ಸಾಲಿನ ಕೇಂದ್ರ ಬಜೆಟ್ (Central Budget) ಅನ್ನು ಬುಧವಾರ (ಫೆಬ್ರವರಿ 01) ಸಂಸತ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ಕೆಲವು ಜನಯೋಪಯೋಗಿ ಸರಕು ಸೇವೆಯಲ್ಲಿ ಇಳಿಕೆಯಾಗಿದ್ದು, ಕೆಲವು ವಸ್ತುಗಳ ಬೆಲೆ ಏರಿಕೆಯಾಗಿದೆ.
ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ್ದ ಒಟ್ಟು 5 ಬಜೇಟ್ ಸಮಯದ ವಿವರ ಇಲ್ಲಿದೆ: 2019-20ರ ಬಜೆಟ್ ನ್ನು ನಿರ್ಮಲ ಸೀತರಾಮನ್ 140 ನಿಮಿಷದಲ್ಲಿ ಮಂಡಿಸಿದ್ದರು, 20-21ನ್ನು 160 ನಿಮಿಷದಲ್ಲಿ, 21-22ನ್ನು 100ನಿಮಿಷದಲ್ಲಿ, 22-23 ನ್ನು 91 ನಿಮಿಷದಲ್ಲಿ, 2023-24ನ್ನು 87ನಿಮಿಷದಲ್ಲಿ ಮಂಡಿಸಿದ್ದಾರೆ.
ಯಾವುದು ಏರಿಕೆ, ಯಾವುದು ಇಳಿಕೆಯಾಗಿದೆ ಎಂಬ ವಿವರ ಇಲ್ಲಿದೆ:
ಚಿನ್ನ, ಬೆಳ್ಳಿ, ವಜ್ರ
*ಪ್ಲ್ಯಾಟಿನಮ್,
*ರೆಡಿಮೇಡ್ ಬಟ್ಟೆ
*ವಿದೇಶಿ ವಾಹನಗಳ ಆಮದು ದುಬಾರಿ
*ಸಿಗರೇಟ್
*ಕೊಡೆ, ಲೌಡ್ ಸ್ಪೀಕರ್ಸ್
*ಹೆಡ್ ಫೋನ್, ಸೋಲಾರ್ ಸೆಲ್ಸ್
*ಸೋಯಾ ಪ್ರೋಟೀನ್
*ಸಂಸ್ಕರಿಸದ ಸಕ್ಕರೆ
*ಕಬ್ಬಿಣ
*ಕೋಕೊ ಬೀಜ
*ಆಟೋ ಮೊಬೈಲ್ಸ್
*ಎಲೆಕ್ಟ್ರಿಕ್ ವಾಹನ
*ಸೈಕಲ್
*ಆಟಿಕೆಗಳು
ಯಾವುದು ಅಗ್ಗ?
*ಮೊಬೈಲ್
*ಕ್ಯಾಮರಾ ಲೆನ್ಸ್
*ಟಿವಿ
*ಬ್ಲೆಂಡೆಡ್ ಸಿಎನ್ ಜಿ
*ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿ
*ಸಿಲಿಂಗ್ ಫ್ಯಾನ್
*ತಂಬಾಕು ಉತ್ಪನ್ನ
*ಚಪ್ಪಲಿ, ಲೆದರ್ ಶೂ
*ಎಕ್ಸರೇ ಯಂತ್ರಗಳು
*ಆಮದು ಮಾಡಿಕೊಂಡ ರಬ್ಬರ್
ರಾಜ್ಯಕ್ಕೇನು ಕೊಡುಗೆ ..?
ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ₹5300 ಕೋಟಿ ನೀಡಲಾಗಿದೆ. ಬಜೆಟ್ ಘೋಷಣೆ ಸಂದರ್ಭ ದೇಶದಲ್ಲಿ ಕೇವಲ ಕರ್ನಾಟಕದ ಹೆಸರು ಮಾತ್ರ ಹೇಳಲಾಗಿದೆ.