ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆದ 30ನೇ ವರ್ಷದ ಕೋಟಿ-ಚೆನ್ನಯ್ಯ ಕಂಬಳ (Puttur Kambala) ಕೂಟ ಯಶಸ್ವಿಯಾಗಿ ನಡೆದಿದ್ದು, ಇದೀಗ ಅಲ್ಲಿಗೆ ಆಗಮಿಸಿದ್ದ ನಟಿ ಸಾನ್ಯ ಅಯ್ಯರ್ (Sanya Iyer) ಜೊತೆ ಯಾರೋ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವರದಿಗಳು ಹರಿದಾಡುತ್ತಿದೆ. ಬಾರಿ ಯಶಸ್ವಿಯಾಗಿ ನಡೆದ ಕಂಬಳ ಕೂಟದಲ್ಲಿ ನಡೆದ ಅಹಿತಕರ ಘಟನೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ ಆಯೋಜಕರು, ಆಯೋಜಕರ ವಿರುದ್ದವೇ ಕೇಳಿ ಬರುತ್ತಿರುವ ಅಪಪ್ರಚಾರದ ವಿರುದ್ಧ ದೇವಳದಲ್ಲಿ ನಡೆ ಪ್ರಾರ್ಥನೆಗೆ ನಿರ್ಧರಿಸಿದ್ದಾರೆ.
ನಟಿ ಸಾನ್ಯ ಅಯ್ಯರ್ ಜೊತೆ ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಕಂಬಳ ಗದ್ದೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುವ ವರದಿಗಳು ಹಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ.
ಈ ವಿಚಾರವಾಗಿ ನಟಿಯೂ ಬೆಂಗಳೂರಿನಲ್ಲಿ ಸ್ಪಷ್ಟಿಕರಣ ಕೊಟ್ಟಿದ್ದು, ಆಯೋಜಕರು ನನ್ನನ್ನು ಗೌರವಯುತವಾಗಿ ಕಳಿಸಿಕೊಟ್ಟಿದ್ಧಾರೆ ಎಂದಿದ್ದು, ದಕ್ಷಿಣ ಕನ್ನಡ ಎಸ್ಪಿ ಸೋನಾವಾಲಾ ಯಾವೂದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಸಭಾ ಕಾರ್ಯಕ್ರಮ ಮುಗಿಸಿ ವಾಪಸ್ಸು ಹೋಗಿದ್ದ ನಾನು ಆಯೋಜಕರಿಗೆ ಮಾಹಿತಿ ನೀಡದೇ ಕಂಬಳ ವೀಕ್ಷಿಸಲು ವಾಪಸ್ಸು ಬಂದಾಗ ನಶೆಯಲ್ಲಿದ್ದ ವ್ಯಕ್ತಿ ಸ್ನೇಹಿತೆಯರಿಗೆ ಕಿರುಕುಳ ನೀಡಿದ್ದ – ಆಯೋಜಕರು ಆರೋಪಿ ಪತ್ತೆಗೆ- ನಮ್ಮ ಸುರಕ್ಷತೆಗೆ ಗರಿಷ್ಠ ಸಹಕಾರ ನೀಡಿದ್ದಾರೆ : ಪುತ್ತೂರು ಕಂಬಳದ ಘಟನೆ ಬಗ್ಗೆ ನಟಿ ಸಾನ್ಯ ಅಯ್ಯರ್ ಸ್ಪಷ್ಟನೆ
ಕಂಬಳ ಕೂಟ ಬಹಳ ಯಶಸ್ವಿಯಾಗಿ ಜರಗಿದ್ದು, ಲಕ್ಷಾಂತರ ಜನ ಪುತ್ತೂರು ಕಂಬಳ ಕೂಟವನ್ನು ವೀಕ್ಷಿಸಲು ಸೇರಿದ್ದರು. ವಿದೇಶಿಗರು, ಹೊರ ರಾಜ್ಯದವರು, ಹೊರ ಜಿಲ್ಲೆಯವರು , ಕೊಲ್ಕತ್ತ ವಾಲಿಬಾಲ್ ತಂಡ ಈ ಬಾರಿಯ ಕಂಬಳ ವೀಕ್ಷಿಸಲು ಪುತ್ತೂರಿಗೆ ಬಂದಿದ್ದರು. ಕಂಬಳ ಕೂಟದಲ್ಲಿ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಆಯೋಜಕರು ಮತ್ತು ಕಂಬಳ ಆಯೋಜಕರ ವಿರುದ್ಧ ಕೆಲವರು ಮಾಡುತ್ತಿರುವ ಅಪಪ್ರಚಾರ ಹಾಗೂ ಆಧಾರರಹಿತ ಆರೋಪ ಬಗ್ಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಸಲು ನಿರ್ಧರಿಸಿದೆ.
ಸಮಿತಿ ಸದಸ್ಯರು ಈ ಬಗ್ಗೆ ಒಳಿತು ಕೆಡುಕು ನಿರ್ಧರಿಸುವ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿದಿಯಲ್ಲಿ ನಡೆ ಪ್ರಾರ್ಥನೆ ಮತ್ತು ಕಂಬಳ ಮುಗಿದ ನಂತರ ವರ್ಷಂಪ್ರತಿಯಂತೆ ನಡೆಯುವ ವಿಶೇಷ ಪೂಜೆ ನಡೆಸಲು ಫೆ.1ರಂದು ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದಲ್ಲಿ ಸೇರಬೇಕಾಗಿ ಕೋಟಿ-ಚೆನ್ನಯ ಕಂಬಳ ಸಮಿತಿ ಪುತ್ತೂರು ಇದರ ಅಧ್ಯಕ್ಷರಾದ ಎನ್.ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯುವ ನಡೆ ಪ್ರಾರ್ಥನೆಗೆ ವಿಶೇಷವಾದ ಮಹತ್ವವಿದೆ.