Cyber Blackmail : ಖಾಸಗಿ ವಿಡಿಯೋ ರಿಲೀಸ್‌ ಮಾಡುವುದಾಗಿ ಆಗಂತುಕ ಇನ್ ಸ್ಟಾಗ್ರಾಂ ಖಾತೆದಾರನ ಬ್ಲ್ಯಾಕ್‌ ಮೇಲ್‌ ಗೆ ಬೆದರಿ ಬೆಳ್ತಂಗಡಿಯ ವಿದ್ಯಾರ್ಥಿ  ಆತ್ಮಹತ್ಯೆ

WhatsApp Image 2023-01-31 at 09.53.22
Ad Widget

Ad Widget

Ad Widget

Cyber Blackmail  ಬೆಳ್ತಂಗಡಿ: ಜ 31 :  ಇನ್ ಸ್ಟಾಗ್ರಾಂ ಖಾತೆಯ ( Instagram)  ಮೂಲಕ ಬ೦ದ ಬೆದರಿಕೆಗೆ ( Blackmail)  ಹೆದರಿ ವಿದ್ಯಾರ್ಥಿಯೊಬ್ಬ ಮನನೊಂದು ಆತ್ಮಹತ್ಯೆಗೆ (Sucide)  ಶರಣಾದ ಘಟನೆ ಜ.30ರಂದು ನಡೆದಿದೆ. ಧರ್ಮಸ್ಥಳದ ಅಶೋಕ್ ನಗರದ ನಿವಾಸಿ, ಬೆಳ್ತಂಗಡಿಯ ಕಾಲೇಜೊಂದರಲ್ಲಿ 2 ನೇ ವರ್ಷದ ಪದವಿ ತರಗತಿ ವ್ಯಾಸಂಗ ಮಾಡುತ್ತಿದ್ದ ಹರ್ಷಿತ್(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

Ad Widget

ಹರ್ಷಿತ್ ಗೆ ಸುಮಾರು 15 ದಿನಗಳ ಹಿಂದೆ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪರಿಚಿತ ವ್ಯಕ್ತಿಯು ಸಂಪರ್ಕಕ್ಕೆ ಬಂದಿದ್ದು ಚಾಟಿಂಗ್ ಮಾಡಿ, ಮೊಬೈಲ್ ಗೆ ವಿಡಿಯೋ ಕಾಲ್ ಮಾಡಿ ಮಾತನಾಡಿ, ನಿನ್ನ ವೈಯಕ್ತಿಕ ವಿಡಿಯೋ ( Private Video)  ನನ್ನ ಬಳಿ ಇದ್ದು, ಇದನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತೇನೆ ಎಂದು ಬೆದರಿಸಿದ್ದಾನೆ.

Ad Widget

Ad Widget

Ad Widget

ಅಗಂತುಕ ದುಷ್ಕ್ರಮಿಯೂ  ವಿಡಿಯೋ ವೈರಲ್ ಮಾಡಬಾರದು ಎಂದಾದರೆ 11,000 ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದನು. ಆತನ ಬೆದರಿಕೆಗೆ ಹೆದರಿದ ಯುವಕ, ಹಣ ನೀಡಲು ಜ.23ರ ವರೆಗೆ ಸಮಯ ಕೇಳಿದ್ದ. ಆದರೆ ಹರ್ಷಿತ್ಗೆ ಜ.24 ಮಧ್ಯಾಹ್ನದ ವರೆಗೂ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ.

Ad Widget

ದುಷ್ಕರ್ಮಿಯಿಂದ ಒತ್ತಡ ಹೆಚ್ಚಾದಾಗ ಜ 24 ರ ಮಧ್ಯಾಹ್ನ   ಹರ್ಷಿತ್‌ ಇಲಿ ಪಾಷಾಣವನ್ನು ಸೇವಿಸಿದ್ದಾನೆ.  ಬಳಿಕ ಅಸ್ವಸ್ಥಗೊಂಡ ಈತನನ್ನು ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು.

Ad Widget

Ad Widget

 ಅಲ್ಲಿ ಆದರೆ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಲ್ಯಾಕ್‌ ಮೇಲ್‌ ಮಾಡಿದ ದುಷ್ಕರ್ಮಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: