ಪುತ್ತೂರು: ತನ್ನ ಪ್ರಿಯತಮೆಯನ್ನು ಪ್ರೀತಿಸಬಾರದೆಂದು ಒತ್ತಾಯಿಸಿ ಯುವತಿಯ ಮಾಜಿ ಪ್ರಿಯಕರ ಯುವಕ ಹಾಗೂ ಆತನ ಸ್ನೇಹಿತನ ಮೇಲೆ ನಡೆಸಿರುವುದಾಗಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಂಗಳೂರು ಬಾಪೂಜಿ ನಗರದ ಸಾಗರ್ (23) ಹಾಗೂ ದುರ್ಗಾ ಪ್ರಸಾದ್ ಹಲ್ಲೆಗೊಳಗಾದವರಾಗಿದ್ದಾರೆ.
ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್ ಮತ್ತು ಹೇಮಂತ್ ಆರೋಪಿಗಳು.
ಜ.29ರಂದು ಸಾಗರ್ ತನ್ನ ಪ್ರಿಯತಮೆ ವೇರಿನಾ ಎಂಬಾಕೆಯ ಜತೆ ಪುತ್ತೂರಿನ ಸಾರ್ವಜನಿಕ ಸ್ಥಳವೊಂದರಲ್ಲಿದ್ದ ಸಂಭಾಷಣೆಯಲ್ಲಿ ನಿರತರಾಗಿದ್ದಾಗ ಕೌಶಿಕ್ ಎಂಬಾತ ಆಗಮಿಸಿ ಆಕ್ಷೇಪಿಸಿದ್ದಾನೆ. ವೇರಿನಾಳನ್ನು ತಾನು ಪ್ರೀತಿಸುತ್ತಿದ್ದು, ಆಕೆಯ ಸಹವಾಸವನ್ನು ತೊರೆಯಬೇಕೆಂದು ಕೌಶಿಕ್
ಈ ವೇಳೆ ಸಾಗರ್ ಗೆ ತಾಕೀತು ಮಾಡಿದ್ದಾನೆ.
ಹಾಗೂ ಈ ಕುರಿತು ಚರ್ಚಿಸಲು ಏಳ್ಮುಡಿಗೆ ಬರುವಂತೆ ಸೂಚಿಸಿದ್ದಾನೆ.
ಅದರಂತೆ ಸಾಗರ್ ಮತ್ತು ದುರ್ಗಾಪ್ರಸಾದ್ ವೇರಿನಾಳ ಜತೆ ಅಲ್ಲಿಗೆ ಹೋಗಿದ್ದು ಅಲ್ಲಿ ಸುಮಾರು 6-7 ಜನ ಇವರಿಗೆ ಕಾಯುತ್ತಿದ್ದರು. ಅಲ್ಲು ಕೆಲ ಹೊತ್ತು ಮಾತಿನ ಚಕಮಕಿ ನಡೆದ ಬಳಿಕ ಎಲ್ಲರೂ ಬಲ್ನಾಡಿನ ನಿರ್ಜನ ಸ್ಥಳವೊಂದರಲ್ಲಿ ಚರ್ಚಿಸಲು ಮುಂದಾಗಿದ್ದಾರೆ.
ಅದರಂತೆ ಆಲ್ಟೋ ಕಾರು, ಎರಡು ದ್ವಿಚಕ್ರ ವಾಹನದಲ್ಲಿ ಬಲ್ನಾಡಿಗೆ ಹೋಗಿದ್ದು, ಅಲ್ಲಿ ಹಲ್ಲೆ ನಡೆಸಿ ವೇರಿನಾಳನ್ನು ಪ್ರೀತಿಸಬಾರೆಂದು ಬೆದರಿಸಿದ್ದು, ಬಿಡಿಸಲು ಬಂದ ದುರ್ಗಾ ಪ್ರಸಾದ್ ರವರಿಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ
ಬೊಬ್ಬೆಗೆ ನೆರೆಕರೆಯವರು ಓಡಿ ಬರುವುದನ್ನು ಕಂಡು ವೇರಿನಾಳ ಸುದ್ದಿಗೆ ಬಂದಲ್ಲಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.