Ad Widget

ಪೊಲೀಸ್‌ ಅಧಿಕಾರಿಗಳ ವಿರುದ್ದ ಭ್ರಷ್ಟಾಚಾರದ ದೂರು – ಮಂಗಳೂರು ಪೊಲೀಸ್ ಕಮೀಷನರ್ ಗೆ ಲೋಕಾಯುಕ್ತ ನೋಟಿಸ್

WhatsApp Image 2023-01-29 at 09.38.59
Ad Widget

Ad Widget

Ad Widget

ಮಂಗಳೂರು: ನಗರದ ಉಳ್ಳಾಲ ಪೋಲೀಸ್ ಠಾಣೆಯ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರಿಗೆ ಲೋಕಾಯುಕ್ತದಿಂದ ನೋಟಿಸ್ ಜಾರಿಯಾಗಿದೆ. 2023ರ ಫೆ.14 ರ ಒಳಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಪೊಲೀಸ್ ಕಮೀಷನರ್ ಅವರಿಗೆ ಸೂಚಿಸಲಾಗಿದೆ.

Ad Widget

Ad Widget

Ad Widget

Ad Widget

ಉಳ್ಳಾಲ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂದೀಪ್ ಜಿ.ಎಸ್. ಮತ್ತು ಅಲ್ಲಿನ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ವಿರುದ್ಧ ಸಾಮಾಜಿಕ ಕಾರ್ಯಕರ್ತರಾದ, ಉಳ್ಳಾಲದ ನಿವಾಸಿಯಾಗಿರುವ ಮೊಹಮ್ಮದ್ ಕಬೀರ್ ಎಂಬುವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಈ ಇಬ್ಬರೂ ಅಧಿಕಾರಿಗಳು ಭ್ರಷ್ಟಾಚಾರಿಗಳಾಗಿದ್ದು, ಇಬ್ಬರ ಮೇಲೆ ಕ್ರಮ ಜರುಗಿಸಬೇಕು ಎಂದು ಅವರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿಯಾಗಿದೆ. ಕಳೆದ ವರ್ಷ ಈವರೆಗೆ ಈ ಇಬ್ಬರೂ ತನಿಖೆಗಳ ವರದಿ ಸಲ್ಲಿಸಬೇಕು ಹಾಗೂ ಆ ಪ್ರಕರಣಗಳ ಎಲ್ಲಾ ದಾಖಲೆಗಳನ್ನೂ ನೀಡಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

Ad Widget

Ad Widget

Ad Widget

Ad Widget

 ಲೋಕಾಯುಕ್ತ ದೂರಿನಲ್ಲಿ ಕಬೀರ್ ಅವರು ಈ ಇಬ್ಬರೂ ಅಧಿಕಾರಿಗಳ ಮೇಲೆ ಕೆಲವು ಗುರುತರ ಆರೋಪಗಳನ್ನು ಮಾಡಿದ್ದಾರೆ. ಗಾಂಜಾ ಮಾಫಿಯ, ಮರಳು ಮಾಫಿಯಾದಾರರಿಂದ ಹಣವನ್ನು  ಸಂಗ್ರಹಿಸಲಾಗುತ್ತಿದೆ ಇನ್ನು, ಹೊಟೇಲ್ ಮಾಲೀಕರಿಂದ ಕೂಡ ಹಣ ವಸೂಲಿ ನಡೆಸುತ್ತಿದ್ದಾರೆ. ಚಿನ್ನದ ಅಂಗಡಿ ದರೋಡೆ ಕೇಸ್ ನಲ್ಲಿ ಜಪ್ತಿ ಮಾಡಿದ ಚಿನ್ನ ಮತ್ತು ಬೆಳ್ಳಿಯನ್ನು ಇನ್ಸ್ ಪೆಕ್ಟರ್ ಸಂದೀಪ್ ಎಗರಿಸಿದ್ದಾರೆಂದು ಅವರು ಆರೋಪಿಸಿದ್ದಾರೆ.

ಹಣ ಪಡೆಯಲು ಠಾಣೆಯಲ್ಲೇ ಖಾಸಗಿ ಏಜೆಂಟ್!?

ಉಳ್ಳಾಲ ಠಾಣೆಗೆ ವರ್ಗಾವಣೆಯಾಗಿ ಬಂದ ನಂತರ ಈ ಇಬ್ಬರೂ ಹಣ ಮಾಡುವುದರಲ್ಲಿ ನಿರತರಾಗಿದ್ದು, ಇಬ್ಬರೂ ಈಗ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಠಾಣೆಯಲ್ಲಿ ತಮ್ಮ ಕೈಯ್ಯಾರೆ ಲಂಚ ತೆಗೆದುಕೊಳ್ಳುತ್ತಿಲ್ಲ. ದಂಧೆಯ ಹಣವನ್ನು ವಸೂಲಿ ಮಾಡಲೆಂದೇ ಠಾಣೆಯಲ್ಲೇ ಹಮೀದ್ ಎಂಬ ಒಬ್ಬ ಏಜೆಂಟ್ ನನ್ನು ನೇಮಕ ಮಾಡಿಕೊಂಡಿದ್ದಾರೆ. ಲಂಚ ಪಡೆಯಲೆಂದೇ ಒಬ್ಬ ಏಜೆಂಟ್ ನನ್ನು ಠಾಣೆಯಲ್ಲಿ ಇರಿಸಿದ್ದಾರೆ. ಆತನ ಮೂಲಕ ಹಣದ ವ್ಯವಹಾರವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಮೀಷನರ್ ವಿರುದ್ಧವೂ ಆರೋಪ

ಮಂಗಳೂರು ಪೊಲೀಸ್ ಕಮೀಷನರ್ ಆದ ಶಶಿಕುಮಾರ್ ಅವರಿಗೆ ತಿಳಿದಿದೆ. ಆದರೂ ಅವರು ಸುಮ್ಮನಿದ್ದಾರೆ. ಹಾಗಾಗಿ, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಕಬೀರ್ ಅವರು ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ, ಕರ್ನಾಟಕ ಲೋಕಾಯುಕ್ತ ನಿಯಮಗಳ ಕಲಂ.9 ರಡಿಯಲ್ಲಿ ತನಿಖೆ ನಡೆಸುವುದು ಸೂಕ್ತ ಎಂದು ನಿರ್ಧರಿಸಿ ನೋಟಿಸ್ ಜಾರಿ ಮಾಡಿದೆ.

Ad Widget

Ad Widget
Ad Widget

Leave a Reply

Recent Posts

error: Content is protected !!
%d bloggers like this: