ಹೊಸದಿಲ್ಲಿ, ಜ.21: ರಾಷ್ಟ್ರರಾಜಧಾನಿಯಲ್ಲಿ ನಡೆದ ಗಣರಾಜ್ಯೋತ್ಸವ (Republic Day Parad) ಪರೇಡ್ನಲ್ಲಿ ನೌಕಾಪಡೆಯ (Navy) 144 ಯೋಧರ ತುಕಡಿಯ ನೇತೃತ್ವವನ್ನು ಮಂಗಳೂರಿನ ಲೆ.ಕಮಾಂಡರ್ ದಿಶಾ ಅಮೃತ್ ವಹಿಸಿದ್ದರು.
ಮೂಲತಃ ಮಂಗಳೂರಿನ ಬೋಳೂರು ಸಮೀಪದ ತಿಲಕ ನಗರ ನಿವಾಸಿಯಾದ ದಿಶಾ ಅಮೃತ್ ಪ್ರಸಕ್ತ ಅಂಡಮಾನ್ ನಿಕೋಬಾರ್ನಲ್ಲಿ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದಾರೆ.
ಪರೇಡ್ನಲ್ಲಿ ತಮ್ಮ ಪುತ್ರಿ ನೌಕಾಪಡೆ ತುಕಡಿಯ ನೇತೃತ್ವ ವಹಿಸಿ ಹೆಜ್ಜೆಹಾಕುವುದನ್ನು ವೀಕ್ಷಿಸಲೆಂದು ಅವರ ಹೆತ್ತವರಾದ ಅಮೃತಕುಮಾರ್ ಹಾಗೂ ಲೀಲಾ ದಂಪತಿ ದಿಲ್ಲಿ ಗೆ ತೆರಳಿದ್ದರು.