Gold And Silver Price : ಬೆಂಗಳೂರು: ಜ : 27: ನವರಾತ್ರಿ ದಸಾರ ಹಬ್ಬದ ಬಳಿಕ ಏರ ತೊಡಗಿದ ಚಿನ್ನದ ದರ ಪ್ರತಿ ದಿನ ಗಗನ ಮುಖಿಯಾಗುತ್ತಿದೆ. ಸದ್ಯ ದೇಶದಲ್ಲಿ ಮದುವೆ ಸೀಸನ್ ಆರಂಭಗೊಂಡಿದ್ದು, ಆಭರಣ ಪ್ರಿಯರ ಜೇಬು ಸುಡುವಂತೆ ಮಾಡಿದೆ. ಶುಕ್ರವಾರ ಮತ್ತೆ ಹಳದಿ ಲೋಹದ ದರದಲ್ಲಿ ಏರಿಕೆ ಕಂಡಿದೆ. ಇತ್ತ ಬೆಳ್ಳಿ ಬೆಲೆಯೂ ಹೆಚ್ಚಳವಾಗಿದೆ.
ದೃಢವಾದ ಜಾಗತಿಕ ದರಗಳ ಬೆಂಬಲದೊಂದಿಗೆ ಭಾರತೀಯ ಫ್ಯೂಚರ್ ಮಾರುಕಟ್ಟೆಗಳಲ್ಲಿ ಶುಕ್ರವಾರ ಚಿನ್ನದ ಬೆಲೆಗಳು ಮತ್ತೊಮ್ಮೆ ದಾಖಲೆಯ ಮಟ್ಟಕ್ಕೆ ತಲುಪಿವೆ. ಎಂಸಿಎಕ್ಸ್‌ನಲ್ಲಿ ಗೋಲ್ಡ್ ಫ್ಯೂಚರ್ಸ್ ದಿನದ ಗರಿಷ್ಠ ಮಟ್ಟದಲ್ಲಿ ಶೇ. 0.3ರಷ್ಟು ಏರಿಕೆ ಕಂಡು 10 ಗ್ರಾಂಗೆ 56,850 ರೂ.ಗೆ ಏರಿಕೆಯಾಗಿವೆ. ಮತ್ತು ಬೆಳ್ಳಿಯು ಕೆಜಿಗೆ 68,743 ರೂ.ಗೆ ಏರಿಕೆ ಕಂಡಿತ್ತು.
ಮುಂದಿನ ದಿನಗಳಲ್ಲಿ ಚಿನ್ನದ ದರ ಹೇಗಿರಲಿದೆ ?
ಡಾಲರ್ ಮತ್ತು ಅಮೆರಿಕದ ಟ್ರೆಷರಿ ಇಳುವರಿಯಲ್ಲಿನ ಕುಸಿತದಿಂದ ನವೆಂಬರ್ ಆರಂಭದಿಂದಲೂ ಚಿನ್ನದ ಬೆಲೆ ಏರುತ್ತಲೇ ಇದೆ. ನವೆಂಬರ್ ಆರಂಭದಿಂದ ಇಲ್ಲಿಯವರೆಗೆ ಮೂರು ತಿಂಗಳಲ್ಲಿ ಚಿನ್ನದ ಬೆಲೆ ಸುಮಾರು 6,000 ರೂ.ನಷ್ಟು ಏರಿಕೆ ಕಂಡಿದೆ.
“ಪ್ರಸಕ್ತ ವರ್ಷ ಚಿನ್ನದ ದರ ಏರುಗತಿಯಲ್ಲಿಯೇ ಮುಂದುವರಿಯಲಿದೆ. ಬಡ್ಡಿ ದರವು ಅಮೆರಿಕದಲ್ಲಿ ಇಳಿಕೆಯಾಗುವ ಅವಕಾಶಗಳಿವೆ. ಹೀಗಾಗಿ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದು. ಹೀಗಾಗಿ ಚಿನ್ನದ ದರ ಇನ್ನಷ್ಟು ಹೆಚ್ಚಳವಾಗಬಹುದು,” ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.
ಬೆಂಗಳೂರಿನಲ್ಲಿ ಎಷ್ಟಿದೆ ದರ?
ಶುಕ್ರವಾರ 22 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 400 ರೂ. ಏರಿಕೆಯಾದರೆ, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 440 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 100 ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನಕ್ಕೆ 10 ಗ್ರಾಂಗೆ 57,110 ರೂ. ದರವಿದೆ. ಅಂದರೆ ಪ್ರತಿ ಗ್ರಾಂಗೆ 5,711 ರೂ. ದರವಿದೆ. ಆಭರಣ ಚಿನ್ನ ಅಂದರೆ 22 ಕ್ಯಾರಟ್ ಚಿನ್ನಕ್ಕೆ 52,300 ರೂ. ದರವಿದೆ. ಅಂದರೆ ಪ್ರತಿ ಗ್ರಾಂಗೆ 5,230 ರೂ. ದರವಿದೆ.
ಇದರಲ್ಲಿ ಶೇ. 3 ಜಿಎಸ್‌ಟಿ ಹಾಗೂ ತಯಾರಿ ವೆಚ್ಚಗಳು, ವೇಸ್ಟೇಜ್ ಸೇರಿರುವುದಿಲ್ಲ. ಇವುಗಳನ್ನೂ ಲೆಕ್ಕ ಹಾಕಿದಾಗ ಆಭರಣ ಚಿನ್ನದ ದರ ಮತ್ತೂ ಜಾಸ್ತಿಯಾಗುತ್ತವೆ. ಚಿನ್ನದ ದರಗಳು ಬೇರೆ ಬೇರೆ ಊರುಗಳಿಗೆ, ಚಿನ್ನದ ಅಂಗಡಿಗಳಿಂದ ಅಂಗಡಿಗಳಿಗೆ ಬದಲಾಗುತ್ತವೆ. ಆದರೆ ಹೆಚ್ಚು ಕಡಿಮೆ ಇದೇ ದರವಿರುತ್ತದೆ. ಅಲ್ಪ ಬದಲಾವಣೆಯಷ್ಟೇ ಇರುತ್ತದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
ಚೆನ್ನೈ – 53,800 ರೂ.
ಮುಂಬೈ- 53,100 ರೂ.
ದೆಹಲಿ- 53,250 ರೂ.
ಕೊಲ್ಕತ್ತಾ- 53,100 ರೂ.
ಬೆಂಗಳೂರು- 53,150 ರೂ.
ಹೈದರಾಬಾದ್- 53,100 ರೂ.
ಕೇರಳ- 53,100 ರೂ.
ಪುಣೆ- 53,100 ರೂ.
ಮಂಗಳೂರು- 53,150 ರೂ.
ಮೈಸೂರು- 53,150 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
ಚೆನ್ನೈ- 57,930 ರೂ.
ಮುಂಬೈ- 57,930 ರೂ.
ದೆಹಲಿ- 58,080 ರೂ.
ಕೊಲ್ಕತ್ತಾ- 57,930 ರೂ.
ಬೆಂಗಳೂರು- 57,980 ರೂ.
ಹೈದರಾಬಾದ್- 57,930 ರೂ.
ಕೇರಳ- 57,930 ರೂ.
ಪುಣೆ- 57,930 ರೂ.
ಮಂಗಳೂರು- 57,980 ರೂ.
ಮೈಸೂರು- 57,980 ರೂ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
ಬೆಂಗಳೂರು- 75,000 ರೂ.
ಮೈಸೂರು- 75,000 ರೂ.
ಮಂಗಳೂರು- 75,000 ರೂ.
ಮುಂಬೈ- 72,600 ರೂ.
ಚೆನ್ನೈ- 75,000 ರೂ.
ದೆಹಲಿ- 72,600 ರೂ.
ಹೈದರಾಬಾದ್- 75,000 ರೂ.
ಕೊಲ್ಕತ್ತಾ- 72,600 ರೂ.