Ad Widget

ಎಚ್.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಬಿಜೆಪಿಗೆ ಬಂದರೆ ಸ್ವಾಗತ ಅವರಿಗೆ ಟಿಕೆಟ್ ಗ್ಯಾರಂಟಿ : ಸಿ.ಟಿ ರವಿ

InShot_20230127_185503903
Ad Widget

Ad Widget

ಚಿಕ್ಕಮಗಳೂರು: ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದರೆ ಟಿಕೆಟ್ ಕೊಡಲು ಸಿದ್ಧ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

Ad Widget

Ad Widget

Ad Widget

Ad Widget


ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ಹಾಸನ ಕ್ಷೇತ್ರದಿಂದ ತಾನೇ ಜೆಡಿಎಸ್ ಅಭ್ಯರ್ಥಿ ಎಂದು ಸಹೋದರಿ ಭವಾನಿ ರೇವಣ್ಣ ಹೇಳಿದ್ದಾರೆ. ಆದರೆ ಅಲ್ಲಿ ಬೇರೆ ಅಭ್ಯರ್ಥಿ ನಿಲ್ಲಿಸುವ ಬಗ್ಗೆ ಕುಮಾರಸ್ವಾಮಿ ಹೇಳಿದ್ದಾರೆ. ಭವಾನಿ ಅವರು ಬಿಜೆಪಿಗೆ ಬಂದರೆ ಅವರಿಗೆ ಸ್ವಾಗತ. ಅವರು ಬಂದಲ್ಲಿ ಹೊಳೆನರಸಿಪುರದಿಂದ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೇವೆ ಎಂದರು.

Ad Widget

Ad Widget

Ad Widget

Ad Widget


ಭವಾನಿ ಅವರಿಗಿಂತ ಒಳ್ಳೆ ಅಭ್ಯರ್ಥಿ ಹೊಳೆನರಸಿಪುರಕ್ಕೆ ಬೇರಾರಿಲ್ಲ. ಅವರು ಪಕ್ಷಕ್ಕೆ ಬಂದಲ್ಲಿ ಖಂಡಿತಾ ಈ ಆಫರ್ ರನ್ನು ಅವರಿಗೆ ನೀಡುತ್ತೇವೆ.

ರೇವಣ್ಣ ಮತ್ತು ಭವಾನಿ ಅವರ ನಡುವೆ ಗಲಾಟೆ ಹಚ್ಚುವ ಕೆಲಸಕ್ಕೆ ನಾನು ಮುಂದಾಗುವುದಿಲ್ಲ. ಹಾಸನದ ರಾಜಕೀಯವನ್ನು ಹತ್ತಿರದಿಂದ ನೋಡಿದ್ದೇನೆ ಎಂದವರು ತಿಳಿಸಿದರು.

Ad Widget

Ad Widget
Ad Widget

Leave a Reply

Recent Posts

error: Content is protected !!
%d bloggers like this: