ಪುತ್ತೂರು: ಉದ್ಯಮಿ , ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಉಪಾಧ್ಯಕ್ಷ ಶಿವರಾಮ್ ಆಳ್ವ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಮಾನಸಿಕ ದಿವ್ಯಾಂಗರ ಆಶ್ರಮದಲ್ಲಿ ಆಚರಿಸುವ ಮೂಲಕ ಸರಳತೆ ಮೆರೆದರು.
‘ಪ್ರಜ್ಞಾ ಮಾನಸಿಕ ವಿಕಲಚೇತನರ ಆಶ್ರಮ’ ಬಿರುಮಲ ಗುಡ್ಡದಲ್ಲಿ ವಿಕಲ ಚೇತನರೊಂದಿಗೆ ಸಹ ಭೋಜನ ಮಾಡುವ ಮೂಲಕವಾಗಿ ಸರಳ ರೀತಿಯಲ್ಲಿ ಆಚರಿಕೊಂಡರು.

ಆಶ್ರಮದ ದಿವ್ಯಾಂಗ ಮಕ್ಕಳಿಗೆ ವಿಶೇಷ ಉಡುಗೊರೆ ಪ್ಯಾಕ್ ಕೊಟ್ಟು ,ಅವರೊಂದಿಗೆ ಕೇಕ್ ಕತ್ತರಿಸಿ, ಬಂದಿರುವ ಎಲ್ಲಾ ಅತಿಥಿಗಳ ಜೊತೆ ಅವರೊಂದಿಗೆ ಊಟೋಪಚಾರ ಮಾಡುವ ಮೂಲಕ ಸರಳ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದರು.

ವಿಕ್ರಾಂತ್ ರೋಣ ಸಿನಿಮಾ ನಿರ್ದೇಶಕ ಅನುಪ್ ಭಂಡಾರಿ, ನಟ ಸುರೇಶ್ ರೈ, ಮಾಜಿ ಶಾಸಕಿ ಶಕುಂತಲ ಶೆಟ್ಟಿ, ಮಂಗಳೂರಿನ ಉದ್ಯಮಿ ಉಮೇಶ್ ನಾಡಾಜೆ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಈಶ್ವರ ಭಟ್ ಪಂಜಿಗುಡ್ಡೆ, ಬಿಜೆಪಿ ನಾಯಕ ರಾಧಾಕೃಷ್ಣ ರೈ ಬೂಡಿಯಾರು ಹಾಗೂ ಶಿವರಾಮ್ ಆಳ್ವರ ಕುಟುಂಬಸ್ಥರು ಹಾಗೂ ಎಲ್ಲಾ ಆತ್ಮೀಯರು ಈ ಸಂದರ್ಭ ಆಶ್ರಮದಲ್ಲಿ ಇದ್ದರು.

ಸಂಜೆ ಕಂಬಳ ಕೂಟ ನಡೆಯುವ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿಯೂ ಕಂಬಳ ಸಮಿತಿಯವರ ಎದುರು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು.




