ಪುತ್ತೂರು: ಆರ್.ಎಸ್.ಎಸ್ ನ ಘೋಷ್ ಪಂಡಿತರೆಂದೇ ಕರೆಯುತಿದ್ದ, ಕುಟುಂಬ ಪ್ರಭೋಧನ್ ಸಂಯೋಜಕರು ಕೆದಿಲ ಗ್ರಾಮದ ಬಡೆಕ್ಕಿಲ ನಿವಾಸಿ ಬಡೆಕ್ಕಿಲ ಶಂಕರ ಭಟ್ (70) ಹೃದಯಾಘಾತದಿಂದ (Heart Attack) ಜ.25ರಂದು ಬೆಂಗಳೂರಿನ ಪುತ್ರಿ ಮನೆಯಲ್ಲಿ ನಿಧನರಾಗಿದ್ದಾರೆ. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಕೆನರಾ ಬ್ಯಾಂಕಿನ ನಿವೃತ್ತ ಉದ್ಯೋಗಿ ಇವರು ಬಾಲ್ಯದಿಂದಲೇ ಕೆದಿಲದಲ್ಲಿ ರಾಷ್ಟ್ರೀಯಸ್ವಯಂಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿ ಸಂಘದ ವಿವಿದ ಜವಾಬ್ದಾರಿಗಳನ್ನು ನಿರ್ವಹಿಸಿ, ನಿವೃತ್ತಿ ಜೀವನದ ನಂತರ ಸಂಪೂರ್ಣ ಸಂಘಕಾರ್ಯಗಳಿಗೆ ಮುಡಿಪಾಗಿಟ್ಟು, ವಿಶೇಷವಾಗಿ ಸಂಘದ ಪುತ್ತೂರು ಜಿಲ್ಲೆಯ ವಿವಿಧೆಡೆ ಘೋಷ್ ಅಧ್ಯಯನಕ್ಕೆ ಒತ್ತುಕೊಟ್ಟು, ಹಲವಾರು ಸ್ವಯಂಸೇವಕರನ್ನು ಬೆಳೆಸಿದ್ದರು.
ಹಲವು ಸ್ವಯಂಸೇವಕರಿಗೆ ಘೋಷ್ ತರಬೇತಿ ಕೊಟ್ಟಿದ್ದರು. ಜಿಲ್ಲೆಯ ವ್ಯವಸ್ಥಾ ಪ್ರಮುಖರಾಗಿದ್ದರು.
ಇತ್ತಿಚೆಗೆ ಉದ್ಘಾಟನೆಗೊಂಡ ಪುತ್ತೂರಿನ ಆರ್.ಎಸ್.ಎಸ್ ನ ಕಚೇರಿ ಪಂಚವಟಿಯ ಧಾರ್ಮಿಕ ವಿಧಿವಿಧಾನದಲ್ಲಿಯೂ ಪತಿಪತ್ನಿ ಸಮೇತರಾಗಿ ಪಾಲ್ಗೊಂಡಿದ್ದರು.
ಮೃತದೇಹ ಬೆಂಗಳೂರಿನಿಂದ ಪುತ್ತೂರಿಗೆ ಬಂದು ಬಡೆಕ್ಕಿಲ ಮನೆಯಲ್ಲಿ ಅಂತ್ಯಸಂಸ್ಕಾರ ನಡೆಯಿತು.